ಅಪ್ಪಟ ಕನ್ನಡ ಪ್ರದೇಶವಾದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕನ್ನಡ ಪ್ರದೇಶವನ್ನು ಒತ್ತುವವಿ ಮಾಡಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಮ್ಮ ಸರಕಾರ ಮತ್ತು ಇತರ ಚುನಾವಣೆಯಲ್ಲಿ ಆಯ್ಕೆಯಾದ ನಾಯಕರುಗಳು ದನಿಯೆತ್ತದಿರುವುದು ಒಂದು ದೊಡ್ಡ ದುರಂತ. ಈ ಸಮಯದಲ್ಲಿ ಸುಮ್ಮನಿದ್ದರೆ ಹೊಗೇನಕಲ್ ಕರ್ನಾಟಕದ ಕೈತಪ್ಪಿ ಹೋಗುವುದು ಖಂಡಿತ.
ಹೊಗೇನಕಲ್ ಅಕ್ರಮ ಯೋಜನೆ ವಿರುದ್ದ ಪ್ರತಿಭಟನೆ ನಡೆಸುತ್ತರುವ ಕರವೇಗೆ ಬೆಂಬಲಿಸಿ ಹೊಗೇನಕಲ್ ಅನ್ನು ಕನ್ನಡ ಪ್ರದೇಶವಾಗಿಯೇ ಉಳಿಸಿಕೊಳ್ಳೋಣ

ಅಕ್ರಮ ಯೋಜನೆ ವಿರುದ್ದ ಖಂಡನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು-
- ಹೊಗೇನಕಲ್ ಕಾಮಗಾರಿಯನ್ನು ತಮಿಳುನಾಡು ಸ್ಥಗಿತಗೊಳಿಸಬೇಕು.
- ಕೇಂದ್ರ ಕೂಡಲೇ ಜಂಟಿ ಸಮೀಕ್ಷೆ ಕೈಗೊಳ್ಳಬೇಕು.
- ಕೇಂದ್ರದ ಮೇಲೆ ಒತ್ತಡ ಹೇರಲು ಸರಕಾರ ಸರ್ವ ಪಕ್ಷಗಳ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಬೇಕು.
- ಯೋಜನೆ ಕುರಿತು ಸಂಸತ್ತಿನಲ್ಲಿ ದನಿ ಎತ್ತುವಲ್ಲಿ ವಿಫಲವಾಗಿರುವ ರಾಜ್ಯದ ಸಂಸತ್ ಸದಸ್ಯರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು.
- ಕೇಂದ್ರ ಗ್ಯಾರಂಟಿ ನೀಡಿರುವುದರಿಂದ ಹೊಗೇನಕಲ್ ಯೋಜನೆಗೆ ಜಪಾನ್ ಕೊಟ್ಯಾಂತರ ರೂ ನೆರವು ನೀಡಿದೆ. ಭದ್ರತಾ ಪತ್ರವನ್ನು ಕೇಂದ್ರ ವಾಪಸ್ ಪಡೆದುಕೊಳ್ಳಬೇಕು.
- ಯೋಜನೆ ಸ್ಥಗಿತಗೊಂಡಿದೆ ಎಂದು ಕೇಂದ್ರ ಘೋಷಿಸುವ ತನಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗುವುದು, ತಮಿಳು ಸಿನೆಮಾ ಮತ್ತು ಕೇಬಲ್ ಚಾನೆಲ್ ಗಳನ್ನು ಬಹಿಷ್ಕರಿಸಲಾಗುವುದು.
ಖಂಡನಾ ಸಭೆಯ ಪತ್ರಿಕಾ ವರದಿಯನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಿ-
___LINK_OPEN_href="http://karave.blogspot.com/2010/04/hogenakal-khandana-sabhe.html" target="_blank"___http://karave.blogspot.com/2010/04/hogenakal-khandana-sabhe.html
ಪ್ರತಿಕ್ರಿಯೆ (1)