ಇದುವರೆಗೆ ತರಕಾರಿ ಚಿತ್ರಗಳನ್ನು ಹಾಕಿದ್ದೆ. ಇಲ್ಲಿ ಕೆಲವು ಹಣ್ಣುಗಳನ್ನೂ ಬೆಳೆಯುತ್ತಾರೆ. ಅದರಲ್ಲಿ ಮುಖ್ಯವಾಗಿ ಸ್ಟ್ರಾಬೆರಿ, ಬುಶ್ಬೆರಿ, ಬ್ಲೂಬೆರಿ, ಚೆರಿ, ದ್ರಾಕ್ಷಿ, ಪೀಚ್, ಪ್ಲಮ್, ಏಪ್ರ್ರಿಕಾಟ್ ಮುಂತಾದವು.

ಚಿತ್ರ: ಸ್ಟ್ರಾಬೆರಿ ಬೆಳೆದಿರುವುದು. ಈ ಹಣ್ಣುಗಳು ಕೆಳಮುಖವಾಗಿ ಬಿಡುವುದರಿಂದ (ಸಣ್ಣ ಗಿಡಗಳಲ್ಲಿ) , ನೆಲಕ್ಕೆ ಹಣ್ಣು ತಾಗಿ ಕೆಡದಿರಲೆಂದು ಒಂದು ಪ್ಲಾಸ್ಟಿಕ್ ಶೀಟ್ ಮೊದಲು ಹಾಕಿ , ಮಧ್ಯದಲ್ಲಿ ಒಂದು ತೂತಮಾಡಿ, ಅದರಿಂದ ಗಿಡ ಹೊರಗೆ ಬರುವಂತೆ ಮಾಡಿರುತ್ತಾರೆ. ಈ ಹಣ್ಣು ಇಲ್ಲಿಯ ಫ್ರೂಟ್ ಬೌಲ್ ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು.

ಚಿತ್ರ ಕೃಪೆ: ಡಾ. ಕೃಷ್ಣ ಸುಬ್ಬರಾವ್.

(ಚಿತ್ರಪಟದಲ್ಲಿ ಇನ್ನೊಂದು ಚಿತ್ರ ಹಾಕಿದ್ದೇನೆ).

(ಮುಂದಿನ ಚಿತ್ರ ವಾರಾಂತ್ಯದ ನಂತರ)