ಭಾನುವಾರ ಎಂದಿನಂತೆ ತಮಿಳಿನ ಸನ್ (ಇರಬೇಕು) ಚಾನೆಲ್ ನಲ್ಲಿ ನೀಯಾ ನಾಯಾ(ನೀನಾ ನಾನಾ ) ಎಂಬ ಚರ್ಚಾ ಅಧಾರಿತ ಪ್ರೋಗ್ರಾಮ್ ಬರುತ್ತಿತ್ತು

ಈ ಸಲದ ವಿಷಯ ನನಗೂ ಹಿಡಿಸಿದ್ದರಿಂದ ನೋಡಲು  ಕುಳಿತಿದ್ದೆ.

ವಿಷಯ ಇದು

ಲವ್ ಮಾಡುವಾಗ ಇದ್ದ ಮಧುರ ಅನುಭೂತಿ  ಆ ಸ್ನೇಹ, ಪ್ರೀತಿ ಮದುವೆಯಾದ ಮೇಲೇಕೆ ಮರೆಯಾಗಿದೆ ಎಂಬ ಪ್ರಶ್ನೆಗೆ ಗಂಡು ಹೆಣ್ಣುಗಳು(ಪ್ರೀತಿಸಿ ಮದುವೆಯಾದವರು) ತಮ್ಮ ತಮ್ಮ ಅನುಭವ ಹೇಳುತ್ತಿದ್ದರು

ಒಬ್ಬಳು ಹೇಳುತ್ತಿದ್ದಳು

"ಮದುವೆಗೆ ಮುಂಚೆ ಚೆನ್ನಾಗಿ ಇನ್ ಮಾಡಿಕೊಂಡು ನನ್ನ್ನನ್ನು ಇಂಪ್ರೆಸ್ ಮಾಡುತ್ತಿದ್ದರು. ಈಗ  ಯಾವುದೇ ರೀತಿಯ ಆಸಕ್ತಿ ಇಲ್ಲ. ಯಾವಾಗಲೂ ಕೆಲಸ ಅದೂ ಇದೂ ಎಂದು ನನ್ನ್ನಿಂದ ದೂರವೇ ಇರುತ್ತಾರೆ."

ಮತ್ತೊಬ್ಬ ಹೇಳುತ್ತಿದ್ದ

"ಪ್ರೀತಿಸುವಾಗ ಹೆಂಗಸರು ಕೇವಲ ತಮ್ಮ ವರ್ತನೆಯ ದ ೧೦% ಮಾತ್ರ ತೋರುತ್ತಾರೆ. ಆದರೆ ಮದುವೆ ಆದಮೇಲೆ ವಿಶ್ವ ರೂಪ ತಾಳುತ್ತಾರೆ"

ಮತ್ತೊಬ್ಬ

"ಘಳಿಗೆ ಘಳಿಗೆಗೂ ಕಾಲ್ ಮಾಡಿ ಎಲ್ಲಿದ್ದೀರಾ . ಎಷ್ಟು ಹೊತ್ತಿಗೆ ಬರ್ತೀರಾ ಎಂದು ಕೇಳುತ್ತಾ ಇರುತ್ತಾಳೆ " ಎಂದು ದೂರಿದ

ಮತ್ತೊಬ್ಬಳು

"ಮದುವೆಗೆ ಮುಂಚೆ ನನ್ನ ಅಲಂಕಾರಕ್ಕೆ  ಮೆಚ್ಚುಗೆ ಹೇಳುತ್ತಿದ್ದರು. ಈಗ ಅದನ್ನು ಗಮನಿಸುವುದೂ ಇಲ್ಲ"

ಹೀಗೆ ಪ್ರತಿಯೂಬ್ಬರೂ ತಮ್ಮ ಮದುವೆಗೆ ಮುಂಚೆ ಇದ್ದುದ್ದಕ್ಕೂ ಮದುವೆ ಆದ ಮೇಲೂ ಇದ್ದ ವ್ಯತ್ಯಾಸಗಳನ್ನೂ ಪಟ್ಟಿ ಮಾಡುತ್ತಿದ್ದರು

ಆಗ ಒಬ್ಬಳು(ಸೆಲೆಬ್ರಿಟಿ ಇರಬೇಕು) ಹೇಳಿದ್ದು

ಮದುವೆಗೆ ಮುಂಚೆ ಅಂದರೆ ಪ್ರೀತಿಸುವಾಗ ಹೆಣ್ಣಾಗಲಿ ಗಂಡಾಗಲಿ ಕೇವಲ ಒಂದೇ ಪಾತ್ರವನ್ನು (ಪ್ರೇಮಿಯ ) ಅದೂ ನಿರ್ಧಿಷ್ಟ ಸಮಯದಲ್ಲಿ ನಿರ್ವಹಿಸುವುದರಿಂದ ವ್ಯಕ್ತಿಯ ಇನ್ನೊಂದು ಮಗ್ಗುಲು ಪರಿಚಯವಾಗುವುದಿಲ್ಲ. ಆದರೆ ಮದುವೆಯಾದ ಮೇಲೆವಿವಿಧ ಪಾತ್ರ ವಹಿಸಬೇಕಾದ್ದರಿಂದ  ಸಂಗಾತಿಯ ಇನ್ನೊಂದು ಮುಖದ(ವಿವಿಧ) ಪರಿಚಯವಾಗುತ್ತದೆ. ಆಗಲೇ ಅಸಹನೆ ಆತಂಕ, ಪುಟಿಯಲಾರಂಭಿಸುತ್ತದೆ.

ಆಗಲೇ ಆ ಸೆಲೆಬ್ರಿಟಿಯ ಗಂಡ ಹೇಳಿದ್ದು

"ನನಗೆ ನನ್ನ ಗೆಳತಿ ಬೇಕು. ಐ ಹ್ಯಾವ್ ಲಾಸ್ಟ್ ಮೈ ಫ್ರೆಂಡ್.  ಗೆಳತಿ ಕಳೆದು ಹೋಗಿ  ಹೆಂಡತಿ ಬಂದಿದ್ದಾಳೆ"

ಇದೆಲ್ಲಾ ನೋಡಿದ ಮೇಲೆ ನನಗನಿಸಿದ್ದು

ನಮ್ಮ ಸಂಗಾತಿಯ ಬಗ್ಗೆ ಅತೀವ ನಿರೀಕ್ಷೇ ಇಟ್ಟುಕೊಳ್ಳಬಾರದು. ಒಂದೇ ಪಾತ್ರವನ್ನು ಎಲ್ಲಾರೂ ಎಲ್ಲಾ ಸಮಯದಲ್ಲೂ ಮಾಡಲಾಗುವುದಿಲ್ಲ.   ವಿವಿಧ ಪಾತ್ರ ನಿರ್ವಹಿಸುವಾಗ ಅದಕ್ಕೆ ತಕ್ಕಂತೆ ನಮ್ಮ ಸ್ವರೂಪ ಬದಲಾಗುವಂತೆ ಸಂಗಾತಿಯ ಸ್ವರೂಪವೂ ಹೌದು ಸಂಗಾತಿಯೂ ನಮ್ಮಂತೆ ಮನುಷ್ಯ(ಳು). ನಮಗೆ ಭಾವನೆಗಳ ಏರಿಳಿತವಿದ್ದಂತೆ ಅವನಿ(ಳಿ)ಗೂ ಇರುವುದು ಸಹಜ.

ಈ ಸಣ್ಣ ವಿಷಯವನ್ನು ಅರ್ಥ ಮಾಡಿಕೊಂಡರೆ ಕುಟುಂಬಗಳಲ್ಲಿ ಜಗಳ, ಕದನ ದೂರ ಅಲ್ಲವೇ?