ಇದು ನನ್ನ ಮನೆಯು

ಮನೆಯಲ್ಲಿ ಸಿರಿಯು

ಇದಕೆಲ್ಲ ನಾನೆ ಒಡೆಯ|

ಅದುನಿನ್ನ ಭ್ರಮೆಯು

ಸಿರಿಗಿಲ್ಲ ನೆಲೆಯು

ಜಗಕೆಲ್ಲ ಆತ ಒಡೆಯ||೧||

 

ನೀನಿರುವ ಮನೆಯ

ತಳಹದಿಯಲಿರುವ

ಕಲ್ಲನ್ನು ಕೇಳಿ ನೋಡು|

ಮನೆತುಂಬ ಇರುವ

ಮರಮುಟ್ಟುಗಳ

ಬಾಯಲ್ಲಿ ಕಥೆಯ ಕೇಳು||೨||

ಜಗಕೆಲ್ಲ ಬೆಳಕ

ಕೊಡುವಂತ ರವಿಗೆ

ನಾನೆಂಬ ಗರ್ವವಿಲ್ಲ|

ಹಗಲೆಲ್ಲ ದುಡಿದು

ಕತ್ತಲೆಯ ರಾತ್ರಿಯಲಿ

ರವಿ ಮಾಯವಾದನಲ್ಲ||೩||

ನಾನೆಂಬ ಭ್ರಮೆಯ

ತೊರೆದಾಗ ಗೆಳೆಯ

ನಿಜರೂಪ  ಕಾಣಬಲ್ಲೆ|

ಹತ್ತಾರು ಜನರ

ಸ್ವತ್ತಾದ ನೀನು

ಮಾನವತೆಯ ಗಳಿಸಬಲ್ಲೆ||೪||

ಈ ಹಾಡನ್ನು ಕೆಳಗಿನ ಕೊಂಡಿಯಲ್ಲಿ ಶ್ರೀಮತಿ ಲಲಿತಾ ರಮೇಶ್ ಇವರ ಕಂಠದಲ್ಲಿ ಕೇಳಬಹುದು

http://www.binfire.com/rel/?page=hotlink&id=145957:0:0