ನೆರಳನಿನಿತನು ಕೊಡುವ, ದಣಿವನಿನಿತು ಕಳೆವ|
ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ||
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ|
ಪರಧರ್ಮವದೆಲವೋ- ಮಂಕುತಿಮ್ಮ||