ಫೈಲ್ ಮಾತ್ರ ಆಗ್ಬಾರ್ದು
ಪೊಫೆಸರ್ ತಮ್ಮ ಮಗನಿಗೆ ಹೇಳಿದ್ರಂತೆ "ನೋಡು ಮರೀ, ನೀನು ಒಂದು ಕ್ಲಾಸಿಂದ ಇನ್ನೊಂದು ಕ್ಲಾಸಿಗೆ ಹೋಗಲು ಮೂರು ವರ್ಷ ತಕೋ ಅಡ್ಡಿಯಿಲ್ಲ ಆದರೆ ಫೈಲ್ ಮಾತ್ರ ಆಗಬೇಡ, ನಮ್ಮ ಮನೆತನದಲ್ಲೇ ಯಾರೂ ಫೈಲ್ ಆಗಿಲ್ಲ ಇದುವರೆಗೂ.
ಮದುವೆಯಾದ ಹೆಂಗಸರು ಅಂದ್ರೆ
ರೀನಾ: ಗುರೂ ನೀನು ನನ್ನನ್ನ ಮದುವೆಯಾದ್ಮೇಲೆ ಕೂಡಾ ನನ್ನನ್ನ ಹೀಗೇ ಪ್ರೀತಿಸ್ತಿ ತಾನೇ?
ಗುರು: ಯಾಕಿಲ್ಲ, ನಾನು ಮೊದ್ಲೇ ಹೇಳಿದ್ನಲ್ಲ ರೀನಾ,ಮದುವೆಯಾದ ಹೆಂಗಸರೆಂದರೆ ನಂಗೆ ಯಾವಾಗಲೂ ತುಂಬ ಪ್ರೀತಿ ಅಂತ.
ನೀರನ್ನ ಮೂರ್ಖ ಮಾಡಿದ್ದು
ಸರ್ದಾರ್ಜಿಯೊಬ್ಬ ನೀರನ್ನು ಮೂರ್ಖ ಮಾಡಿದ್ದು ಹೀಗೆ. ಆತ ಸ್ನಾನಕ್ಕೆ ಬಿಸಿನೀರು ಮಾಡಿ ಬದಿಗಿಟ್ಟು ತಣ್ಣೀರಲ್ಲೇ ಸ್ನಾನ ಮಾಡಿದರಂತೆ.
ಕೆಟ್ಟ ಚಟ ಬಿಡಿಸಿ....
ನೋಡು ವೀಣಾ, ನಾನು ಸೋಮುನಾ ಕುಡಿಯೋದು ಬಿಡ್ಸಿದ್ದೆ, ಮಾಂಸ ತಿನ್ನೋದು ಬಿಡ್ಸಿದ್ದೆ, ನಂತರ ಜೂಜು ಕೂಡಾಬಿಡ್ಸಿದ್ದೆ ಗೊತ್ತಾ?
ಹೌದಾ ರಾಣಿ, ಹಾಗಾದ್ರೆ ನೀನು ಕೊನೆಗೂ ಸೋಮೂನ್ನ ಮದುವೆ ಆದೆ ಅನ್ನು?
ಇಲ್ಲ ವೀಣಾ, ಆತ ನನಗಿಂತ ಒಳ್ಳೆಯ ಹುಡುಗಿಯನ್ನ ಮದುವೆಯಾದ.
ಕಣ್ಣು ಬಿಡ್ಬೇಕಿದ್ರೆ....
ಶರಾಬಿ " ಡಾಕ್ಟ್ರೇ ನಾನು ಈಗಲೇ ನನ್ನ ಕಣ್ಣು ದಾನ ಮಾಡ್ಬೇಕು"
ಡಾಕ್ಟರ್ " ಇದು ತುಂಬಾ ಒಳ್ಳೇ ಕೆಲಸ, ಆದ್ರೆ ಈಗ್ಲೇ ಯಾಕೆ? ಅವನ್ನು ನೀನು ಸತ್ತ ಮೇಲೆ ದಾನ ಮಾಡ್ಬಹುದಲ್ಲಾ?"
ಶರಾಬಿ "ಇಲ್ಲ ಸಾರ್ ಶರಾಬು ಬಂದು ಮಾಡಿ ಬಿಟ್ಟರಲ್ಲ ಅದಕ್ಕೆ"
ಡಾಕ್ಟರ್ " ಅಲ್ಲ, ಈಗ ದಾನ ಮಾಡಿದರೆ ನಿಂಗೆ ಕಷ್ಟ ಆಗಲ್ವಾ?"
ಶರಾಬಿ " ನಂಗ್ಯಾಕೆ ಕಷ್ಟ ಡಾಕ್ಟರ್,ಕಷ್ಟ ಈಕಣ್ಣು ನೀವು ಯಾರಿಗೆ ಹಾಕ್ತೀರೋ ಅವನಿಗೆ, ಯಾಕಂದ್ರೆ ದಿನಾ ಬೆಳಗ್ಯೆ ಇದು ಬಿಡ್ಸ್ಬೇಕಾದ್ರೆ ಕಾರ್ಟರ್ ಒಳ ಹೋಗ್ಲೇ ಬೇಕು ಮಗಂದಕ್ಕೆ".
ಮೀಟರ್ ಬಂದು ಮಾಡು
ಕಂಜೂಶ್ ಬಲರಾಮಯ್ಯ ರಿಕ್ಷಾದಲ್ಲಿ ಹೋಗ್ತಾ ಇರಬೇಕಾದರೆ ಅದರ ಬ್ರೇಕ್ ಫೈಲ್ ಆಯ್ತು.
ರಿಕ್ಷಾದವ "ಸಾರ್ ಬ್ರೇಕ್ ಫೈಲ್
ಆಗಿದೆ, ಏನ್ಮಾಡೋದು ಗೊತ್ತಾಗ್ತಾ ಇಲ್ಲ, ನೀವು ಸ್ವಲ್ಪ ಧೈಯ ತಗೋಬೇಕು ಈಗ?"
ಬಲರಾಮಯ್ಯ " ಸರಿ, ಮೊದ್ಲು ಮೀಟರ್ ಬಂದು ಮಾಡು"
ಇನ್ನೊಮ್ಮೆ ಅಪ್ಪಿ ಕೊಳ್ಳೋ ಮನಸ್ಸು
ಒಮ್ಮೆ ಶೇಖರನೆಂದ "ನನಗೆ ಇನ್ನೊಮ್ಮೆ ಮುಮ್ಮತ್ ಖಾನ್ ನ ಗಟ್ಟಿಯಾಗಿ ಅಪ್ಪಿಕೊಳ್ಳೋ ಮನಸ್ಸಾಗಿದೆ!"
ಅವನ ಸ್ನೇಹಿತ ಕೇಳಿದ " ಹೌದಾ ನೀನು ನಿಜವಾಗಿಯೂ ಮೊದಲೊಮ್ಮೆ ಅವಳನ್ನು ಅಪ್ಪಿ ಕೊಂಡಿದ್ಯಾ?"
ಶೇಖರ್ " ಹ್ಞೂ! ಕಣೋ ಕಳೆದ ಸಾರಿ ಕೂಡಾ ಹೀಗೇ ಮನಸ್ಸಾಗಿತ್ತು."
ಪ್ರತಿಕ್ರಿಯೆ (5)