{ಸಂಪದ ನಮ್ಮೆಲ್ಲರಿಂದ ತಾತ್ಕಾಲಿಕವಾಗಿ ಕಣ್ಮರೆಯಾದ ಸಂದರ್ಭದಲ್ಲಿ ಬರೆದ ಚುಟುಕು ಕವನವಿದು. ಸಂಪದಕ್ಕೆ ಹೊಸಮನೆಯನ್ನು ಒದಗಿಸಲು ಹಗಲು-ರಾತ್ರಿ ದುಡಿದ ಗೆಳೆಯರೆಲ್ಲರಿಗೂ ಆತ್ಮೀಯ ವಂದನೆಗಳು}
ನೀನಿಲ್ಲದೇ ಗೆಳತಿ ನೀನಿಲ್ಲದೆ
ಜಾಲದಲ್ಲಿ ಜಾಲಿ ಇಲ್ಲ ನೀನಿಲ್ಲದೆ
ಕವನ, ಕಥನ ಪಠಣವಿಲ್ಲ ನೀನಿಲ್ಲದೆ
ಕಳವಳವಾಗಿದೆ ಗೆಳೆಯರ ಕಾಣದೆ ನೀನಿಲ್ಲದೆ
ಬರಹಗಳ ಓದಲಾರದೆ ಬೇಸರವಾಗಿದೆ ನೀನಿಲ್ಲದೆ
ದಿನಗಳಿಂದು ಯುಗಗಳೇ ಆಗಿವೆ ನೀನಿಲ್ಲದೆ
ಜಾಲವಿಂದು ಹಕ್ಕಿ ಇಲ್ಲದ ಪಂಜರವಾಯ್ತು ನೀನಿಲ್ಲದೆ
ಸಂಪದ ಪುಟವ ತೆರೆಯುತ್ತಿರೆ
ಅಂಗ್ಲವ ಕಂಡು ಮನಕೆ ಖೇದವಾಗಿದೆ
ಕಾದಿರುವೆ ನಾ ಕಾದಿರುವೆ
ಕಪ್ಪಾದ ದಟ್ಟ ಮೋಡ ಸುರಿಸೋ ಮಳೆಗಾಗಿ ರೈತ ಕಾದಿರುವಂತೆ
ಪ್ರಿಯೆ ಹೆತ್ತು ಕೊಡುವ ಕೂಸನ್ನು ಎತ್ತಿಕೊಳ್ಳಲು ಇನಿಯ ಕಾದಿರುವಂತೆ
ಕೊನೇ ಓವರ್’ನಲ್ಲಿ ಗೆಲುವಿನ ರನ್ ಗಳಿಸಲು ದಾಂಡಿಗ ಕಾದಿರುವಂತೆ
ಕಾದಿರುವೆ
ಹೊಸಮನೆ ಹೊಕ್ಕು ನೀ ಕಳಿಸೋ ಆಮಂತ್ರಣಕ್ಕೆ, ಪ್ರತಿ ನಿಮಿಷವೂ,
ಕಾದಿರುವೆ ನಾ ಕಾದಿರುವೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!