ಸಾಕ್ಷಿ
ಬದುಕೆಂಬ ಬತ್ತಿಹೋದ ನದಿ ಹಿಂದೊಮ್ಮೆ
ಹರಿದಿತ್ತೆಂಬುದಕ್ಕೆ ಸಾಕ್ಷಿ ನನ್ನ ಕಣ್ಣಿರು....
ನ. ಗೋ. ಪ್ರ.
******************************
ವಿಪರ್ಯಾಸ
ಆಡದ ನೂರೆಂಟು ಮಾತುಗಳಿದ್ದವು
ಕಾಣದ ಸಾವಿರ ಕನಸುಗಳಿದ್ದವು
ನೀಡಬೇಕಾದ ಅನೇಕ ಉಡುಗೊರೆಗಳಿದ್ದವು
ಆಗಲೇ ಬದುಕು ಪರದೆಯೆಳೆದುಬಿಟ್ಟಿತು
ನ. ಗೋ. ಪ್ರ.
******************************
ಜೀವನ ಗಣಿತ
ನಾ ಕೇಳಲಿಲ್ಲ
ನೀ ನೀಡಲಿಲ್ಲ
ಅದರೂ ಪ್ರೇಮದ ಲೆಕ್ಕಚಾರ
ಉಳಿದೇ ಹೋಯಿತಲ್ಲಾ!
ನ. ಗೋ. ಪ್ರ.
******************************
[http://ppsringeri.blogspot.com/2010/03/blog-post_595.html]
ಪ್ರತಿಕ್ರಿಯೆ (5)