ಮೈಸೂರ್ ಅಸೋಸಿಯೇಷನ್ ನಲ್ಲಿ ’ಗಝಲ್ ಕಾರ್ಯಕ್ರಮ’
ಮುಂಬೈನಲ್ಲಿ ’ಕೈಲಾಸಂ ನಾಟಕೋತ್ಸವ’ ಮೈಸೂರ್ ಅಸೋಸಿಯೆಷನ್ ನಲ್ಲಿ ಜರುಗಿತು.

’ಸಂಪದ’ ಸಜ್ಜಾಗುತ್ತಿದ್ದಾಗ, ಆದ ಹಲವಾರು ವಿದ್ಯಮಾನಗಳು, ಸಹಜವಾಗಿ ನಡೆದವು. ಅವುಗಳನ್ನು ಚಿಕ್ಕದಾಗಿ ಹೀಗೆ ದಾಖಲಿಸಬಹುದು.
೧. ಮುಂಬೈನಲ್ಲಿ ಹರಿಕಥಾವಲ್ಲಭ, ’ದಿ. ಗುರುರಾಜನಾಯ್ಡು” ರವರ ಮಗಳು, ’ಶೋಭಾನಾಯ್ಡು’ ರವರ ಹರಿಕಥಾ ಕಾರ್ಯಕ್ರಮಗಳು ಮುಂಬೈನ ಹಲವೆಡೆ ಜರುಗಿದವು. ಶೋಭಾ, ತಮ್ಮ ತಂದೆಯವರ ಸ್ಮರಣಾರ್ಥವಾಗಿ ಒಂದು ಭವನವನ್ನು ನಿರ್ಮಿಮಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ನಮ್ಮೆಲ್ಲರ ಶುಭ ಕಾಮನೆಗಳು.
೨. ಮುಂಬೈನಲ್ಲಿ ’ಕೈಲಾಸಂ ನಾಟಕೋತ್ಸವ’ ಮೈಸೂರ್ ಅಸೋಸಿಯೆಷನ್ ನಲ್ಲಿ ಜರುಗಿತು. ೩ ದಿನ ನಡೆದ ಈ ಉತ್ಸವದಲ್ಲಿ ಅವರ ನಾಟಕ, ’ಹುತ್ತದಲ್ಲಿ ಹುತ್ತ,’ ನಾಟಕ ಪ್ರದರ್ಶನವಿತ್ತು. ಅದಲ್ಲದೆ, ಒಂದು ಕಾರ್ಯಾಗಾರವಿತ್ತು. ಅದರಲ್ಲಿ, ಶ್ರೀ. ಮಂಜುನಾಥಯ್ಯ, ಮತ್ತು ಹಲವಾರು ಕೈಲಾಸಂ ನಾಟಕ ಪ್ರೇಮಿಗಳು ಪಾಲ್ಗೊಂಡಿದ್ದರು.
೩. ಮುಂಬೈನಲ್ಲಿ ಲೋಕಲ್ ಟ್ರೇನ್ ವಿಚಿತ್ರವಾದ ಅಪಘಾತಕ್ಕೆ ಒಳಗಾಗಿ, ಇಬ್ಬರ ಪ್ರಾಣವನ್ನು ನುಂಗಿತು. ಇದು ಅಕ್ಟೋಬರ್ ತಿಂಗಳಲ್ಲಿ ಆದ ದುರ್ಘಟನೆ. ಥಾನೆ, ಮುಲುಂಡ್ ಮಧ್ಯೆ, ಲೋಕಲ್ ಗಾಡಿ ಬರುತ್ತಿರುವಾಗ, ಒಂದು ಸೇತುವೆಯ ಕೆಳಗೆ ಬಂತು. ಅದೇನೋ ಕಾಕತಾಳ ನ್ಯಾಯವೆನ್ನುತ್ತಾರಲ್ಲ, ಹಾಗೆ, ಆ ಸೇತುವೆಯ ಮೇಲೆ ಸ್ಥಾಪಿಸಿದ್ದ, ಕುಡಿಯುವ ನೀರಿನ ಹಳೆಯ ನೀರಿನ ಬೃಹತ್ ಪೈಪ್ ಕಳಚಿ ರೈಲಿನ ಮೋಟರ್ ಮ್ಯಾನ್ ಕ್ಯಾಬಿನ್ ಮೇಲೇ ಬಿದ್ದು. ಆತ, ಅವನ ಕ್ಯಾಬಿನ್ ನಲ್ಲೇ ಕೊನೆಯುಸಿರೆಳೆದರು. ಅವರ ದೇಹವನ್ನು ಡೆಬ್ರಿಯಿಂದ ಬೇರ್ಪಡಿಸಲು, ಕೈನ ಒಂದು ಭಾಗವನ್ನು ಕತ್ತಿರಿಸುವ ಹೃದಯ ವಿದ್ರಾವಕ ಸನ್ನಿವೇಷ ಒದಗಿತು. ಅವರಂತೆಯೇ ಮತ್ತೊಬ್ಬ ಪ್ರಯಾಣಿಕ ತನ್ನ ಪ್ರಾಣವನ್ನು ಕಳೆದುಕೊಂಡನು. ಈ ಸಮಯದಲ್ಲಿ ಮುರಿದ ನೀರಿನ ಪೈಪ್ ನಿಂದ ಹರಿದುಹೋದ ಗಂಗಾಜಾಲ, ಅಪಾರ ನಷ್ಟವನ್ನು ಮಾಡಿದೆ. ಈಗಾಗಲೇ ಕುಡಿಯುವ ನೀರಿನ ಕಟೌತಿ, ೩೦% ಇದ್ದೇ ಇದೆ. ಮಳೆ ಈ ಬಾರಿ ಕೈಕೊಟ್ಟಿದೆ.
೪. ಉತ್ತರ ಕರ್ನಾಟಕ, ಆಂಧ್ರಪ್ರದೇಶ್, ಮತ್ತು, ಮಹಾರಾಷ್ಟ್ರದ ಕೊಂಕಣ ತಟದಲ್ಲಿ ಅತಿವೃಷ್ಟಿ ಸಂಭವಿಸಿ, ಸಹಸ್ರಾರು ಜನ, ಜಾನುವಾರು, ತಮ್ಮ ಪ್ರಾಣ, ಆಸ್ತಿಗಳನ್ನು ಕಳೆದುಕೊಂಡ ಮಹಾ ಅನಿಷ್ಟ ಸನ್ನಿವೇಶ ನಡೆಯಿತು.
೫. ಮೈಸೂರ್ ಅಸೋಸಿಯೇಷನ್ ನಲ್ಲಿ ’ಗಝಲ್ ಕಾರ್ಯಕ್ರಮ’ ನಡೆಯಿತು. ಇದು, ಅಸೋಸಿಯೇಷನ್ ನ ಸಭಾಗೃಹದ ಹತ್ತನೇ ವರ್ಷವನ್ನು ಆಚರಿಸುವ ನಿಟ್ಟಿನಲ್ಲಿ ಆಯೋಜಿಸಿದ್ದು.
೬. ಮಹಾರಾಷ್ಟ್ರ, ಹರಿಯಾಣ, ಅರುನಾಚಲಪ್ರದೇಶ್ ನಲ್ಲಿ ರಾಜ್ಯಸರ್ಕಾರದ ಚುನಾವಣೆ, ತದನಂತರ ಸರಕಾರ ರಚನೆಇತ್ಯಾದಿಗಳು.
೭. ನಮ್ಮ ಪಡೋಸಿ ದೇಶ, ಪಾಕೀಸ್ತಾನದಲ್ಲಿ ಸೈನ್ಯ ಹಾಗೂ ತಲೆಬಾನ್ ಬಂಡುಕೋರರ ಮಧ್ಯೆ ಭೀಷಣ ಸಮರ.
ಪ್ರಖ್ಯಾತ ಹಿಂದಿ ಚಲನಚಿತ್ರದ ಪಾರ್ಶ್ವಗಾಯಕ, ’ಶ್ರೀ. ಮನ್ನಾ ಡೆ’ ಯವರಿಗೆ, ’ಪ್ರತಿಷ್ಠಿತ ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು ೯೦ ವರ್ಷ ಪ್ರಾಯದ ಮನ್ನಾ ಡೆ, ನಿಜಕ್ಕೂ ಅಭಿನಂದನಾರ್ಹರು. ಅವರು ಸುಮಾರು, ೩,೫೦೦ ಹಾಡುಗಳನ್ನು ಹಿಂದಿ, ಬೆಂಗಾಲಿ, ಒರಿಯ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡ ಚಿತ್ರವೊಂದರಲ್ಲಿ ಹಾಡಿರುವ ಪ್ರಸಂಗವಿದೆ. ಮಲೆಯಾಳಿ, ಭಾಷೆಯ ಹುಡುಗಿಯನ್ನು ಮದುವೆಯಾದ ಮನ್ನಾ ಡೆ ರವರಿಗೆ ಇಬ್ಬರು ಪುತ್ರಿಯರಿದ್ದಾರೆ. ಅವರು ಹಾಡಿದ ಹಲವಾರು ಸುಂದರ ಹಾಡುಗಳಲ್ಲಿ, ’ ಲಾಗ, ಚುನರೀ ಮೆ ದಾಗ್ ’ ಎಲ್ಲರ ಮನಸೆಳೆದಿದೆ !
ಇತ್ಯಾದಿ. ಇತ್ಯಾದಿ ಪ್ರಸಂಗಗಳು ನಡೆದವು.
ಪ್ರತಿಕ್ರಿಯೆ (1)