ಕನ್ನಡ ಸೇವೆಗೆ

ಕೆಲವರು ನುಡಿವರು ಒತ್ತಾಯಿಸಿ ಕನ್ನಡದೇಳಿಗೆಗೆ
ಇತರರ ಪ್ರೋತ್ಸಾಯಿಸಿ ಎತ್ತಿಡಿದು ಕನ್ನಡ ದೀವಿಗೆ
ಆಡುತ ಬೇಡುತ ಕನ್ನಡಭಾಷೆಯ ಮುನ್ನಡೆ ಸೇವೆಗೆ
ಪರಪ್ರಭಾವಕೆ ಆಹುತಿ ತಡೆಯಲು ಕನ್ನಡದುಳಿಗೆ.
*
ಇದುವರೆಗದೆಲ್ಲ ಕಲ್‍ಮಳೆಯಂತೆ ಹನಿಹನಿ,
ಅಲ್ಲಿಲ್ಲೊಂದು ತುಂತುರು ಬಿಡಿಬಿಡಿ ದ್ವನಿ,
ಸರ್ವರ ಸಂಯುಕ್ತ ಕ್ರ‍ಾಂತಿಯ ಕೂಗಿಲ್ಲ,
ಕಪಟರೊ ಮೂಡರೊ ರಾಜಕಾರಣಿಗಳೆಲ್ಲ?
*
ರಾಜ್ಯ ಜನುಮದಿನೋತ್ಸವದಿ ಹೊಗಳಿಕೆ ಆಡಿ
ವಿಜಯ ದಿನವೆಂದು ಘೋಷಿಸಿ ದಿನವೆರಡು
ನಡೆದಿಹುದು ದಶಾನುವರ್ಷಳಿಂದ ಅದೇನಡಿ
ಉಳಿದುದೆಲ್ಲ ರಾಜಕೀಯರ ಬರಿ ಶೂನ್ಯನುಡಿ
*
ಐವತ್ತು ವರುಷಗಳಲಿ ಐದಾರು ಕೂಡ ನಡೆಸಿಲ್ಲ
ಸುಧಾರಣೆ ಶಾಸನಗಳು ಜಾರಿಗೆ ಬರಲಿಲ್ಲ,
ಕನ್ನಡಭಾಷೆಯ ಏಳಿಗೆಗೆ ಅವಶ್ಯ ಪರಿಷ್ಕರಣ
ಇದುವರೆಗಾದುದೆಲ್ಲ ಕೇವಲ ಟೊಳ್ಳು ಹಗರಣ.
*
ವಿದ್ಯಾಭಾಸ ವಿಭಾಗಕೆ ಮೂರಾರು ಮಂತ್ರಿಗಳು,
ದುರಭ್ಯಾಸಗಳವರ ನೂರಾರು ಕುತಂತ್ರಗಳು,
ಮಹಾಯೋಜನೆ ಒಂದೂ ಇಲ್ಲ, ಇದುವರೆಗೆ ಮಾಡಿಲ್ಲ,
ಮಹಾಭಾಷೆ ಕನ್ನಡ ಮೇಲೇರಿಸೆ ಏಳಿಗೆ ನಡೆದಿಲ್ಲ.

- ವಿಜಯಶೀಲ
*