೨೬/೧೧ರ ದುರಂತದ ಪ್ರಥಮ ವಾರ್ಷಿಕೋತ್ಸವ ನಡೆಯುತ್ತಿದೆ, ಎಲ್ಲೆಡೆ ಅಂದು ಪ್ರಾಣ ತೆತ್ತವರಿಗಾಗಿ ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ. ಆದರೆ ಒಮ್ಮೆಯಾದರೂ, ಒಬ್ಬರಾದರೂ ನಮ್ಮ ಅತ್ಯುನ್ನತ ಅಸ್ತ್ರವಾದ "ಮತದಾನದ" ಬಗ್ಗೆ ಚಕಾರವೆತ್ತಿಲ್ಲ. ಎಲ್ಲರೂ ಮತ ಚಲಾಯಿಸಿ, ಈಗಿರುವ ೪೫-೫೦% ಮತದಾನ ಮುಂದಿನ ಚುನಾವಣೆಗಳಲ್ಲಿ ೧೦೦% ಮುಟ್ಟಿ, ಅಯೋಗ್ಯರನ್ನು, ಭ್ರಷ್ಟರನ್ನು ಅಧಿಕಾರದಿಂದ ಹೊರಗಿಟ್ಟರೆ, ಈಗ್ಗೆ ವರ್ಷದ ಹಿಂದಾದ ಬಲಿದಾನಗಳಿಗೊಂದು ಅರ್ಥ ಬರಬಹುದು. ಕೇಂದ್ರದಲ್ಲಿ ಕೇವಲ ಮುಸ್ಲಿಮರ ಹಾಗೂ ಪರಿಶಿಷ್ಟ ಜಾತಿಗಳ ವೋಟಿನ ಮೇಲೇ ಅವಲಂಬಿತವಾಗಿರುವ, ಕಾಂಗ್ರೆಸ್ನಂತಹ ನಿರ್ವೀರ್ಯ ಸರ್ಕಾರ ಅಧಿಕಾರದಲ್ಲಿರುವವರೆಗೂ ಬಹುಶ: ಈ ಗೋಳು ತಪ್ಪುವುದಿಲ್ಲ ಅನ್ನಿಸುತ್ತದೆ. ಇಲ್ಲದಿದ್ದಲ್ಲಿ ಇಂತಹ ನೂರಾರು ೨೬/೧೧ ಬರುತ್ತಲೇ ಇರುತ್ತವೆ, ಕಣ್ಣೀರು ಹರಿಯುತ್ತಲೇ ಇರುತ್ತದೆ. ನಿರಪರಾಧಿಗಳ ಮಾರಣಹೋಮ ನಡೆಯುತ್ತಲೇ ಇರುತ್ತದೆ. ಮುಖ್ಯವಾಗಿ ನಮ್ಮ ವಿದ್ಯಾವಂತರು ಅನ್ನಿಸಿಕೊಂಡವರು ತಮ್ಮ ನಿರ್ಲಿಪ್ತತೆಯಿಂದ ಹೊರ ಬರಬೇಕು. ಮತ ಚಲಾಯಿಸಬೇಕು, ಉತ್ತಮರ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ, ಮತ್ತೊಮ್ಮೆ ಅಮೇರಿಕನ್ನರ ಅಥವಾ ಪಾಕಿಸ್ತಾನೀಯರ!! ಅಡಿಯಾಳಾಗಿ ಈ ದೇಶ ಗುರುತಿಸಿಕೊಳ್ಳುವ ದಿನ ದೂರವಿಲ್ಲ. ಈ ಬಗ್ಗೆ ಸಂಪದಿಗರ ಅಭಿಪ್ರಾಯವೇನು?? ನೋಡೋಣವೇ ???
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅರಬ್ಬರ ನಾಡಿನಲ್ಲಿ -೧೮: ಆಪರೇಷನ್ ನೈಜೀರಿಯಾ!
ನೆನಪಿನಾಳದಿಂದ - ೨೫; ನನ್ನ ಈಜು ಕಲಿಕೆಯ ಪ್ರಸಂಗಗಳು.
ಅರಬ್ಬರ ನಾಡಿನಲ್ಲಿ - ೧೬ - ಹರ್ಷದ ಹಿಂದೆಯೇ ಹೊಂಚು ಹಾಕುವ ಸಾವು!
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)