೩

ಇನ್ಸ್ಪ್ಟೆಕ್ಟರ್: ಲೋ ಕರಿಯಪ್ಪ, ಯಾರೋ ಅದು ಒಳಗೆ ಹಾಕಿದೀಯ?

ಕಾ.ಕ: ಅದೂ, ಅನುಮಾನದ ಮೇಲೆ ಅರೆಷ್ಟ್ ಮಾಡೀನಿ ಸಾ...

ಇನ್ಸ್ಪ್ಟೆಕ್ಟರ್: ಏನೋ ನಿನ್ನ ಅನುಮಾನ?

ಕಾ.ಕ: ಅವ್ನು ಮಾಮೂಲು ಕೊಡ್ತಾನೋ ಇಲ್ಲ್ವೋ ಅನ್ನೋದೇ ಅನುಮಾನ!!

೪

 ಕಾ.ಕ: ಲೇ, ಕಳ್ಳ ಬಡ್ಡೀಮಗನೆ, ಸಿಕ್ಕಾಕೊಂಡ್ಯಲ್ಲ ನ್ನನ ಕೈಲಿ. ನಡಿ ನಿಂಗೆ ಮಾಡ್ತೀನಿ.

ಕಳ್ಳ: ಅಯ್ಯಯ್ಯೋ.... ಹೊಡಿಬೇಡಿ ಸಾ

ಕಾ.ಕ: ಯಾಕೋ ಬರ್ತಾ ಬರ್ತಾ ಬರೀ ದೇವಸ್ಥಾನಗಳಲ್ಲೇ ಕಳತೀಯ?

ಕಳ್ಳ: ವಯಸ್ಸಾಯ್ತು ಸಾ, ರಾಮ, ಕೃಷ್ಣ ಅಂತ ದೇವಸ್ಥಾನಗಳಲ್ಲೇ ಕಾಲ ಕಳೀತೀನಿ ಸಾ...