ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು|
ಏನನೋ ನೆನೆದು ಸರ್ರೆಂದು ಹಾರುವುದು||
ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ|
ನೀನದನು ಮೀರಿಹೆಯೇ? ಮಂಕುತಿಮ್ಮ ||