ಪುನೀತ್ ರಾಜಕುಮಾರ್ ಅಭಿನಯದ "ಪೃಥ್ವಿ" ಚಿತ್ರವನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇವತ್ತು ನೋಡಿದೆ.ಬಾಲ್ಕನಿ ೮೫-೯೦% ತುಂಬಿತ್ತು. ಎರಡನೆ ದರ್ಜೆ ಸುಮಾರು ೬೦% ತುಂಬಿತ್ತು.
ಈ ಚಿತ್ರ ನಿಜವಾಗಿಯೂ ಸಮಾಜಿಕ ಕಳಕಳಿಯಿಂದ ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಬಳ್ಳಾರಿ ಕರ್ನಾಟಕದ ಅತಿ ಸಮೃದ್ಧ ಜಿಲ್ಲೆಗಳಲ್ಲಿ ಒಂದು. ಇಲ್ಲಿರುವ ಗಣಿಗಳಲ್ಲಿ ಅನೈತಿಕವಾಗಿ ಗಣಿಗಾರಿಗೆ ಮಾಡಿ ಕೋಟ್ಯಾಂತರ ರುಪಾಯಿ ಸಂಪಾದಿಸುತ್ತ, ರಾಜ್ಯದ ಸಂಪತನ್ನು ಲೂಟಿ ಮಾಡುತಿದ್ದಾರೆ. ಈ ಕೆಟ್ಟ ಕೊಳೆತ ರಾಜಕೀಯ ವ್ಯಯಸ್ಥೆಯ ಬಗ್ಗೆ ಉತ್ತಮವಾಗಿ ಬಿಂಬಿಸಿದ್ದಾರೆ. ಈಗ ಗಣಿಗಾರಿಗೆ ಮಾಡುತ್ತಿರುವರಲ್ಲಿ ಪ್ರಮುಖರು ಯಾರು, ಅವರು ಎಲ್ಲಿಂದ ಬಂದವರು, ಅವರಿಗೂ ನಮ್ಮ ರಾಜ್ಯಕ್ಕೂ ಏನು ನಂಟು ಮುಂತಾದ ಸೂಕ್ಶ್ಮ ಅಂಶಗಳನ್ನು ನಾಜೂಕಾಗಿ ಚಿತ್ರಿಸಿದ್ದಾರೆ.
ರಾಜಕೀಯ ನಾಯಕರು ಉದ್ಯಮಿಗಳ ಕೈ ಗೊಂಬೆಗಳು ಎನ್ನುವ ವಸ್ತು-ಸ್ಥಿತಿಯನ್ನು ಚೆನ್ನಾಗಿ ತೋರಿಸಿದ್ದಾರೆ.
ಪುನೀತ್ ರಾಜಕುಮಾರ್ ಒಬ್ಬ ಐ.ಎ.ಎಸ್ ಆಫ಼ೀಸರ್ ಆಗಿ ಕೆಲಸ ಮಾಡುತಿದ್ದು ಅವರಿಗೆ ಜಿಲ್ಲೆಯ ಪ್ರಬಲರಿಂದ ಆಗುವ ತೊಂದರೆಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ನಿಯತ್ತಾಗಿ ಕೆಲಸ ಮಾಡುವ ಸರ್ಕಾರಿ ನೌಕರನಿಗೆ ದುಷ್ಟರಿಂದ ಬರುವ ಕಷ್ಟಗಳನ್ನು ತೋರಿಸಿದ್ದಾರೆ. ಒಬ್ಬ ಆದರ್ಶ ಸರ್ಕಾರಿ ನೌಕರ ಹೇಗಿರಬೇಕು ಎಂಬುದು ಇದರಲ್ಲಿ ತಿಳಿದುಕೊಳ್ಳಬಹುದು. ಒಬ್ಬ ಮನುಶ್ಯನಿಗೆ ಸಿದ್ಧಾಂತ ಎಂಬುದು ಎಷ್ಟು ಮುಖ್ಯ ಅನ್ನುವುದನ್ನು ನೋಡಬಹುದು.
ಕಡೆಯದಾಗಿ ಮಣ್ಣನ್ನು ಅಗೆದು ಅಗೆದು ರಜ್ಯದ ಸಂಪತ್ತನ್ನು ಲೂಟಿ ಮಾಡುವ ದ್ರೋಹಿಗಳಿಗೆ ಮಣ್ಣು ಮುಚ್ಚಿ ಅವರನ್ನು ಮಣ್ಣಿನಲ್ಲೇ ಸೆರುವ ಹಾಗೇ ಮಾಡುವ ದೃಷ್ಯ ಸೊಗಸಾಗಿದೆ.
ಇದು ನಿಜಕ್ಕೂ ಅದ್ಭುತವಾದ ಚಿತ್ರ. ಇಂದು ಬಳ್ಳಾರಿಯಲ್ಲಿ ನಾಡ ದ್ರೋಹಿಗಳು ಮಾಡುತ್ತಿರುವ ಅನ್ಯಾಯದ ಬಗ್ಗೆ ಸರಿಯಾಗಿ ತೋರಿಸಿದ್ದಾರೆ.
ಪ್ರತಿಯೊಬ್ಬ ನಾಡಪ್ರೇಮಿಯೂ ಈ ಚಿತ್ರವನ್ನು ನೋಡಿ ಮುಂದಕ್ಕಾದರೂ ಕಳ್ಳ-ಕಾಕರಿಗೆ ಮತ ಹಾಕಬಾರದೆಂದು ನಿರ್ಧರಿಸಬೇಕು.ಮತ್ತೊಮ್ಮೆ ಪೃಥ್ವಿ ಚಿತ್ರತಂಡಕ್ಕೆ ಅಭಿನಂದನೆಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!