ಮೊದಲೊಮ್ಮೆ ಹೀಗಾಗಿತ್ತು... ಓನರ್ ಸಂಸಾರ ಪಿಕ್ನಿಕ್ ಗೆಂತ ಹೊರಗಡೆ ಹೋಗಿತ್ತು.ನಿಶಾ ಆ ದಿನವನ್ನು ಜ್ಞಾಪಿಸಿಕೊಂಡಳು
ಕೃಷ್ಣ ಹೀಗೇ ಸಂಭ್ರಮ ಪಟ್ಟಿದ್ದ, ಆ ದಿನ ಹನ್ನೆರಡು ಗಂಟೆಗೇ ಆಫೀಸಿನಿಂದ ಹೊರಡ ಬೇಕಿದ್ದವ ಬಾಲ್ಕನಿ ನೋಡಿದಾಗ ರೆಡ್ ಸಿಗ್ನಲ್ ಕಂಡಿತು. ಅಂತೂ ಬರುವ ಸಮಯಕ್ಕೇ ಎಂದರೆ ಒಂದು ಗಂಟೆಗೇ ಮನೆಗೆ ಬರುವಾಗ ಕೂಡಾ ಟವೆಲ್ ಅದರ ಜಾಗದಲ್ಲೇ ಇತ್ತು.ಮನೆಯೊಳಗೆ ಬಂದು ನೋಡಿದರೆ ಮಿಟುಕಲಾಡಿ ನಳಿನಿ ತನ್ನ ಮಗನೊಂದಿಗೆ ವಕ್ಕರಿಸಿದೆ! ಇವರನ್ನು ನೋಡಿ "ಶರ್ಮಾಜಿ ಹೊರಗಡೆ ಹೋಗಿದ್ದಾರೆ ನಿಶಾ ಸಹಾ ತುಂಬಾ ದಿನಗಳಿಂದ ಬನ್ನಿ ಬನ್ನಿ ಅಂತ ಕರೆಯುತ್ತಿದ್ದಳು, ಅದಕ್ಕೆ ಬಂದೆ "ಎಂದಳು. ಇವರೂ ಕಿರುನಗೆ ನಕ್ಕು ಸುಮ್ಮನಾಗಿದ್ದರು. ಬಂದವಳು ರಾತ್ರೆಯ ಊಟ ಮುಗಿಸಿಯೇ ಅಂದರೆ ಮನೆ ಓನರ್ ಸಂಸಾರ ಬಂದ ಮೇಲೆಯೇ, ಅದೂ ಶರ್ಮಾಜಿ ಬಂದು ಕರಕೊಂಡು ಹೋದದ್ದು. ಮಾರನೆಯ ದಿನ ಗೊತ್ತಾಗಿದ್ದುದು, ಹಿಂದಿನ ದಿನವಿಡೀ ಶರ್ಮಾಜಿಗೆ ಉಪವಾಸವೇ. ಆಗ ಅವರ ಕಷ್ಟ ನೋಡಿ ಇವರೇ ಹೇಳಿದ್ದರು ನಮ್ಮ ನಮ್ಮಲ್ಲಿ ಏನು ಸಂಕೋಚ ಹಾಗೇನಾದರೂ ಬೇಕಿದ್ದರೆ ನಮ್ಮಲ್ಲೇ ಊಟ ಮಾಡಿಕೊಂಡು ಹೋಗಬಹುದಿತ್ತಲ್ಲ ಅಂತ. ಆದರೆ ಆಮೇಲಾಮೇಲೆ ನಳಿನಿ ಮನೆಗೆ ಬರುವುದೂ ಇನ್ನೂ ಜಾಸ್ತಿಯಾದಾಗ ಮಾತ್ರ ಕೃಷ್ಣನೇ ನಿಶಾಗೆ ಹೇಳಿದ್ದ ಗಂಡ ಮನೆಯಲ್ಲಿರುವಾಗ ಹೀಗೆ ಯಾರನ್ನು ಅಹ್ವಾನಿಸೋದು ಇಷ್ಟವಿಲ್ಲ ಅಂತ. ಆದರೆ ಅವಳು ಕೇಳಬೇಕಲ್ಲ? ಬಂದರೂ ಅವಳು ಹೇಳುವ ವಿಷಯವೆಲ್ಲಾ ಆಚೆ ಈಚೆಯವರ ಬಗೆಗೇ. ಆಗೆಲ್ಲ ಒಮ್ಮೆ ಕಡಾಖಂಡಿತವಾಗಿ ಬೇರೆಯವರ ವಿಷಯ ಹೇಳೋದಾದರೆ ತನಗದೆಲ್ಲ ಇಷ್ಟವಿಲ್ಲ ಎಂದಾಗ ಅವಳು ಮನೆಗೆ ಬರುವುದು ಕಡಿಮೆಯಾಯಿತು. ಆದರೆ ಆಫೀಸಿನ ಪಾರ್ಟಿಯಲ್ಲೆಲ್ಲಾ ಇದೇ ವಿಷಯಗಳಲ್ಲದೇ ಬೇರೆ ವಿಷಯವೇ ಇಲ್ಲದೇ ನಿಶಾಳಿಗೆ ತುಂಬಾ ಬೇಸರವಾಗುತ್ತಿತ್ತು. ಆದರೇನು ಇದೂ ಒಂದು ಸಂಸ್ಕೃತಿ.
ತನಗೆ ತಾನೇ ಸಮಾಧಾನ ತಂದುಕೊಂಡು, ಶರ್ಮನ ಮನೆಗೆ ಹೋಗಿ ಕೇಳಿಯಾದ್ರೂ ಬರಬೇಕು ಎಂದುಕೊಂಡು ಮನೆಗೆ ಬೀಗ ಹಾಕಿ ಹೊರ ಹೊರಟಳು.
ಶರ್ಮ ಮನೆಯಲ್ಲೇ ಇದ್ದ. "ಬನ್ನಿ ನಿಷಾ ರವರೇ" ಎಂದು ತನ್ನ ಹೆಂಡತಿಯನ್ನು ಕೂಗಿ ಕರೆದ." ನೋಡು ಕೃಷ್ಣ ರವರ ಮಿಸೆಸ್ ಬರುತ್ತಾ ಇದ್ದಾರೆ ನೋಡು"
" ಸಂಜೆಯಾದ್ರೂ ಇವರು ಮನೆಗೆ ಬರಲಿಲ್ಲ ನಿಮಗೇನಾದ್ರೂ ಗೊತ್ತಿದೆಯಾ ಅಂತ ಕೇಳಲು ಬಂದೆ’ಕೇಳಿದರೆ.
"ನನಗೆ ಗೊತ್ತಿಲ್ಲವಲ್ಲ, ಸುಮಾರು ಒಂದು ಗಂಟೆಗೇ ಆಫೀಸಿನಿಂದ ಹೊರಟಿದ್ದರಲ್ಲ, ಇನ್ನೂ ಬರಲಿಲ್ಲವೆಂದರೆ ಏನರ್ಥ? ಇವತ್ತಂತೂ ಬಾಸೂ ಆಫೀಸಲ್ಲಿಲ್ಲ, ನಾನಂತೂ ಹನ್ನೆರಡೂವರೆಗೆ ಬಂದವನು ಮಧ್ಯಾಹ್ನ ಸಹಾ ಹೋಗಲೇ ಇಲ್ಲ , ಒಳ್ಳೆಯ ರೆಸ್ಟ ಆಯಿತು ಇವತ್ತು" ಎಂದು ನಗಾಡಿದ ಒಂದು ತರಹ ಮುಖ ಮಾಡಿ.
ಅಷ್ಟರಲ್ಲಿ ಮಿಟುಕಲಾಡಿ ನಳಿನಿ ಒಳಗಿನಿಂದ ಹೊರಗೆ ಬಂದಳು.
"ಓಹ್ ನಿಷಾ ಬನ್ನಿ ಬನ್ನಿ, ಯಾಕೆ ನಿಮ್ಮ ಯಜಮಾನರು ಬರಲೇ ಇಲ್ಲವಾ, ನಾನೂ ಅಂದುಕೊಂಡಿದ್ದೆ, ಸುಮಾರು ಒಂದೂವರೆಯ ಹೊತ್ತಿಗೆ ಬಾಸ್ ನ ಹೆಂಡತಿ ನಿಮ್ಮ ಗಂಡನ ಮೋಟರ್ ಸೈಕಲ್ಲಿನಲ್ಲಿ ಹಿಂದೆ ಕುಳಿತು ಎತ್ತಲೋ ಹೊರಟ ಹಾಗಿತ್ತು, ತುಂಬಾ ಸಿಂಗರಿಸಿಕೊಂಡ ಹಾಗೆ ಕಂಡಿತು, ನಿನ್ನ ಗಂಡನ್ನ ಸ್ವಲ್ಪ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕಪ್ಪ, ನಿನ್ನ ಮದುವೆಯಾಗಿ ಆರು ತಿಂಗಳಿಗೇ ಹೀಗಾದ್ರೆ ಹೇಗಮ್ಮಾ? ನಾನು ನೋಡು, ಮದುವೆಯಾಗಿ ಹತ್ತು ವರ್ಷವಾದ್ರೂ ನನ್ನ ಅನುಮತಿ ಇಲ್ಲದೇ ಇವರು ಒಂದು ಹಂಚಿಕಡ್ಡಿಯನ್ನೂ ಆಚೆ ಇಟ್ಟವರಲ್ಲ"
ಒಮ್ಮೆಗೇ ತನ್ನ ಮುಖ ಬಾಡಿದ್ದು ನೋಡಿ ಶರ್ಮಾ ನಕ್ಕು ಹೇಳಿದ್ದ
" ಹಾಗೇನಿಲ್ಲ ನಿಷಾರವರೇ ಎನಾದರೂ ಕೆಲಸವಿತ್ತೋ ಏನೋ ಅದಕ್ಕೇ ಕರಕೊಂಡು ಹೋಗಿರಬಹುದು ಬರ್ತಾರೆ ಬಿಡಿ, ನೀವು ಮನೆಗೆ ಹೋಗಿ ನಾನು ವಿಚಾರಿಸ್ತೀನಿ"
ಮಧ್ಯೆ ಬಾಯಿ ಹಾಕಿದ ನಳಿನಿ
"ಎಲ್ಲಿ ಏನು , ಯಾವುದಾದರೂ ಅಡಲ್ಟ್ ಸಿನೇಮಾಕ್ಕೆ ಹೋಗಿರಬಹುದು, ನನಗೆ ನೋಡಿದ ಕೂಡಲೇ ಗೊತ್ತಾಗುತ್ತೆ , ಯಾರು ಎಂತವರು ಅಂತ,ನಾನು ಈಗಲೇ ಹೇಳ್ತೀನಿ ನಿಷಾ, ಇಲ್ಲಿಗೆ ಬಂದು ಇಷ್ಟು ದಿನ ಆಯ್ತು ನಿನ್ನ ಒಂದು ಸಿನೇಮಾಕ್ಕೆ ಕರಕೊಂಡು ಹೋಗಿರ್ಲಿಲ್ಲ, ಬಾಸ್ ಹೆಂಡತಿ ಯಾದರೆ ಏನು ಅವಳಿಗೆ ಸ್ವತಹ ಹೋಗಲು ಆಗುವುದಿಲ್ಲವಾ? ಎಂತಹ ಜನರು ನೋಡಿ, ನೀವು ಮಾತ್ರ ತುಂಬಾ ಜಾಗೃತೆಯಲ್ಲಿರಬೇಕು, ಯಾವ ಹುತ್ತದಲ್ಲಿ ಯಾವ ಹಾವೋ ನಾ ಕಾಣೇ, ಈಸಾರಿ ನಾನು ನೋಡಿದೆ, ಗೊತ್ತಾಯ್ತು, ಯಾವಾಗಲಿಂದ ನಡೆಯುತ್ತಿತ್ತೋ ಯಾರಿಗೆ ಗೊತ್ತು" ಎಂದಳು ಕೈ ತಿರುವುತ್ತ ನಾಟಕೀಯವಾಗಿ.
ತನಗೆ ಯಾಕೆ ಬಂದೆನೋ ಇಲ್ಲಿ ಅಂತ ತನ್ನನ್ನು ತಾನೇ ಬೈದುಕೊಳ್ಳುವ ಹಾಗೆ ಆಯಿತು ಒಂದು ಮಾತೂ ಆಡದೇ ಅಲ್ಲಿಂದ ಸೀದಾ ತನ್ನ ಮನೆಗೇ ವಾಪಾಸ್ಸು ಬಂದಿದ್ದೆ.
ಮನಸ್ಸು ಗೀಜಗನ ಗೂಡಾಗಿತ್ತು ತಾನು ಬಂದ ಹೊಸತರಲ್ಲಿನ ಒಂದು ಘಟನೆ ನೆನಪಾಯಿತು. ಒಂದು ದಿನ ಕೃಷ್ಣ ಹೇಳಿದ್ದ "ಇವತ್ತು ನಮ್ಮ ಬಾಸ್ ನ ಹೆಂಡತಿ ಆಫೀಸಿಗೆ ಬಂದಿದ್ದರು. ಬಾಸ್ ನನ್ನನ್ನು ಕರೆದು ಪರಿಚಯ ಮಾಡಿಸಿ ಕೊಟ್ಟ" ಮದ್ಯೆ ಬಾಯಿ ಹಾಕಿ ತಾನೇ ಕೇಳಿದ್ದೆ" ಹೌದಾ! ಬಾಸ ನ ಹೆಂಡತಿ ಹೇಗಿದ್ದಾಳೆ?" ಅದಕ್ಕಾತ "ಹೇಗಿರ್ತಾಳೆ ಬಾಸನ ಹೆಂಡತಿಯ ಹಾಗೇ ಬೆಳ್ಳಗಾಗಿ ಚೆನ್ನಾಗಿದ್ದಾಳೆ, ಅವಳಿಗೆ ಎಷ್ಟು ವರ್ಷಾಂತ ಗೊತ್ತಾಗೋದೇ ಇಲ್ಲ, ಅಷ್ಟು ಮೈನಟೈನ್ ಮಾಡಿಕೊಂಡಿದ್ದಾಳಂತೆ" ಹಾಗೆಂದ ಕೂಡಲೇ ತನಗೆ ಅಸೂಯೆ ಯಾಗಿದ್ದುದು ನಿಜ ಗಂಡಬೇರೆ ಹೆಂಗಸ್ರನ್ನು ಹೊಗಳಿದರೆ ಯಾವ ಹೆಂಗಸಿಗಾದ್ರೂ ಅಸೂಯೆ ಸಹಜ ಅಲ್ಲವೇ! ಅಷ್ಟರಲ್ಲಿಯೇ ಆತ ನನ್ನ ಮುಖವನ್ನು ನೋಡಿ " ಅರೇ ನಾನಲ್ಲ ಈ ಮಾತು ಹೇಳಿದ್ದು, ಆ ನಳಿನಿಯ ಗಂಡ ಶರ್ಮಾ ಹೇಳಿದ್ದು, ಏಜಾಗಿದೆ ಅವಳಿಗೆ, ಇನ್ನೂ ಮಕ್ಕಳೇ ಆಗ್ಲಿಲ್ಲ ಪಾಪ", ಎಂದೆಲ್ಲ ಹೇಳಿ ಸಮಧಾನ ಮಾಡಿದ್ದ.ಆದರೆ ಇದೇ ವಿಷಯ ಇವತ್ತು ನೆನಪಾದಾಗ ಗಂಡನ ಅಂದಿನ ಆ ಮಾತಿಗೆ ಬೇರೆಏನಾದ್ರೂ ಅರ್ಥವಿತ್ತೇ ಅಂತ ಕಸಿವಿಸಿಯಾಯ್ತು. ತನ್ನ ಗಂಡನ ಮೇಲೆ ಸಂಶಯವಿರಲ್ಲಿಲ್ಲ ನಿಜ, ಆದರೆ ಆ ಉತ್ತರ ಭಾರತದ ಬಾಸ್ ನ ಹೆಂಡತಿಯ ಮೇಲಿರಲಿಲ್ಲವಲ್ಲ. ಈಗಂತೂ ಏಕಾಂಗಿಯೆನಿಸಿ, ತವರೂರ ನೆನಪು ಒಮ್ಮೆಲೇ ಬಂದು ಬೋರೆಂದು ಅತ್ತಳು ನಿಷಾ.
ಅಷ್ಟರಲ್ಲಿ ಬಾಗಿಲ ಸದ್ದಾಯಿತು,ಮುಖ ವರೆಸಿಕೊಂಡು ನಿಧನವಾಗಿ ಬಾಗಿಲು ತೆರೆದಳು, ಮನೆಯ ಓನರ್ ಹೆಂಡತಿ ಮಕ್ಕಳ ಸಮೇತ ಪಿಕ್ನಿಕ್ ಮುಗಿಸಿ ವಾಪಸ್ಸಾಗಿದ್ದರು. ಮಕ್ಕಳು ಓನರ್ ಹೆಂಡತಿ ತುಂಬಾ ಖುಷಿಯಲ್ಲಿದ್ದರು. ಅವರನ್ನು ನೋಡಿ ನಿಷಾಳಿಗೆ ಗಂಡನ ಬೆಳಗಿನ ಮಾತೆಲ್ಲವೂ ನೆನಪಿಗೆ ಬಂತು. ಸೀದಾ ತನ್ನ ರೂಮಿಗೆ ಹೋಗಿ ಅತ್ತು ತನ್ನೆಲ್ಲ ದುಖವನ್ನು ಹೊರಹಾಕಿಕೊಂಡಳು.
ಧುತ್ತೆಂದು ಇನ್ನೊಂದು ವಿಷಯ ನೆನಪಾಯ್ತು ನಿಷಾಗೆ. ಪಕ್ಕದ ಮನೆಯ ಉತ್ತರದ ಹೆಂಗಸಿನ ಜತೆ, ಅವರ ಮುಖ್ಯ ವೃತವಾದ ಕರವಾ ಚೌತ್ ತಾನೂ ಮಾಡಲು ಹೊರಟಾಗ, ಕೃಷ್ಣನೂ ಜತೆಗೇ ವೃತ ಹಿಡಿದಿದ್ದ, ತನ್ನ ಯಾವ ಮಾತಿಗೂ ಜಗ್ಗದೇ. ಸುಖ ದಾಂಪತ್ಯದಲ್ಲಿ ಗಂಡ ಹೆಂಡತಿಯರ ನಡುವೆ ಪ್ರೀತಿ ವಿಶ್ವಾಸ ಬಹು ಮುಖ್ಯ. ವಿಶ್ವಾಸದಿಂದ ಪ್ರೀತಿಯೂ ಪ್ರೀತಿಯಿಂದ ವಿಷ್ವಾಸವೂ ಅಷ್ಟೇ ಹೆಚ್ಚುತ್ತಿರುತ್ತವೆ. ಇಂತಹವೆಲ್ಲ ವಿಷಯಗಳು ಅವರ ನಡುವಿನ ಪ್ರೀತಿಯನ್ನು ಸಾಣೆ ಹಿಡಿಯುತ್ತ ಹೊಳಪು ತರುತ್ತಿರುತವೆ. ನೀನು ಗಂಡನಿಗಾಗಿ ಅವನ ದೀರ್ಘ ಆಯುಷ್ಯಕ್ಕಾಗಿ ಇಡೀ ದಿನ ನಿರ್ಜಲ ವೃತ ಹಿಡಿಯಬಹುದಾದರೆ, ಪ್ರೀತಿಯ ಹೆಂಡತಿಯ ಅರೋಗ್ಯಕ್ಕಾಗಿ ತಾನು ಯಾಕೆ ಹಿಡಿಯಬಾರದು? ಎಂದು ಮೂಗು ಹಿಡಿದಾಗ ಅವಳಿಗೆ ಏನು ಹೇಳಲೂ ತೋಚಲೇ ಇಲ್ಲ. ದಿನವಿಡೀ ನೀರು ಸಹಾ ಕುಡಿಯದೇ ಇರಲು ಅಸಾಧ್ಯ ಎನ್ನಿಸಿದ್ದರೂ, ಗಂಡನೂ ತನ್ನ ಹಾಗೇ ಉಪವಾಸ ಇದ್ದಾನಲ್ಲ ಎನ್ನುವ ನೆನಪೇ ಅವಳಿಗೆ ಸಾವಿರ ಬಲ ತಂದಿತ್ತು. ರಾತ್ರೆ ಚಂದ್ರನ ನೋಡಿವೃತ ಮುಗಿಸಿ, ಇಬ್ಬರೂ ತಮ್ಮ ಪ್ರೀತಿಯನ್ನು ಇನ್ನೂ ಗಟ್ಟಿ ಮಾಡಿಕೊಂಡಿದ್ದರು.. ಅಂತಹ ನನ್ನ "ಇವರು" ಬದಲಾಗಲು ಸಾಧ್ಯವೇ ಇಲ್ಲ ಎಂದೆನ್ನಿಸಿ ಸಮಾಧಾನವಾಯ್ತವಳಿಗೆ.
ಸುಮಾರು ಎಂಟೂವರೆಗೆ ಬಾಗಿಲ ಸದ್ದಾಯಿತು, ಈಗ ಓನರೇ ಬಾಗಿಲು ತೆರೆದ. "ಬನ್ನಿ ಕಲ್ಲೂರಾಮ್ ಅವರೇ",
ಅಂದರೆ ಗಂಡನ ಬಾಸ್! ಇವರು ಇಷ್ಟೊತ್ತಿನಲ್ಲಿ ಇಲ್ಲಿಗೇಕೆ ಬಂದರು? ಎಂದುಕೊಳ್ಳುವಾಗಲೇ ಅವರು ಕೈಯ್ಯಲ್ಲೊಂದು ಸಿಹಿ ತಿಂಡಿಯ ಪೊಟ್ಟಣ ಹಿಡಿದು ನಗುತ್ತ ತನ್ನ ಕಡೆ ಬರುವುದು ಕಂಡು ತಾನೇ ಎದ್ದು ಬಂದಳು ಹಾಲಿಗೆ ನಿಷಾ." ಇದೇನು ಸರ್ ನೀವು ಒಬ್ಬರೇ ಇಲ್ಲಿ, ಯಜಮಾನ್ರೂ ಕೂಡಾ ಇನ್ನೂ ಬರಲ್ಲಿಲ್ಲವಲ್ಲ" ಎಂದಳು ದುಗುಡವನ್ನು ತೋರಿಸಿಕೊಳ್ಳದೇ."ಇವತ್ತು ನನ್ನ ಶ್ರೀಮತಿಯವರ ತಂದೆ ತಾಯಿಯವರು ಬರುವವರಿದ್ದರು, ನಾನೇ ರೈಲು ನಿಲ್ದಾಣದಲ್ಲಿ ಅವರನ್ನು ಕರೆತರಲು ಹೋಗಬೇಕಾಗಿತ್ತು ಕೆಲಸದ ಗಡಿಬಿಡಿಯಲ್ಲಿ ನಾನು ಇದನ್ನ ಮರೆತಿದ್ದೆ, ನಿಮ್ಮ ಯಜಮಾನರು ನನ್ನ ಹೆಂಡತಿಯನ್ನು ಕರಕೊಂಡು ಹೋಗಿರದಿದ್ದರೆ ನನ್ನ ಹೆಂಡತಿ ನನ್ನನ್ನು ಜನ್ಮವಿಡೀ ಜಾಲಾಡುತ್ತಿದ್ದಳು, ಯಾಕೆಂದರೆ ನಿಲ್ದಾಣದಿಂದ ಬರುವಾಗ ಮಾವನವರಿಗೆ ಆಕ್ಸಿಡೆಂಟ್ ಬೇರೆ ಆಯ್ತಂತೆ,ಯಾರೋ ಅವರನ್ನು ಆಸ್ಪತ್ರೆಗೆ ಸೇರಿಸಿ ಟೆಲಿಫೋನ್ ಮಾಡಿ ನನ್ನ ಹೆಂಡತಿಗೆ ಹೇಳಿದಾಗ ಅವಳಿಗೆ ಏನು ಮಾಡಬೇಕಂತ್ಲೇ ಗೊತ್ತಾಗಲಿಲ್ಲವಂತೆ, ಆಗ ಆಪದ್ಭಾಂದವರಾಗಿ ನಿಮ್ಮ ಯಜಮಾನರು ತಮ್ಮ ಅಪರೂಪದ ಗ್ರೂಪಿನ ರಕ್ತ ಬೇರೆ ತಾನೇ ಕೊಟ್ಟು ಸಹಾಯ ಮಾಡಿದರು ,ನನ್ನ ಶ್ರೀಮತಿಯವರು ಅವರನ್ನ ತನ್ನ ತಮ್ಮನೇ ಅಂದುಕೊಳ್ತಿದ್ದಾರೆ, ಅವರ ಈ ಸಹಾಯ ನಾನು ಎಂದಿಗೂ ಮರೆಯಲ್ಲಮ್ಮ, ಅಂದ ಹಾಗೆ ಆತ ಇದೆಲ್ಲ ಮೇಸೇಜು ಕಳುಹಿಸಿದ್ದು ನಿನಗೆ ಸಿಗಲಿಲ್ಲವಾ?"
ನಿಷಾಳ ಸಂತೋಷಕ್ಕೆ ಪಾರವಿರಲಿಲ್ಲ, ಅಂದರೆ ಮಿಟುಕಲಾಡಿ ಹೇಳಿದ್ದೆಲ್ಲ ಸುಳ್ಳೇ," ಈಗೆಲ್ಲಿದ್ದಾರೆ ಸಾರ್ ಅವರು?"
ದುಗುಡ ತುಂಬಿದ ನಿಷಾಳ ಮಾತಿಗೆ ಅವರೆಂದರು ನಗುತ್ತಾ "ಕೃಷ್ಣ ಬರ್ತಾನೆ ಬಿಡಮ್ಮ, ಓಹ್! ಇನ್ನೊಂದು ವಿಷಯ, ಹೇಳಲು ಮರೆತಿದ್ದೆ, ನಾಳೆಯಿಂದ ನೀನು ಕೃಷ್ಣನೂ ಒಂದು ವಾರದ ರಜೆಯ ಮೇಲಿರ್ತೀರಾ, ಇದು ನನ್ನ ಕಡೆಯಿಂದ,ಎಲ್ಲಿಗೆ ಬೇಕಾದರೂ ಹೋಗಿ, ತಿರುಗಾಡಿಕೊಂಡು ಬನ್ನಿ.ಖರ್ಚೆಲ್ಲ ಕಂಪೆನಿಯದ್ದು ಓ ಕೇ, ಇನ್ನು ನಾನು ಹೋಗ್ತೇನೆ ಈ ಸ್ವೀಟಿನ ಡಬ್ಬ ತಗೋಳ್ಳಮ್ಮ." ಕಲ್ಲೂರಾಮ್ ಹೊರಟರು.
ಓಡಿ ಹೋಗಿ ತನ್ನ ಮೊಬೈಲ್ ಎತ್ತಿದಾಗಲೇ ಗೊತ್ತಾಗಿದ್ದುದು, ಎಲ್ಲವೂ ಖಾಲಿ ಖಾಲಿ. ಈ ಗಡಿಬಿಡಿಯಲ್ಲಿ ತಾನು ಅದನ್ನು ಚಾರ್ಜು ಮಾಡಲೇ ಮರೆತಿದ್ದೆ, ಅದು ಸಂಪೂರ್ಣ ಡೆಡ್ ಆಗಿತ್ತು.
ಮತ್ತೊಮ್ಮೆ ಕರೆಗಂಟೆಯ ಸದ್ದಾಯಿತು. ಈ ಸಾರಿ ಬಾಗಿಲು ತೆರೆಯಲು ಓನರ್ ಗೆ ನಿಷಾ ಬಿಡಲಿಲ್ಲ. ಅವಳ ಮನಸ್ಸಲ್ಲೆಲ್ಲಾ ಮುಂದಿನ ತಮ್ಮ ವಾರದ ತಿರುಗಾಟದ ಕನಸೇ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)