ಇತ್ತೀಚೆಗೆ ಸದಸ್ಯರೊಬ್ಬರು ಬೇರೊಂದು ಕನ್ನಡ ವೆಬ್ಸೈಟಿನಿಂದ ಬೇರೆ ಲೇಖಕರು ಬರೆದ ಲೇಖನಗಳನ್ನು ಕಾಪಿ ಮಾಡಿ ಸಂಪದಕ್ಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಪದದ ಸಮುದಾಯಕ್ಕೆ ಕೆಟ್ಟ ಹೆಸರು ತರಬಹುದಾದ ಕೆಲಸ ಇದು. ಹೀಗೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈಗಿನಂತೆ ashok14 ಎಂಬ ಐಡಿಯನ್ನು ಹಾಗೂ ಆ ಐಡಿಯಿಂದ ಸೇರಿಸಿದ ಎಲ್ಲ ಲೇಖನಗಳನ್ನೂ 'ಸಂಪದ'ದಿಂದ ತೆಗೆದುಹಾಕಲಾಗಿದೆ. ಹೀಗೆ plagiarism ಮಾಡುತ್ತಿರುವುದು ಕಂಡುಬಂದಲ್ಲಿ ಸದಸ್ಯರು, ಓದುಗರು ತಪ್ಪದೆ ನಿರ್ವಾಹಕ ತಂಡದ ಗಮನಕ್ಕೆ ತನ್ನಿ.