ಈ ತಿಂಗಳ ೨೮ ರಂದುನಮ್ಮ ಸಂಸ್ಥೆಯಲ್ಲಿ ನಡೆಯಲಿರುವ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಟ್ಟಿದ್ದವು. ಅದರಲ್ಲಿ ಮುಖ್ಯವಾಗಿ ಮತ್ತು ಅತಿ ಹೆಚ್ಚು ಜನ ಭಾಗವಹಿಸುವ "ಕ್ವಿಜ್ ಕರ್ನಾಟಕ" ಸ್ಪರ್ಧೆಯನ್ನು ನಡೆಸಿಕೊಡಲು ಬಂದಿದ್ದ ’ಥಟ್ ಅಂತ ಹೇಳಿ’ಕಾರ್ಯಕ್ರಮದ ರೂವಾರಿ ನಿರೂಪಕಸಂಪದಿಗ ಡಾ. ನಾ ಸೋಮೇಶ್ವರ ಅವರು ಕರ್ನಾಟಕದ ಬಗ್ಗೆ ಅದರಲ್ಲೂ ಕರ್ನಾಟಕದ ಸುಂದರ ದೇವಸ್ಥಾನಗಳು, ಮೊದಲುಗಳು, ಉಪಮಾನಗಳು ವಿಭಾಗಗಳನ್ನು ಆರಿಸಿಕೊಂಡದ್ದುಸ್ಪರ್ಧೆಗೆ ಮೆರಗು ನೀಡಿತ್ತು. ಅದರಲ್ಲೂ ನನ್ನ ಅಚ್ಚುಮೆಚ್ಚಿನ ಚಾರಣದ ತಾಣಗಳು ಮತ್ತು ಜಲಪಾತಗಳ ವಿಷಯ ಆರಿಸಿಕೊಂಡಿದ್ದು ನನಗೆ ಸಹಾಯವಾಯಿತು. ಅಂತಿಮ ಸುತ್ತಿಗಾಗಿ ಡಾ. ನಾ ಸೋಮೇಶ್ವರ ಅವರು ಕರ್ನಾಟಕದ ನದಿಗಳ ಹೆಸರುಗಳನ್ನು ಬರೆಯಲು ಸೂಚಿಸಿದ್ದು ಒಂದು ವಿನೂತನ ಪ್ರಯತ್ನವಾಗಿತ್ತುಆ ಮುಖೇನ ಕರ್ನಾಟಕದಲ್ಲಿ ಹರಿಯುವ ನದಿಗಳನ್ನು ಅವುಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿದ ಸೋಮೇಶ್ವರ ಅವರಿಗೆಧನ್ಯವಾದಗಳನ್ನು ತಿಳಿಸುತ್ತಾಆಪ್ರಶ್ನೆಯನ್ನುನಮ್ಮಸಂಪದಿಗರಮುಂದಿಡುತ್ತಿದ್ದೇನೆ. ಅವರ ಪ್ರಕಾರ ಕರ್ನಾಟಕದಲ್ಲಿ ೪೬ ನದಿಗಳು ಹರಿಯುತ್ತವೆ. ನಾನು ಕೆಲವು ಪ್ರಮುಖನದಿಗಳ ಹೆಸರನ್ನು ಇಲ್ಲಿರಿಸಿದ್ದೇನೆ.
ನಿಮಗೆ ತಿಳಿದ ಕರ್ನಾಟಕದಲ್ಲಿ ಹರಿಯುವನದಿಗಳ ಹೆಸರುಗಳನ್ನು ತಿಳಿಸುವಿರಾ?
೧.ತುಂಗ
೨.ಭದ್ರ
೩.ಶರಾವತಿ
೪.ಮಲಪ್ರಭ
೫.ಘಟಪ್ರಭ
೬.ಕಾವೇರಿ
೭.ಕುಮಾರಧಾರ
೯.ನೇತ್ರಾವತಿ
೧೦.ಕಾಳಿ
೧೧.ಕೃಷ್ಣೆ
೧೨.ಭೀಮೆ
೧೩.ಹೇಮಾವತಿ
ಪ್ರತಿಕ್ರಿಯೆ (6)