ಗೆಳೆಯರೆ!

ನೀವು ೧೮.೦೩.೦೯ ರಾತ್ರಿ ಪ್ರಸಾರವಾದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೋಡಿದಿರಾ? ಎಚ್.ಐ.ವಿ ಕಾರ್ಯಕರ್ತರು ಭಾಗವಹಿಸಿದ್ದ ಈ ಕಾರ್ಯಕ್ರಮವು ಮಾಹಿತಿಪೂರ್ಣವಾಗಿತ್ತು.

೧೯.೦೩.೦೯ ರಾತ್ರಿ ೯.೩೦ಕ್ಕೆ ಚಂದನದಲ್ಲಿ ಪ್ರಸಾರವಾಗಲಿರುವ ಕಂತನ್ನು ನೋಡಲು ಮರೆಯದಿರಿ. ಇದೂ ಸಹಾ ಎಚ್.ಐ.ವಿ-ಏಡ್ಸ್ ಕುರಿತಂತಹ ಕಾರ್ಯಕ್ರಮ. ವಿಶೇಷವೇನೆಂದರೆ ಇದರಲ್ಲಿ ಎಚ್.ಐ.ವಿ ಪಾಸಿಟಿವ್ ಆಗಿರುವ ಮೂವರು ಭಾಗವಹಿಸುತ್ತಿದ್ದಾರೆ.

ಶಾಂತ ಎನ್ನುವ ಮಹಿಳೆ ಕಳೆದ ೧೩ ವರ್ಷದಿಂದ ಎಚ್.ಐ.ವಿ ಪಾಸಿಟಿವ್! ಇಂದಿಗೂ ಯಾವ ಔಷಧವನ್ನು ತೆಗೆದುಕೊಳ್ಳುತ್ತಿಲ್ಲ. ಆದರೂ ಆರೋಗ್ಯವಾಗಿದ್ದಾಳೆ. ಎಲ್ಲವೂ ಸಕಾರಾತ್ಮಕ ಮನೋಭಾವದ ಫಲ ಎನ್ನುತ್ತಾರೆ. ಉಳಿದ ಇಬ್ಬರಲ್ಲಿ ಒಬ್ಬರು ೭ ವರ್ಷಗಳಿಂದ ಪಾಸಿಟಿವ್ ಆಗಿದ್ದರೆಮ ತ್ತೊಬ್ಬರು ೪ ವರ್ಷಗಳಿಂದ ಪಾಸಿಟಿವ್!

ಇವರ ಮಾತುಕತೆ, ಅರಿವು, ಆತ್ಮವಿಶ್ವಾಸ ಕೇವಲ ಎಚ್.ಐ.ವಿ ಜನರಿಗೆ ಮಾತ್ರವಲ್ಲ, ಜನಸಾಮಾನ್ಯರಿಗೂ ಅಪ್ಪರ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ನೀಡಬಲ್ಲುದು. 

ಥಟ್ ಅಂತ ಹೇಳಿ ಸರಣಿಯ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದೆ.

ಈ ಕಾರ್ಯಕ್ರಮವನ್ನು ನೋಡಿ. ನಿಮ್ಮ ಅನಿಸಿಕೆಯನ್ನು ಎರಡು ಸಾಲುಗಳಲ್ಲಿ ಬರೆದು ತಿಳಿಸಿ.

-ನಾಸೋ