ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ ಪುನರ್ವರ್ಗೀಕರಣದಿಂದಾಗಿ ಸಾಮಾನ್ಯ ವರ್ಗದ ಕೆಲವು ಸೀಟುಗಳು ಮಹಿಳೆಯರಿಗೆ ಮೀಸಲಾದವಷ್ಟೆ. ಆ ಸೀಟುಗಳಿಗೆ ವಿವಿಧ ಪಕ್ಷಗಳಿಂದ ಈ ಮೊದಲು ಸ್ಪರ್ಧಿಸಲಿದ್ದ ಪುರುಷರೇನಿದ್ದರಲ್ಲಾ, ಅವರ ಪತ್ನಿಯರೇ ಇದೀಗ ಆಯಾ ಪಕ್ಷಗಳ ಮಹಿಳಾ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ! ಬಹುತೇಕ ಸ್ಥಾನಗಳ ಕಥೆ ಇದೇ ಆಗಿದೆ. ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದಮೇಲೆ ಲೋಕಸಭಾ ಚುನಾವಣೆಯಲ್ಲಿ ಆಗುವುದೂ ಇದೇ ಕಥೆ.
ಹೀಗಾದರೆ ಮಹಿಳಾ ಮೀಸಲಾತಿ ಜಾರಿಗೆ ಬಂದೂ ಏನು ಪ್ರಯೋಜನ? ರಾಜಕೀಯ ಪಕ್ಷಗಳು ಅರ್ಹ ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಉದ್ದೇಶಿತ ಪುರುಷರ ಪತ್ನಿ, ಪುತ್ರಿಯರಿಗೇ ಟಿಕೆಟ್ ನೀಡಿ ಗೆಲ್ಲಿಸಿ, ಮಹಿಳೆಯ ಹೆಸರಿನಲ್ಲಿ ಆ ಪುರುಷರೇ ಆಡಳಿತ ನಡೆಸುವಂತಾದರೆ ಆಗ ಪರಿಸ್ಥಿತಿ ಈಗಿನದಕ್ಕಿಂತ ಅನರ್ಥಕರವಲ್ಲವೆ? ಜೊತೆಗೆ, ಅರ್ಹ ಮಹಿಳೆಯರನ್ನು ಅವಕಾಶದಿಂದ ವಂಚಿಸಿದಂತಲ್ಲವೆ? ಮಹಾನಗರಪಾಲಿಕೆ ಚುನಾವಣೆ ವಿಷಯದಲ್ಲಿ ಬೆಂಗಳೂರಿನಲ್ಲೀಗಾಗಲೇ ಈ ರೀತಿ ಆಗುತ್ತಿರುವುದರಿಂದ ಪ್ರಾಜ್ಞರೆಲ್ಲರೂ, ಮುಖ್ಯವಾಗಿ ಮಹಿಳಾ ಸಂಘಟನೆಗಳು ರಾಜಕೀಯ ಪಕ್ಷಗಳ ಈ ಅನ್ಯಾಯವನ್ನು ಪ್ರತಿಭಟಿಸಬೇಕು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪಿಬಿಎಸ್ : ಅಚ್ಚರಿ ಕಾದಿದೆ
ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
’ಸಂಪದ ಸಮ್ಮಿಲನ # 4’ ಕುರಿತು
ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?
ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?
ಕಬ್ಬು ಬೆಳೆಗಾರ: ರಾಜಕೀಯದ ದಾಳ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)