ಇರುವಷ್ಟುದಿನ ಬದುಕಿಬಿಡು,

ಮದರ ಥೇರೆಸಾ,

ಗಾಂಧೀಜಿಯ ಹಾಗೇ......!

 

ಅಷ್ಟು ಬೇಗ

ಕೋಪಗೊಳ್ಳಬೇಡ ಗೆಳತಿ,

 

ನನಗೂ ಗೊತ್ತು,

ಹೇಳುವಷ್ಟು ಸುಲಭವಲ್ಲ ಹಾಗೆ

ಬದುಕುವುದು ಎಂದು......!

 

ಆದರೆನುಮಾಡಲಿ?

ನಿಂಗೊತ್ತಲ್ಲ

ನನ್ನ ಸ್ವಭಾವ....

 

ನನ್ನಲ್ಲಿ ಪುಕ್ಕಟ್ಟೆಯಾಗಿ

ಸಿಗುವುದು

ಉಪದೇಶ ಒಂದೇ.........!