ಹಿನ್ನೆಲೆ:
೧. ಇಬ್ಬರೂ ಸಿರಿವಂತ ಕುಡುಂಬದವರು.
೨. ಇಬ್ಬರೂ academically ಬುದ್ದಿವಂತರು.
೩. ವಿದೇಶದಲ್ಲಿ ಓದಿದವರು.
೪. ತಂದೆ ಪ್ರತಿಷ್ಟಿತರು ಹಾಗೂ ವಕೀಲರಾಗಿದ್ದವರು.
೫. ಆಂಗ್ಲ ಮಾಧ್ಯಮದಲ್ಲಿ ಓದಿದ್ದವರು.
ವ್ಯಕ್ತಿ ಚರಿತ್ರೆ:
೧. ಸುಭಾಷ್ ಮದ್ಯಪಾನ ಮಾಡುತ್ತಿದ್ದರು, ನೆಹರೂ-ಗೊತ್ತಿಲ್ಲ.
೨. ಇಬ್ಬರೂ ಸಿಗರೇಟು ಸೇದುತ್ತಿದ್ದರು.
೩. ಸುಭಾಷ್ ಮಾಂಸಾಹಾರಿ, ನೆಹರೂ- ಗೊತ್ತಿಲ್ಲ.
೪. ಇಬ್ಬರಿಗೂ ಬಟ್ಟೆಗಳ ಶೋಕಿಯಿತ್ತು.
೫. ಇಬ್ಬರೂ ಉತ್ತಮ ವಾಗ್ಮಿಗಳು.
೬. ಇಬ್ಬರಿಗೂ ಸಿರಿವಂತ ಜೀವನದ ಅಭ್ಯಾಸವಿತ್ತು.
ರಾಜಕೀಯ:
೧. ವಿದೇಶದ ನೆರವು ಪಡೆದು ದೇಶವನ್ನು ಮುನ್ನಡೆಸಬೆಕೆಂಬ ಇಚ್ಛೆ.
೨. ಪ್ರಧಾನಿಯಾಗುವ ಆಕಾಂಕ್ಷೆ.
೩. ಸಮಾಜವಾದಿಗಳು.
೪. ಕೈಗಾರಿಕೆಗಳನ್ನು ಸ್ಥಾಪಿಸಬೆಕೆಂಬ ಕನಸು.
೫. ಇಬ್ಬರೂ ಗಾಂಧಿಜಿಯನ್ನು ಹೊರಗೆ ಹೊಗಳುತ್ತಿದ್ದರೂ ಸ್ವತಃ ನಡೆದುಕೊಳ್ಳುತ್ತಿದ್ದ ರೀತಿಯೇ ಬೇರೆ ಇತ್ತು. ಸುಭಾಷ್ ಸಹ ಸ್ವತಂತ್ರಾನಂತರ ಗಾಂಧಿಜಿಯ ತತ್ವಗಳು ಯೋಚಿಸಲು ಅನರ್ಹ ಎನ್ನುವ ಸಾಧ್ಯತೆಗಳು ಇಲ್ಲದಿಲ್ಲ ಏಕೆಂದರೆ ಇಬ್ಬರ ಆಡಳಿತ ಯೋಜನೆಗಳು ಒಂದೇ ಆಗಿದ್ದವು!
ತಪ್ಪುಗಳು:
ನೆಹರೂ ತಪ್ಪು ಪಾಲಿಸಿಗಳನ್ನು ಅಪ್ಪಿಕೊಂಡು ಶಾರ್ಟ್‌ಕಟ್ ಎಕಾನಾಮಿಗೆ ಮೊರೆ ಹೋಗಿ ದೇಶವನ್ನು ಮುಳುಗಿಸಿದರು. ಸುಭಾಷ್ ಸರಿಯಾದ ಸಮರಯೋಜನೆ ಇಲ್ಲದೇ ಸಾವಿರಾರು ಸೈನಿಕರ ಸಾವಿಗೆ ಕಾರಣರಾದರು. ನೆಹರೂ ಬದಲು ಸುಭಾಷ್ ಪ್ರಧಾನಿಯಾಗಿದ್ದರೆ ಈಗಿನ ಸ್ಥಿತಿಗಿಂತ ಭಿನ್ನವಾಗಿಯೇನೂ ಇರುತ್ತಿರಲಿಲ್ಲ. ಯಾಕೆಂದರೆ ಇಬ್ಬರ ಆಡಳಿತ ಪಾಲಿಸಿಗಳು ಒಂದೇ ಆಗಿದ್ದವು! ಹೆಚ್ಚೆಂದರೆ ಸುಭಾಷ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನದ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಅಮೇರಿಕಾ ಎಂದಿನಂತೆ ಸಮಸ್ಯೆ ತಂದೊಡ್ಡುತ್ತಿತ್ತು!
ಇನ್ನೊಂದು ವಿಷಯ ೧೯೩೯ ರ ಕಾಂಗ್ರೆಸ್ ಚುನಾವಣೆಯಲ್ಲಿ ಬೋಸ್ ಪರವಾಗಿ ಭರ್ಜರಿ ಪ್ರಚಾರ ನಡೆದಿತ್ತು! ಪಟ್ಟಾಭಿ ಸೀತಾರಾಮಯ್ಯ ನಾಲ್ಕು ಕಾರುಗಳನ್ನು ನಾಲ್ಕು ಕಡೆ ಕಳಿಸಿ ನಾನು ಚುನಾವಣೆಗೆ ನಿಂತಿದ್ದೇನೆ ಎಂದಷ್ಟೇ ಹೇಳಿದರು. ಮುತ್ತುರಾಮಲಿಂಗಂ ತೇವಾರರು ಸ್ವತಃ ಮುತುವರ್ಜಿ ವಹಿಸಿ ಸುಭಾಷರಿಗೆ ಬಡಗಣಪ್ರಾಂತದ ಎಲ್ಲ ಓಟುಗಳನ್ನು ಗಳಿಸಿಕೊಟ್ಟರು. ಎಷ್ಟೋ ಜನರಿಗೆ ಪಟ್ಟಾಭಿಯವರು ಚುನಾವಣೆಗೆ ನಿಂತಿದ್ದೇ ಗೊತ್ತಿರಲಿಲ್ಲ!!!
ಪ್ರತಿಕ್ರಿಯೆ (12)