ಮಲೆನಾಡಿನ ಪ್ರಸಿದ್ಧ ಜಲಪಾತ

      ಸೂತನಬ್ಬಿ ಜಲಪಾತ

     ಈ ಜಲಪಾತವು ಮಲೆನಾಡಿನ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ.  ಸೂತನಬ್ಬಿ ಜಲಪಾತವೆಂದು ಕರೆಯಲ್ಪಡುವ ಈ ಜಲಪಾತವನ್ನು ಹನುಮಾನ್ ಗುಂಡಿ ಎಂದೂ ಕೆಲವರು ಕರೆಯುತ್ತಾರೆ.  ಈ ಜಲಪಾತವು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಅಡಕವಾಗಿದೆ.  ಕುದುರೇಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಈ ಜಲಪಾತವು ಸುಂದರ ಮತ್ತು ರಮಣೀಯವಾಗಿದೆ.  ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿಯಿಂದ 30 ಕಿ.ಮೀ, ಕುದುರೇಮುಖದಿಂದ 20 ಕಿ.ಮೀ. ಹಾಗೂ ಮಂಗಳೂರಿನಿಂದ 75 ಕಿ.ಮೀ. ದೂರದಲ್ಲಿದೆ. ಮಂಗಳೂರಿನಿಂದ ಕುದುರೆಮುಖಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್.ಕೆ. ಬಾರ್ಡರ್ ನಿಂದ ಬರೀ 6 ಕಿಲೋಮೀಟರುಗಳಷ್ಟೇ.  ಬಸ್ಸುಗಳ ಸೌಲಭ್ಯವೂ ಲಭ್ಯವಿದೆ.  ಹೆದ್ದಾರಿಯ ಪಕ್ಕದಲ್ಲಿಯೇ ಅರಣ್ಯ ಇಲಾಖೆಯವರ ಕೌಂಟರ್ ಇದೆ.  ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4:30 ಗಂಟೆಗಳ ವರೆಗೆ ಪ್ರವೇಶವಿರುತ್ತದೆ.  ಇತ್ತೀಚಿನ ಕೆಲವು ವರ್ಷಗಳಲ್ಲಿ ಜಲಪಾತಕ್ಕೆ ಇಳಿಯಲು ಇಲಾಖೆಯವರು ಮೆಟ್ಟಿಲುಗಳನ್ನು ಕಟ್ಟಿರುತ್ತಾರೆ ಹಾಗೂ ಸ್ವಚ್ಛತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಸುತ್ತಲೂ ದಟ್ಟವಾದ ಕಾಡಿನಿಂದ ಆವರಿಸಿರುವ ಈ ಜಲಪಾತವನ್ನು ನೀವೂ ಒಮ್ಮೆ ತಪ್ಪದೇ ನೋಡುವಿರೆಂದು ಭಾವಿಸಿದ್ದೇನೆ.   ಈ ಜಲಪಾತದ ಇನ್ನೂ ಕೆಲವು ಚಿತ್ರಗಳನ್ನು ನೀವು ___LINK_OPEN_title="ಸೂತನಬ್ಬಿ ಜಲಪಾತ" href="http://picasaweb.google.co.in/guruprasad.sringeri/SutanabbiFalls#" target="_blank"___ಇಲ್ಲಿ ಕಾಣಬಹುದು.