ಕಾಣದ ಕವಿತೆ ಅಡಗಿದೆ ಒಳಗೆ
ಬಾರದೆ ಹೊರಗೆ ಕಾದಿದೆ ಯಾರಿಗೆ?
ಕಾಯುತ ಕಾಯುತ ನಿನ್ನಿ ಹಾದಿಗೆ...
ಕವಿತೆಯ ಅರ್ಥ ಮರೆತೇ ಹೋಗಿದೆ :(

ಕಾಣದ ಕವಿತೆ ಅಡಗಿದೆ ಒಳಗೆ
ಬರೆಯುತ ಬರೆಯುತ ಮನಸಿನ ಒಳಗೆ
ಮಾಡಿದೆ ಗಾಯ ಕಾಣದ ಕಣ್ಣಿಗೆ ...
ಮನಸಿನ ಅರ್ಥ ಆಗದೆ ಕಣ್ಣಿಗೆ??

ಕಾಣದ ಕವಿತೆ ಅಡಗಿದೆ ಒಳಗೆ
ಹುಡುಕುತ ಹೋದರೆ ಹುಡುಗಿಯ ಕಡೆಗೆ!!
ಅವಳಲೇ ಕಂಡೆ ಕಾಣದ ಕವಿತೆ
ಅವಳನೇ ನೋಡುತ ನನ್ನೇ ಮರೆತೇ!!!!!!!!!!!!