'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗುತಾದ ಭೂ ತಾಯಿ ಮನಸು
ರಾಜಂಗು (ಯಡ್ಡಿ!) ,ರಾಣಿಗೂ (ರೆಡ್ಡಿ!) ಮುರಿದೋದ್ರೆ ಮನಸು
ಅರಮನೆಯಾಗೆನೈತೆ (ಕರುನಾಡು!) ಏನೈತೆ ಸೊಗಸು?'
ಈ ಹಳೆ ಹಾಡನ್ನ, ಹೀಗೆ ಬದಲಿಸಿ ರಾಜನ ಸ್ಥಾನದಲ್ಲಿ ಯಡ್ಡಿ, ರಾಣಿ ಸ್ಥಾನದಲ್ಲಿ ರೆಡ್ಡಿಯನ್ನ ಹಾಕಿ ಹಾಡೋಣವೆಂದರೆ, ಇಬ್ರು ಆ ಜಾಗಕ್ಕೆ ಫಿಟ್ ಆಗ್ತಾರ ಅನ್ನೋದೇ ಡೌಟು!. ರೋಮ್ ಹತ್ತಿ ಉರಿಯುವಾಗ ನೀರೋ ಪೀಟಿಲು ಕುಯ್ಯುತಿದ್ದನಂತೆ, ಹಾಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಜನ ಕಂಬನಿ ಮಿಡಿಯುತಿದ್ದರೆ, ಇವರು ಕುರ್ಚಿಯ ಹಿಂದೆ ಬಿದ್ದಿದ್ದಾರೆ.
ಇಲ್ಲಿ ಜನ ಗಂಜಿ ಕೇಂದ್ರಗಳಲ್ಲಿ ತುತ್ತು ಅನ್ನಕ್ಕಾಗಿ ಕಾಯುತಿದ್ದರೆ, ಅತ್ತ ರೆಸಾರ್ಟ್ಗಳಲ್ಲಿ 'ಜನ ಸೇವಕರು' ಭವಿಷ್ಯದ (ನಾಡಿನದ್ದಲ್ಲ ಬಿಡಿ) ಬಗ್ಗೆ ಚಿಂತಿಸುತ್ತ ಕಾಲಕಳೆಯುತಿದ್ದಾರೆ.ಇರೋ ಬರೋ ಉತ್ತರ ಕರ್ನಾಟಕದ ಶಾಸಕರೆಲ್ಲ ಒಂದೋ ರೆಸಾರ್ಟ್ಗಳಲ್ಲಿ ಇದ್ದರೆ, ಇನ್ನೊಂದಿಷ್ಟು ಜನ ದೆಹಲಿಯಲ್ಲಿದಾರೆ.ಹಠಕ್ಕೆ ಬಿದ್ದವರಂತೆ ಶಿಲನ್ಯಾಸ ಮಾಡಲು ತೋರುತ್ತಿರುವ ಕಾಳಜಿಯಲ್ಲಿ ಅದನ್ನ ಕಾರ್ಯ ರೂಪಕ್ಕೆ ತರಲು ತೋರಿಸುವುದು ಬಿಟ್ಟು ಎಲ್ಲರು ಊರು ಬಿಟ್ಟಿದ್ದಾರೆ!
ಕಳೆದ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿ ಬಂದು ಈಗ ಬಿ.ಜೆ.ಪಿ ರಾಜ್ಯವನ್ನ ತಂದು ನಿಲ್ಲಿಸಿರುವ ಸ್ಥಿತಿ ನೋಡಿದರೆ, ಅಲ್ಲಿಗೆ ಒಂದೇ ಪಕ್ಷ ಬಹುಮತ ಪಡೆದು ಬಂದರೂ ಸಹ ಈ ರಾಜಕಾರಣಿಗಳ ಹಣೆಬರಹ ಇಷ್ಟೇನಾ ಅನ್ನಿಸಿಬಿಟ್ಟಿದೆ? ಈ ಅಸಹ್ಯ ಹುಟ್ಟಿಸುವ ಬೆಳವಣಿಗೆಗಳಿಂದ ಚುನಾವಣೆ ಅಂದರೆ ಜನರಿಗೆ ರೇಜಿಗೆಯಾಗದೇ ಇರುತ್ತದಾ?
ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ,ನಾಡಿನ ಮೂಲೆ ಮೂಲೆಗಳಿಂದ ಜನ ಸ್ಪಂದಿಸಿದ ತೀವ್ರತೆ ಈ ರಾಜಕಾರಣ ಮಾಡುವ ಮನಸ್ಸುಗಳಿಗೆ ಅರ್ಥವಾಗುತ್ತಾ? ಯಡ್ಡಿ-ರೆಡ್ಡಿ ಜಗಳದಲ್ಲಿ ನೆರೆ ಸಂತ್ರಸ್ತರು ಅತಂತ್ರರಾಗಿದ್ದಾರೆ ಅಷ್ಟೇ. ಇವೆಲ್ಲ ಮನುಷ್ಯ ಮಾತ್ರರಿಗೆ ಅರ್ಥವಾಗುವನತ್ದ್ದೆ ಹೊರತು ಕುರ್ಚಿಯ ಹಿಂದೆ ಬಿದ್ದವರಿಗಲ್ಲ,atleast ಈ ಸಮಯದಲ್ಲಿ ಅಸಹ್ಯ ರಾಜಕಾರಣ ಬೇಡವಾಗಿತ್ತು.ಈಗಾಗಲೇ ಸೋತು ಸುಣ್ಣವಾಗಿರುವ ಬಿ.ಜೆ.ಪಿ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಾಗಿದೆ.
ಇಷ್ಟೆಲ್ಲಾ ಆದರೂ ಪತ್ರಿಕೆಯವರು ಯಾವ ಮಹಾನುಭಾವ ಯಾವ ರೆಸಾರ್ಟ್ನಲ್ಲಿದ್ದಾನೆ ಅಂತ ಹೇಳುತಿದ್ದಾರೆ ಹೊರತು, ಈ ಸಮಯದಲ್ಲಿ ಮಾಡುತ್ತಿರುವ ರಾದ್ದಂತದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಹೇಳಿಕೊಳ್ಳುವಂತ ವರದಿ ಬರೆದಿದ್ದು ಕಣ್ಣಿಗೆ ಬಿದ್ದಿಲ್ಲ.ಟಾಬ್ಲಾಯ್ದ್ ಪತ್ರಿಕೆಯೊಂದರಲ್ಲಿ ಸಮಸ್ಯೆಗೆ ಕಾರಣ ಹಾಗೂ ತಪ್ಪು ಯಾರದು ಅಂತ ಹೇಳಲು ತೋರಿಸಿರುವ ಕಾಳಜಿಯ ನಡುವೆ ನೆರೆ ಸಂತ್ರಸ್ತರ ಸಮಸ್ಯೆಯ ಕುರಿತ ವರದಿ ಮುಸುಕಾಗಿ ಬಿಟ್ಟಿದೆ.
ಕಂಬನಿ ಮಿಡಿಯುತ್ತಿರುವವರ ಕಾಯಬೇಕಾದ ಕೈಗಳು ಕುರ್ಚಿಯ ಹಿಂದೆ ಬಿದ್ದಿವೆ ನೋಡಿ!
(ಚಿತ್ರ ಕೃಪೆ :www.thewe.cc)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?
ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!
ಬೆಂಗಳೂರು ಮಳೆಯಲ್ಲಿ…
ಹೇರ್ ಕಟಿಂಗ್ ಶಾಪ್ನಲ್ಲಿ ಟಿವಿ..
‘ರಾಜಕೀಯ ಸಿನಿಕತನವೂ’ ಪ್ರಜಾಪ್ರಭುತ್ವವೂ....!
ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಜೆ ಡಿ ಎಸ್ ಹಿನ್ನಡೆ!
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!