ನಮಸ್ತೆ ಕನ್ನಡಿಗರೆ,

 ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.

ಅಫ್ ಎಂ ರೇಡಿಯೋಗಳು ಪೂರ್ತಿ ಹಿಂದಿ ಮತ್ತು ಇಂಗ್ಲೀಷ್ ಹಾಡುಗಳನ್ನ ಪ್ರಸಾರ ಮಾಡ್ತಾಯಿವೆ.

  • ಎಲ್ಲಾ ನಾಮಪಲಕಗಳು ಕನ್ನಡವನ್ನ ಒಳಗೊಂಡಿರಬೇಕು.
  •  ಹಾಗೆ ಕನ್ನಡ ಸ್ಂಖ್ಯೆಗಳ ಬಳಕೆ ಸಹ ಹೆಚ್ಚಬೇಕು. ಕನ್ನಡ ದಿನ ಪತ್ರಿಕೆಗಳು ಮಾಸ ಪತ್ರಿಕೆಗಳು ಕನ್ನಡ ಸಂಖ್ಯೆಗಳನ್ನ ಬಳಸಬೇಕು.
  • ನಮ್ಮ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳೆಕೆ ಹಾಗು ಆಡಳಿತ ಭಾಷೆ ಸಹ ಕನ್ನಡವಾಗಬೇಕು.
  • ಎಲ್ಲಾ ತರಹದ ಶಾಲೆ ಕಾಲೇಜುಗಳಲ್ಲಿ ಕನ್ನಡದ ಬಳಕೆ ಜಾರಿಗೆ ಬರಬೇಕು.
  • ಕನ್ನಡ ಮತ್ತು ಇಂಗ್ಲೀಷ್ ಬಿಟ್ಟು ಬೇರೇ ಯಾವ ಭಾಷೆಯ ಭಿತ್ತಿ ಪತ್ರಗಳು ಬಳಕೆಯಲ್ಲಿರಬಾರದು. ಹಾ ಇಂಗ್ಲೀಷ್ ಭಿತ್ತಿಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
  • ಪರಭಾಷಾ ಚಿತ್ರ್ಸಗಳ ಪ್ರಚಾರ ಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
  • ಹಾ ಪ್ರತಿಯೊಬ್ಬ ಕನ್ನಡಿಗನು ರಾಜ್ಯದೇ ಯಾವುದೆ ಭಾಗಲ್ಲು ಕನ್ನಡದಲ್ಲೇ ಮಾತನಾಡಬೇಕು.

 ನಿಮಗೆ ಎನ್ನನ್ನಿಸುತ್ತದೆ ನೀವೇ ಹೇಳಿ... ನಮ್ಮ ಭಾಷೆಯನ್ನ ನಾವು ಹೇಗೆ ಉಳಿಸಿಕೊಳ್ಳೊದು ?