(26th National Kannada Conference at New-Delhi), ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು !

ತುಮಕೂರು ವಿಶ್ವವಿದ್ಯಾಲಯದ ಮಾಜೀ ಕುಲಪತಿ, ಪ್ರೊ. ಓ. ಅನಂತರಾಮಯ್ಯನವರು, ಸಂಗೀತ ವಿದ್ಯಾಲಯದ ಜಂಟೀ ಪ್ರಾಂಶುಪಾಲರಾದ, ಶ್ರೀ. ನಾಗಭೂಷಣರಿಗೆ ಶಾಲುಹೊದಿಸಿ ಸನ್ಮಾನಮಾಡುತ್ತಿದ್ದಾರೆ.

ಮುಂಬೈಕರರ ಹೆಮ್ಮೆಯ ಸಂಸ್ಥೆಯಾದ, "ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ " ಇನ್ನೂ ಹೆಚ್ಚು ಹೆಚ್ಚು ಯುವಪ್ರತಿಭೆಗಳನ್ನು ನಮ್ಮ ಭಾರತೀಯ ಸಮಾಜಕ್ಕೆ ತರಲೆಂದು ಸಂಪದೀಯರ ಪರವಾಗಿ, ಶುಭಹಾರೈಕೆಗಳನ್ನು ಅರ್ಪಿಸಿತ್ತೇನೆ.