ನಗು ನಗುತ ತೆ೦ಕಣದಿ ಬ೦ದಿಹನು ರವಿಯು

ನೋಡ ನೋಡುತಯೇ ಆಗಸಕೆ ಕವಿಯು.

 

ಇದ ನೋಡಿದೆ,

ಉದ್ಭವಿಸಿತು ನನ್ನ ಮನದಿ ಪ್ರಶ್ನೆಯು,

ನಾ ಹೇಳಿದೆ,

ಈರ್ವರಿಗೂ ಉತ್ತರದ ಅಪೇಕ್ಷೆಯು.

 

"ಏತಕೆ ನಗುತಿರುವೆ ನೀ ರವಿ"

ಎ೦ದೆ.

"ಕೆಲಸ ಮುಗಿಸಿ ಹೋಗುತಿರುವೆ,

ಆಗಿದೆಯಲಾ ಸ೦ಜೆ"

ಉತ್ತರಿಸಿದ ರವಿ.

 

"ಕಣ್ಣೇಕೆ ಒದ್ದೆ ಕವಿವರ್ಯ,

ನೋಡ ನೋಡುತಯೇ ನೀ ಸೂರ್ಯ"

ನಾ ಎ೦ದೆನೆಲು,

"ಈ ದಿನದ ಈ ಗಳಿಗೆ ಕಳೆದುಕೊಳ್ಳುತಿಹೆನಲ್ಲಾ,

ಮನದಲ್ಲಿ ದುಃಖವಿದೆ, ಹೊರಟನಲಾ ಸೂರ್ಯ"

ಉತ್ತರಿಸಿದ ಕವಿ.

 

-ಪ್ರಸನ್ನ