ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ
ಮುನಿಸುರಗದ ಮಡು ಮರಣ ಮೃದಂಗದಿ ಮನುಜರ ಮುಡಿಗೆಡವಿಕ್ಕುತಿದೆ..
ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು
ಮಲೆಮರಗಳ ಮಧುವತ್ತರ ಮಡಿ ಮೈನೆತ್ತರ ಮೊತ್ತದೆ ಮೆತ್ತಿಹುದು..
ಮುಂದಾಲೋಚನೆ ಮರೆತಿಹ ಮೆದುಳಲಿ ಮದದಾಲಾಪವ ಮಸೆವವಗೆ
ಮಾನಿನಿ-ಮಗು-ಮುತ್ತೈದೆ-ಮುದುಕನೇನ್ ಮಸಣದ ಮಂಚವೆ ಮಂದಲಿಗೆ..
ಮದ್ದುಗುಂಡಿನಲೆ ಮಾತಿಗುತ್ತರವ ಮರಳಿಸೊ ಮಾರಿಯ ಮಕ್ಕಳಿಗೆ
ಮಲೆ-ಮನೆ-ಮನ ಮಮತೆಯ ಮರೆವಾಗಿದೆ ಮೃತ್ಯುಮಾನುಷದ ಮೈಯೊಳಗೆ..
ಮಾತೆಯ ಮಮತೆಯ ಮಡಿಲಿನ ಮಗುವಿಗು ಮೈವೆತ್ತುತಲೇ ಮೈನಡುಗು
ಮಲೆನಾಡಿನ ಮಾಂಕವಿಗಳೆ ಮನ್ನಿಸಿ, ಮಲೆಗಳಲಿಲ್ಲ ಮದುಮಗಳು!
-ವಿನಾಯಕ ಕುರುವೇರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!