ನಾ ನಿನ್ನ ಕನಸಿಗೆ ಬಂದು ಹೋದರೆ
ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ
ಕನಸಿನ ಕನ್ನಡಿಯಲ್ಲಿ ಕಾಣುತಿದೆ ನಿನ್ನದೇ ಮುಖವು
ಮನಸಿನ ಮುಖ ಪುಟದಲ್ಲಿ ಕುಳಿತಿದೆ ನಿನ್ನದೇ ಚಿತ್ರವು
ಬಾಳಿನ ಮುನ್ನುಡಿ ತುಂಬ ನಿನ್ನದೇ ಹೆಸರು
ನಿನ್ನಿಂದಲೇ ನನ್ನ ಬಾಳು ಹಸಿರು
......................
ನೀ ನನಗೆ
ನಾ ನಿನಗೆ
ಈ ಭೂಮಿ ಭಾನು ಇರುವವರೆಗೆ
ನಮ್ಮ ಪ್ರೀತಿ ಎಂದೂ ಕೊನೆವರೆಗೆ
ಉಸಿರೊಳಗೆ ಉಸಿರಾಗಿ ಇರುವವರೆಗೆ
ಹೆಸರಲ್ಲಿ ಹೆಸರಾಗಿ ಇರುವವರೆಗೆ
ಉಸಿರಲ್ಲಿ ಹೆಸರು ಇರುವವರೆಗೆ
ನಮ್ಮ ಪ್ರೀತಿ ಎಂದೂ ಕೊನೆವರೆಗೆ
ಕನಸಲ್ಲಿ ಕನಸಾಗಿ ಇರುವವರೆಗೆ
ಮನಸ್ಸಲ್ಲಿ ಮನಸ್ಸಾಗಿ ಇರುವವರೆಗೆ
ಮನಸ್ಸಲ್ಲಿ ಕನಸು ಇರುವವರೆಗೆ
ನಮ್ಮ ಪ್ರೀತಿ ಎಂದೂ ಕೊನೆವರೆಗೆ
............................
ಮನಸೇ ಓ ಮನಸೇ ನೀನೇಕೆ ಹೀಗೆ ?
ಚಂಚಲವಾಗಿರುವೆ ನೀ ಎನ್ನುವರು !
ಏನೋ ಕನಸ ತುಂಬುವೆ ನೀನು !
ಪಡೆಯುವ ಎನ್ನುವಷ್ಟರಲ್ಲೇ ! ಬದಲಾಗುವೆ ನೀನು !
ಅರಿಯದ ಹೃದಯಕೆ ಏನೋ ಹೊಸತನವ ನೀಡುವೆ !
ಇಲ್ಲದ ಸಲ್ಲದ ಆಸೆಯೊಳಗೆ ಬಂದಿಸುವೆ !
ಕಣ್ಣಿರ ಕಡಲೊಳಗೆ ಕೈ ತೊಳೆಸುವೆ !
ನಂಬಿ ಬಂದವರ ನಂಬಿಕೆ ಕೆಡಿಸುವೆ !
ಯಾಕೆ ನೀನೇಕೆ ಹೀಗೆ ಓ ಮನಸೇ !
ಕಾರಣವ ನೀಡುವೆಯ ನೀನು !
ಹುಚ್ಚು ಮನಸು ಎನ್ನುವರು ,
ಮುಗ್ದ ಮನಸು ಎನ್ನುವರು !
ಕಾಣದೆ ಹೋಗಿದ್ದು ಮಾತ್ರ ಅದರೊಳಗಿನ ನೋವು ಮಾತ್ರ !
ಹೇಳಬೇಕೆನಿಸಿತ್ತು , ಕೇಳಬೇಕೆನಿಸಿತ್ತು ನೂರಾರು ಪ್ರಶ್ನೆ ಗಳ !
ಹೇಳದೆ ಉಳಿದು ಹೋಗಿದ್ದು ಮಾತ್ರ ಸತ್ಯ !
ಕಾರಣ , ಮನಸೇ ನೀ ಚಂಚಲವಂತೆ
.....................................
ನನ್ನವಳು ಎಲ್ಲರು ಇಷ್ಟ ಪಡುವ ರೋಜಾ ಹೂವಲ್ಲ,
ನಾ ಪ್ರೀತಿಸುವ ನೀಲಿ ಕಮಲ ಅವಳು.
ಆ ಹೂವ ಪಡೆಯುವ ಆಸೆಯಿಂದ,
ಪ್ರೀತಿಯ ನೀರಲಿ ಧುಮುಕಿದೆ,
ಈಜು ಬರದ ನಾನು ಆ ನೀರಿನಲ್ಲೇ ಮುಳುಗಿದೆ,
ಆ ಹೂವಿನ ಬೇರಿನಲ್ಲಿ ಮಣ್ಣಾಗಿ ನಾ ಸೇರಿದೆ,
ಆ ಹೂವಿನ ನಗೆಯಲ್ಲಿ ನಗುತ ನಾ ಮರೆಯಾದೆ.
ಯಾರು ಬರಲಿಲ್ಲ ನನ್ನ ಹುಡುಕಲೆಂದು,
ಆ ಹೂವು ಬಿಟ್ಟು ಹೋಯಿತು ನನನ್ನು ಬೇಡ ಎಂದು,
ಅಲ್ಲಿಯೇ ಕಾದಿರುವೆ ಆ ಹೂವು ಒಮ್ಮೆಯಾದರು ನನಗಾಗಿ ಬರುವುದೆಂದು,
ಕಾದು ಸೋತಿರುವೆ ಈ ಜೀವನದಲ್ಲಿ ಇಂದು,
ಆದರು ನನ್ನ ಪ್ರೀತಿ ಸಾಯದು ಎಂದೆಂದೂ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!