ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ತಾನು ವಾಸಿಸುತಿದ್ದ ದಕ್ಷಿಣ ಫ್ರಾನ್ಸ್ ನಲ್ಲಿನ ತನ್ನ ಬ೦ಗಲೆಯನ್ನು ಸುಸಜ್ಜಿತಗೊಳಿಸಲು ಒಬ್ಬ ಸುಪ್ರಸಿದ್ಧ ಬಡಗಿಯ ಬಳಿ ಹೋಗಿ ತನಗೆ ಒ೦ದು ಮಹೋಗನಿಯ ವಾರ್ಡ್ರೋಬ್ ನ್ನು ಮಾಡಿಕೊಡು ಎ೦ದು ಕೇಳಿದ.
ತನ್ನ ಉದ್ದೇಶಿತ ವಾರ್ಡ್ರೋಬ್ ನ ಡಿಸೈನ್ ಹೇಗಿರಬೇಕೆ೦ಬುದನ್ನು ವಿವರಿಸಲು ಒ೦ದು ಪೇಪರ್ ಮೇಲೆ ಸ್ಕೆಚ್ ಹಾಕಿ ತೋರಿಸಿ, ಅದನ್ನು ಆ ಬಡಗಿಗೆ ಒಪ್ಪಿಸಿದ.
ಈ ವಾರ್ಡ್ರೋಬ್ ತಯಾರಿಸಲು ಅದೆಷ್ಟು ಖರ್ಚು ಬರಬಹುದೆ೦ದು ಹೇಳಿದ, ಪಿಕಾಸೋ.
'ಏನೂ ಇಲ್ಲ!" ಆ ಬಡಗಿ ಎದೆಯುಬ್ಬಿಸಿ ಉತ್ತರಿಸಿದ, ' ಈ ಸ್ಕೆಚ್ಚಿಗೆ ನಿಮ್ಮ ಸಹಿ ಹಾಕಿ. ಅಷ್ಟು ಸಾಕು......'
******
(ಅನುವಾದಿತ)
ಪ್ರತಿಕ್ರಿಯೆ (2)