ಝೀ ಕನ್ನಡ ವಾಹಿನಿಯ ದಿಬ್ಬಣ ಧಾರಾವಾಹಿಯ ಸುಧೇಶ್ ಮಹಾನ್ ರಚಿಸಿದ ಈ ಶೀರ್ಷಿಕೆ ಗೀತೆ ಬಹಳ ದಿನದಿಂದ ಕಾಡುತ್ತಿದೆ. ಹಾಡಿದವರು ಯಾರೊ ಗೊತ್ತಿಲ್ಲ ಆದರೆ ಅದ್ಭುತವಾಗಿಯಂತೂ ಹಾಡಿದ್ದಾರೆ!! ನಿಮಗೂ ಇಷ್ಟವಾಗಬಹುದು...
ಭಾವದೊಳು ಹುಟ್ಟಿ
ಭವವನೆ ಮೆಟ್ಟಿ
ಪೊರೆ ಕಳೆದು ಕುಣಿಯುವುದು
ಜೀವ ಜಂತು
ಕತ್ತಲೊಳಗಿನ ಕಾವ್ಯ
ಇರುಳ ಎದೆಯನೆ ಬಗಿದು
ನೆನಪ ನೆತ್ತರ ಕುಡಿದು
ಬಸಿರಾತದು ಎಂತು
ಗರ್ಭದಾಳದ ಮಣ್ಣು
ಬಿಸಿಯುಸಿರ ಹಾಲು
ಎದೆಯ ಕಾವಲಿ ಹೂವ
ಅರಳಿಸುವ ಮಾಯೆ
ನೆಲ ಮುಗಿಲ
ಕರುಳ ಬಳ್ಳಿ ತಾಯೆ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!