ಇದು ಹಿಂದಿ ಚಿತ್ರ "ಈಶ್ಕಿಯಾ"ದ ಸೊಗಸಾದ ಗುಲ್ಜಾರ್ ಲೇಖನಿಯಲಿ ಮೂಡಿ ಬಂದ ಸುಂದರ ಗೀತೆ 'Dil to baccha hain ji .."ಯಾ ಕನ್ನಡ ಅನುವಾದ..( ಒಂದು ಸಣ್ಣ ಪ್ರಯತ್ನ..)
(ಮೊದಲ ನುಡಿ ನನ್ನದಲ್ಲ...you tube ಅಲ್ಲಿ ಸಿಕ್ಕ ನುಡಿ...). ನೈಜ ಹಾಡಿನ ಭಾವವನ್ನ ಇಲ್ಲಿ ತರೋದಕ್ಕೆ ಪ್ರಯತ್ನಿಸಿದ್ದೀನಿ. ಪ್ರಯತ್ನದಲ್ಲಿ ಏನಾದರು ತಪ್ಪಿದ್ದರೆ ದಯವಿಟ್ಟು ತಿದ್ದಿ....ಇಂತಿ  ನಿಮ್ಮವ - ಸಿದ್ದು

ಹೃದಯಾ ಸಣ್ಣ  ಮಗು..!!

ನನ್ನ  ಬೆನ್ನಲ್ಲಿನ  ಕಣ್ಣೆಲ್ಲ  ಅವಳ  ಕಡೆ
ಉಗುರು  ಕಚ್ಚುವೇನು  ನಿಂತಲ್ಲೇ  ನಿಂತ  ಕಡೆ
ಮನಸು  ನಕ್ಷತ್ರ  ಹುಡುಕುವುದು   ಎಲ್ಲ  ಕಡೆ
ವಯಸು  ತಿಳಿಯದೇನೆ  ಇಳಿಯುವುದೇ  ಇಂತ  ಕಡೆ
ಹೋ ನನ್ನಂತ  ನನಗು ಎನಾಯಿತಿಂದು
ಈ ಒಂಟಿ  ರಾತ್ರಿಯಲಿ ಅವಳ  ಗುಂಗು ...
ಹೃದಯಾ ಸಣ್ಣ  ಮಗು..! ಹೃದಯಾ  ಸಣ್ಣ  ಮಗು ..!!
ತುಂಬ ತುಂಟ ಮಗು..!! ಹಾಂ..  ಹೃದಯಾ  ಸಣ್ಣ  ಮಗು..!!
ಹಾಂ ..ಹಾಂ...ಹಃ..ಹಾಂ ..ಹಾಂ...ಹಃ


ಕೂಡಿಟ್ಟ ಕನಸು, ಮಗುವಾದ ಮನಸು
ಒಂದಾಗಿ ಮೊಗದಲ್ಲಿ ಹೊಸ ಸೊಗಸು
ಈ ಪ್ರೀತಿ- ಪ್ರೇಮ  ಬೇಡೆಂದ  ನನಗೆ
ಒಳ-ಒಳೊಗೆ ಒಲವೆಂಬ ಕೂಸು..
ಈ ಹೃದಯ ಹಾಡುತಿದೆ, ಇಗೋ ಹಾರುತಿದೆ
ಮಾತು -ಮಾತೆಲ್ಲೇನೆe  ಎಲ್ಲಾ ಹೇಳುತಿದೆ .......
ಮನಸಿನಂತಾ.. ಮುದ್ದು  ಕೋತಿ ಮತ್ತೊಂದಿಲ್ಲ ....
ನಿಲ್ಲು ನೀ ನಿಲ್ಲು , ಹಾರದಿರು ಮೇಲೆ
ಈ ವಯಸ್ಸಿನಲ್ಲಿ ಹಾರಿದರೆ ಬಾಳೆಲ್ಲ  ಗೋಳೇ
ಈ ಪ್ರೀತಿ ಸುಳಿಯಿಂದ ದೂರ ಸಾಗು ...
ಹೃದಯಾ ಸಣ್ಣ  ಮಗು..! ಹೃದಯಾ  ಸಣ್ಣ  ಮಗು ..!!

ನಿನ್ನ ಒಲವಿನ ಮೋಡ ಮನದಲ್ಲಿ
ಹನಿ ಹನಿಯಾಗಿ ಮಳೆಯಾ  ಸುರಿಸುತಲಿದೆ
ಆ ನಿನ್ನ  ನಗುವು ,ಆ ಕಾಡುವ  ಮೌನ
ಕ್ಷಣ ಕ್ಷಣವೂ ನನ್ನೆದೆಯ  ಸುಡುತಲಿದೆ ...
ಮನಸು ಮಿಡಿಯುತಿರಲು , ಆಸೆ  ಕುಣಿಯುತಿರಲು
ಈ ಕಣ್ಣು  ಬರೀ ನಿನ್ನನೆ  ಹುಡುಕುತಿರಲು ...
ನಿನ್ನಲೇ....... ನಾ  ಕಳೆದು  ಹೋಗಿರುವೇನು ..
ಈ  ಸಮಯಾ  ಇಂದು , ಸರಿಗಮದಿ ಮಿಂದು
ನನ್ನೊಳಗೆ ಸೂಸುತಿದೆ ಪ್ರೀತಿಯ  ರಂಗು
ಹೃದಯಾ ಸಣ್ಣ  ಮಗು..! ಹೃದಯಾ  ಸಣ್ಣ  ಮಗು ..!!

ನನ್ನ  ಬೆನ್ನಲ್ಲಿನ  ಕಣ್ಣೆಲ್ಲ  ಅವಳ  ಕಡೆ
ಉಗುರು  ಕಚ್ಚುವೇನು  ನಿಂತಲ್ಲೇ  ನಿಂತ  ಕಡೆ
ಮನಸು  ನಕ್ಷತ್ರ  ಹುಡುಕುವುದು   ಎಲ್ಲ  ಕಡೆ
ವಯಸು  ತಿಳಿಯದೇನೆ  ಇಳಿಯುವುದೇ  ಇಂತ  ಕಡೆ
ಹೋ ನನ್ನಂತ  ನನಗು ಎನಾಯಿತಿಂದು
ಈ ಒಂಟಿ  ರಾತ್ರಿಯಲಿ ಅವಳ  ಗುಂಗು ...
ಹೃದಯಾ ಸಣ್ಣ  ಮಗು..! ಹೃದಯಾ  ಸಣ್ಣ  ಮಗು ..!!
ತುಂಬ ತುಂಟ ಮಗು..!! ಹಾಂ..  ಹೃದಯಾ  ಸಣ್ಣ  ಮಗು..!!
ಹಾಂ ..ಹಾಂ...ಹಃ..ಹಾಂ ..ಹಾಂ...ಹಃ