ಗಂಧರ್ವ ಗಿರಿಯಲಿ ನೆಲೆ ನಿಂತಿಹ
ದುರ್ಗಾದೇವಿಗೆ ನಮನ
ಕಾಂತಿಯ ಚೆಲ್ಲುತ ಭಕ್ತರ ಕಾಯುವ
ಮಮತಾ ಮೂರ್ತಿಗೆ ನಮನ
ಪರಶುರಾಮರಿಗೊಲಿದ ದೇವಿಯೇ
ಮಧ್ವ ಕರ ಪೂಜಿತೆ ಸಿರಿ ದೇವಿಯೇ
ನಮಿಪೆವು ನಾವು ಮುದದಿಂದಲಿ
ಶ್ರೀ ಕುಂಜಾರುಗಿರಿಯ ವನದುರ್ಗೆಯೇ
ನವರಾತ್ರಿಯಲಿ ವಿಧ ವಿಧ ಪೂಜೆ
ಶೃಂಗಾರದಿ ನೀ ಕೈಗೊಳ್ಳುವೆ
ನಿನ್ನ ದರುಶನದಿ ಜನ್ಮ ಪಾವನವಿಂದು
ಭಕ್ತಿ ತುಂಬಿಹ ಸೇವೆಯು ನಿನಗರ್ಪಣೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!