ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ|
ನಿನ್ನನಾರು ಬಹುಕಾಲ ಇರಬೇಡವೆಂದವರು
ಇದ್ದರಿರಬೇಕು ....||೧||
ನಿನ್ನನೇ ತೇಯುತ್ತಾ ಕರಗಿ ಹೋಗುವೆ ನೀನು|
ಅಳಿಯುವಾಗಲು ಅಳದೆ ಕೊಡುವೆ ಶ್ರೀಗಂಧವನು|
ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ
ಸುಟ್ಟುಬೂದಿಯಾಗದಿರೆ ಕೊಳೆತುನಾರುವೆನಿಲ್ಲಿ
ಇದ್ದರಿರಬೇಕು ....||೨||
ನಿನ್ನನೇ ಉರಿಸುತ್ತಾ ಕೊಡುವೆ ಬೆಳಕನ್ನು|
ನಿನ್ನನರಿಯದೆ ಆದೆ ಬಿರುಗಾಳಿ ನಾನು|
ಬೇಧ ಭಾವ ಅರಿಯದ ಜ್ಯೋತಿ ನೀನು
ನಿನ್ನ ಬೆಳಕಲಿ ಬದುಕು ಸವೆಸುವವ ನಾನು
ಇದ್ದರಿರಬೇಕು ....||೩||
-----------------------------------
ಇದು ನಾನು ಹತ್ತು ವರ್ಗಳ ಹಿಂದೆ ಬರೆದ ಕವನ.ಇದನ್ನು ಹಾಡಿದ್ದಾರೆ ಶ್ರೀ ಮತಿ ಲಲಿತಾರಮೇಶ್. ಅವರ ಧ್ವನಿಯಲ್ಲಿ ಹಾಡನ್ನು ಕೇಳಿ ಕೆಳಗಿನಕೊಂಡಿಯಲ್ಲಿ[ಕೊಂಡಿ ತೆರೆದರೂ ಪ್ರಯೋಜನವಾಗಿಲ್ಲ ಎಂಬ ಸುದ್ಧಿ ಮುಟ್ಟಿದೆ. ಹಾಗೊಂದು ವೇಳೆ ಪ್ರಯೋಜನ ವಾಗದಿದ್ದರೆ ಕ್ಷಮೆ ಇರಲಿ. ಮುಂದೆ ಇಂತಹ ದು:ಸ್ಸಾಹಸ ಮಾಡಲಾರೆ]
http://www.binfire.com/rel/?page=hotlink&id=159389:0:0
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!