ಮಾನ್ಯ ಹರಿಪ್ರಸಾದ್ ನಾಡಿಗ್ ಅವರು ಆರ್ಕೂಟ್ ತಾಣದಲ್ಲಿ ನಮ್ಮದೂ ಒಂದು ಸಮುದಾಯ ಇರಲಿ ಎಂದು 'ಕನ್ನಡ' ಅನ್ನುವ ಹೆಸರಿನ ಸಮುದಾಯವನ್ನು ಶುರು ಮಾಡಿದ್ದಾರೆ. 

ಕೊಂಡಿ : http://www.orkut.co.in/Main#Community?cmm=15689

2004 ರಲ್ಲಿ ಪ್ರಾರಂಭವಾದ ಈ ಸಮುದಾಯದಲ್ಲಿಇದೀಗ ಈ ಸಮುದಾಯದಲ್ಲಿ ಸುಮಾರು 47,000  ಜನ ಸದಸ್ಯರಿದ್ದಾರೆ. ಆದರೆ ಇದೊಂದು ರೀತಿ ಅನಾಥ ಸಮುದಾಯವಾಗಿ ಹೋಗಿದೆ. ಇಲ್ಲಿ ಬೇಕಾಬಿಟ್ಟಿ ಸರಣಿಗಳನ್ನು ಶುರು ಮಾಡಲಾಗುತ್ತದೆ. ಜಾಹೀರಾತು ಮಾಡುವವರ ಸ್ವರ್ಗವಾಗಿದೆ. ಆಟದ ಸರಣಿಗಳಲ್ಲಿ ಭಾಗವಹಿಸುವವರು ಮಾತ್ರ ಈ ಸಮುದಾಯಕ್ಕೆ ಬರುವಂತಾಗಿ ಹೋಗಿದೆ. ಅದರಲ್ಲೂ ಹುಡುಗಿಯರು ಬಂದರೆ ಚುಡಾಯಿಸುವಿಕೆ ಶುರುವಾಗುತ್ತದೆ. ಗಹನವಾದ ವಿಚಾರಗಳನ್ನು ಚರ್ಚಿಸುವವರು ಬರುತ್ತಿಲ್ಲ. ಅಂಥಹ ಸರಣಿಗಳನ್ನು ಹಾಕಿದರೂ ಪ್ರತಿಕ್ರಿಯೆ ನೀಡುವವರಿಲ್ಲ. ಬೇಡದ ಸರಣಿಗಳನ್ನ ಅಳಿಸೋರು ಯಾರೂ ಇಲ್ಲ. ಇಲ್ಲಿ ಚರ್ಚೆ ಮಾಡುವಾಗ ಯಾರಾದರೂ ಅನುಚಿತ ಪದ, ವಾಕ್ಯ ಬಳಸಿದರೆ ಗದರಿಸೋರಿಲ್ಲ. ಇದೊಂಥರಾ ಬೇಕಾಬಿಟ್ಟಿ ಸಮುದಾಯವಾಗಿದೆ.

ಏಕೆಂದರೆ ಹರಿಯವರು ಈ ಸಮುದಾಯದ ಕಡೆ ಕರ್ಸರ್ ಹಾಕುತ್ತಿಲ್ಲ. ಇವರು ಬಂದಿಲ್ಲ ಅಂದರೂ ಪರ್ವಾಗಿಲ್ಲ. ಹೆಚ್ಚಾಗಿ ಆನ್‌ಲೈನ್‌ನಲ್ಲಿ ಇರುವ ಯಾರನ್ನಾದರೂ ಮಾಡರೇಟರ್ ಮಾಡಬಹುದಿತ್ತು. ಇವರು ಮಾಡಿರುವ ಹತ್ತು ಜನ ಮಾಡರೇಟರ್‌ಗಳೂ ಸಮುದಾಯದ ಕಡೆ ಕರ್ಸರ್ ತಿರುಗಿಸೋದಿಲ್ಲ. 

ಹರಿಯವರಲ್ಲಿ ಒಂದೇ ಒಂದು ಮನವಿ ಏನೆಂದರೆ, ಅಲ್ಲಿ ಉತ್ತಮ ಮಾಡರೇಟರ್‌ಗಳನ್ನ (ಆನ್‌ಲೈನ್ ಇರುವವರು) ಹಾಕಿ. ಇಲ್ಲಾಂದರೆ ನೀವಾದರೂ ದಿನಕ್ಕೊಮ್ಮೆ ಭೇಟಿ ನೀಡಿ. ಅದೂ ಆಗದಿದ್ದರೆ ಆ ಸಮುದಾಯವನ್ನು ಸ್ಥಗಿತಗೊಳಿಸಿಬಿಡಿ. ಏಕೆಂದರೆ ಕನ್ನಡದ ಮರ್ಯಾದೆ ಹೋಗುವುದು ಬೇಡ.

ನನ್ನ ಆರ್ಕೂಟ್ ಕೊಂಡಿ : http://www.orkut.co.in/Main#Profile?uid=10470517212050062340