!
ದಕ್ಷಿಣ ಆಫ್ರಿಕದ "ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ ೨೯ ರ, ಜೂನ್, ೨೦೧೦ ರ ಮಂಗಳವಾರ ರಾತ್ರಿ, ಬೆಳಕಿನಲ್ಲಿ ಜರುಗಿದ ಹದಿನಾರರ ಹಂತದ ಕೊನೆಯ ಪಂದ್ಯದಲ್ಲಿ ಸ್ಪೇನ್ ತಂಡ ೧-೦ ಗೋಲಿನಿಂದ ಪೋರ್ಚುಗಲ್ ತಂಡವನ್ನು ಪರಾಭವಗೊಳಿಸಿತು.
ಯೂರೋಪಿನ ಎರಡು ಬಲಿಶ್ಠ ಫುಟ್ಬಾಲ್ ತಂಡಗಳು ಬಿರುಸಿನಿಂದ ಹೊಡೆದಾಡಿದಾಗ, ವಿರಾಮದ ಸಮಯದಲ್ಲಿಯೂ ಯಾರಿಗೂ ಗೋಲ್ ಸಿಗದ ಪರಿಸ್ಥಿತಿಯಲ್ಲಿ, ಮುಂದುವರೆದ ಸೆಣೆಸಾಟ, ೬೩ ನೇ ನಿಮಿಷದಲ್ಲಿ ಒಂದು ಗೋಲಿನಿಂದ ಮುಂದಾಯಿತು. ದೇವಿಡ್ ವಿಲ್ಲಾರವರು, ಅಲ್ಲಿಂದಲ್ಲಿ ಕಾಲು ಬದಲಾಗುತ್ತಾ ಬಂದ ಪಾಸ್ ನಿಂದ, ಚೆಂದದ ಒಂದು ಗೋಲನ್ನು ಬಾರಿಸಿ ತಮ್ಮ ತಂಡಕ್ಕೆ ಹೋದ ಜೀವವನ್ನು ಬರಿಸಿದರು. ಆ್ಯಂಡ್ರೇ ಇನೆಸ್ಟಾ ಅವರು ಮಧ್ಯದಂಕಣದಿಂದ ಜೇವಿ ಹೆಂಡ್ರೇಜ್ಗೆ ಪಾಸ್ ನೀಡಿದರು. ಅದನ್ನು ಅಲ್ಲಿಯೇ ಇದ್ದ ವಿಲ್ಲಾ ಅವರು ಎಡಬದಿಯಿಂದ ಗುರಿ ಸೇರಿಸುವ ಪ್ರಯತ್ನ ನಡೆಸಿದರಾದರೂ, ಚೆಂಡು ನೇರವಾಗಿ ಪೋರ್ಚುಗಲ್ ಗೋಲಿ ಎಡ್ವರ್ಡೊ ಅವರ ಕೈಗೆ ಬಡಿದು ರಿಬೌಂಡ್ ಆಯಿತು. ರಿಬೌಂಡ್ಲ್ಲಿ ಚೆಂಡನ್ನು ಸಂಗ್ರಹಿಸಿದ ಡೇವಿಡ್ ವಿಲ್ಲಾ ಅವರು ಆಕರ್ಷಕವಾಗಿ ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸ್ಪೇನ್ ತಂಡದ ಅಪಾರ ಅಭಿಮಾನಿವರ್ಗ ಮುಗಿಲು ಮುಟ್ಟುವಂತೆ "ವುವುಜೆಲಾ" ಗಳನ್ನು ಊದಲಾರಂಭಿಸಿದರು.
"ಸ್ಪೇನ್ " ಆಟದ ಪ್ರದರ್ಶನ ಅದ್ಭುತವಾಗಿತ್ತು. ಶೇ ೬೧ % ರಷ್ಟು ಚೆಂಡಿನ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. "ಪೋರ್ಚುಗಲ್" ತಂಡದವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಪ್ರಯತ್ನನಡೆಸಿ ವಿಫಲರಾದರು..
ಸ್ಪೇನ್ ತಂಡದ ಜಯವನ್ನು ಹೀಗೆ ವಿವರಿಸಬಹುದು :
* ಸಂಘಟಿತ ಯತ್ನ,
* ಸರಿಯಾದ ರೂಪುರೇಶೆ ಹಾಕಿಕೊಂಡು ಆಟದ ರಂಗಕ್ಕೆ ಪ್ರವೇಶಿಸಿದ ಸ್ಪೇನ್ ಟೀಮಿಗೆ, ಫರ್ನಾಂಡೊ ಟೊರ್ರೆಸ್ ಹಾಗೂ ಡೇವಿಡ್ ವಿಲ್ಲಾ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು.
ಪೋರ್ಚುಗಲ್ ತಂಡದ ನ್ಯೂನತೆಗಳನ್ನು ಸಮರ್ಥವಾಗಿ ಬಳಸಿಕೊಂಡ ಸ್ಪೇನ್ ತಂಡ ಮೊದಲ ಏಳು ನಿಮಿಷಗಳಲ್ಲಿಯೇ ಮೂರು ಬಾರಿ ಎದುರಾಳಿ ಗೋಲಿನ ಮೇಲೆ ದಾಳಿ ಇಟ್ಟರು. ಆದರೆ ಪೋರ್ಚುಗಲ್ ಗೋಲಿ ಎಡ್ವರ್ಡೊ ಅವರ ಸಕಾಲಿಕ ಆಟದಿಂದಾಗಿ ಉಂಟಾಗಬಹುದಾಗಿದ್ದಂತಹ ಅನಾಹುತ ತಪ್ಪಿತು.
ಮಿಂಚದ ರೊನಾಲ್ಡೊ: ಚಾಂಪಿಯನ್ಷಿಪ್ನ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತೀರ-ಸಪ್ಪೆ ಆಟದ ಪ್ರದರ್ಶನವನ್ನು ಮಾಡಿ ನೆರೆದಿದ್ದ ಕ್ರೀಡಾಭಿಮಾನಿಗಳು ನಿರಾಸೆ ಪಡುವಂತೆ ಮಾಡಿದರು.
ಪಂದ್ಯದ ೮೯ ನೇ ನಿಮಿಷದಲ್ಲಿ ಪೋರ್ಚುಗಲ್ನ ರಿಕಾರ್ಡೊ ಕೋಸ್ಟಾ ಅವರು ಒರಟಾಟ ಆಡಿದ್ದಕ್ಕಾಗಿ "ಅರ್ಜೆಂಟೀನಾದ ರೆಫರಿ ಹೆಕ್ಟರ್ ಬಲ್ಡಾಸಿ " ಅವರಿಂದ "ಕೆಂಪು ಕಾರ್ಡ್" ದರ್ಶನ ಪಡೆದರು.
"ದಕ್ಷಿಣ ಆಫ್ರಿಕದ, ೨೦೧೦ ರ ವಿಶ್ವಕಪ್ ಪುಟ್ಬಾಲ್ ತಂಡ"ದಲ್ಲಿ "ಪೋರ್ಚುಗಲ್ ತಂಡದ ನಾಯಕ, ಕ್ರಿಸ್ಟಿಯಾನೊ ರೊನಾಲ್ಡೊ" ರವರ ಕಾಣಿಕೆಯನ್ನು ನೋಡಿದರೆ :
೧. ಉತ್ತರ ಕೊರಿಯಾದ ವಿರುದ್ಧ ಪೋರ್ಚುಗಲ್ ೭-೦ ಗೋಲುಗಳಿಂದ ಗೆದ್ದಿತ್ತು. ರೊನಾಲ್ಡೊ ರವರ ಕಾಣಿಕೆ, ಕಷ್ಟಪಟ್ಟು ಒಂದು ಗೋಲು ಮಾತ್ರ. ಈಗೋಲನ್ನು ಅವರು ಬಾರಿಸಿದ್ದು, ೧೬ ವರ್ಷಗಳ ಬಳಿಕದ ಪ್ರಥಮ ಗೋಲು
೨. ಅವರ ನಾಯಕತ್ವದಲ್ಲಿ ಪೋರ್ಚುಗಲ್ ಮೂರು ಪಂದ್ಯಗಳಲ್ಲಿ ಗೋಲೇ ಗಳಿಸಿರಲಿಲ್ಲ.
೩. "ಟ್ವಿಟರ್" ನಲ್ಲಿ ಅಭಿಮಾನಿಗಳು "ರೊನಾಲ್ಡೊ" ಅವರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
೪. ಒಟ್ಟಾರೆ ಈ ಚಾಂಪಿಯನ್ಷಿಪ್ನಲ್ಲಿ ರೊನಾಲ್ಡೊ ಸಾಧನೆ ಇಲ್ಲವೇ ಇಲ್ಲವೆಂದು ಹೇಳಬಹುದು.
ಕೋಪದಿಂದ ಸಿಕ್ಕಾಪಟ್ಟೆ ವರ್ತಿಸುವುದು, ಇಲ್ಲವೇ ಉಗಿಯುವುದು ಅವರ ಅಭಿವ್ಯಕ್ತಿಯಾಗಿತ್ತು.
ಸ್ಪೇನ್ ವಿರುದ್ಧದ ವಿಶ್ವಕಪ್ ಫುಟ್ಬಾಲ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತ ಸಿಟ್ಟಿನಿಂದ ಕ್ಯಾಮೆರಾಮನ್ನತ್ತ ಉಗಿದ ಆರೋಪಕ್ಕೆ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಒಳಗಾಗಿದ್ದಾರೆ. ಒಟ್ಟಾರೆ ಈ ಚಾಂಪಿಯನ್ಷಿಪ್ನಲ್ಲಿ ರೊನಾಲ್ಡೊ ಸಾಧನೆ ಇಲ್ಲವೇ ಇಲ್ಲವೆಂದು ಹೇಳಬಹುದು. ಅವರ ನಾಯಕತ್ವದಲ್ಲಿ ಪೋರ್ಚುಗಲ್ ಮೂರು ಪಂದ್ಯಗಳಲ್ಲಿ ಗೋಲೇ ಗಳಿಸಿರಲಿಲ್ಲ. ಸ್ಪೇನ್ ಎದುರಿನ ಪಂದ್ಯದಲ್ಲಿ ಸೋತ ಬಳಿಕ ರೊನಾಲ್ಡೊ ಸಿಡಿಮಿಡಿಗೊಂಡಿದ್ದರು.. ತಮ್ಮ ಫೋಟೊ ತೆಗೆಯುತ್ತಿದ್ದ ಕ್ಯಾಮೆರಾಮನ್ನತ್ತ ಸಾಗಿಬಂದ ರೊನಾಲ್ಡೊ ಕಾಲಿನತ್ತ ಉಗುಳಿ ತಮ್ಮ ಮಾನಸಿಕ ಅಸಮಧಾನವನ್ನು ತೋರಿಸಿಕೊಂಡರು. ಮನಸ್ಸಿಗೆ ಬಂದಂತೆ ವರ್ತಿಸುವ ಹಾಗೂ ಯೂರೋ ಹಣದ ಅಮಲಿನಲ್ಲಿರುವ ಅವರು, ಸುದ್ದಿಗಾರರ ಜೊತೆ ನಡೆಸಿದ ಮಾತಿನ ಧಾಟಿಯಲ್ಲೂ ಸಂಯಮವಿರಲಿಲ್ಲ. ಅವರ ಕೋಚ್ ನ್ನು ಪದೇ ಪದೇ ದೂಷಿಸುತ್ತಿದ್ದರು. ಇಲ್ಲವೇ ಬಾತ್ಮಿದಾರರನ್ನು ತಮ್ಮ ಹತ್ತಿರ ಬರದಂತೆ, ತಡೆಯುತ್ತಿದ್ದರು.
ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅವರು ಅಸಮರ್ಥರಾದಿದ್ದಾರೆ. ಯೇಕೆ ಹೀಗೆ ಮಾಡಿದಿರಿ ಎನ್ನುವುದಕ್ಕೆ ಸ್ಪಷ್ಟ ಹಾಗೂ ನೇರ ಉತ್ತರವಿಲ್ಲ. ನಾನು ಒಬ್ಬ ಅತಿ ದುಃಖಿಯಾದ ವ್ಯಕ್ತಿ ಎಂದು ಹೇಳಿ ಗೋಗರೆದು ಅಳುವುದನ್ನು ಬಿಟ್ಟರೆ ಅವರ ವರ್ತನೆ ಯಾರಿಗೂ ಅರ್ಥವಾಗುತ್ತಿಲ್ಲ. ಆದರೆ ಟ್ವಿಟರ್ನಲ್ಲಿ ಅಭಿಮಾನಿಗಳು ರೊನಾಲ್ಡೊ ಅವರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮುಂದೆ ಎದುರಿಸಬೇಕಾದ ಮ್ಯಾಚ್ ಗಳು :
ಸ್ಪೇನ್ ತಂಡದವರು ಶನಿವಾರ (೦೩-೦೭-೨೦೧೦) "ಜೋಹಾನ್ಸ್ಬರ್ಗ್ನ ಎಲ್ಲಿಸ್ ಪಾರ್ಕ್"ಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆರುಗ್ವೆ ತಂಡವನ್ನು ಎದುರಿಸಲಿದ್ದಾರೆ. ಸರಿಯಾಗಿ ೪೪ ವರ್ಷಗಳ ನಂತರ ಯೂರೋಪಿಯನ್ ಚಾಂಪಿಯನ್ ಪಟ್ಟ ಪಡೆದ ಸ್ಪೇನ್ ತಂಡ ಇದೀಗ ೧೯೭೪ ರಲ್ಲಿ ಪಶ್ಚಿಮ ಜರ್ಮನಿ ತಂಡ ಯೂರೋಪಿಯನ್ ಚಾಂಪಿಯನ್ ಹಾಗೂ ವಿಶ್ವಕಪ್ ಗೆದ್ದು ಮಾಡಿದ ಸಾಧನೆಯನ್ನು ಸರಿಗಟ್ಟುವತ್ತ ಹೆಜ್ಜೆ ಇಟ್ಟಿದೆ
..
ದಕ್ಷಿಣ ಆಫ್ರಿಕದ "ಗ್ರೀನ್ ಪಾಯಿಂಟ್ ಕ್ರೀಡಾಂಗಣ"ದಲ್ಲಿ ೨೯ ರ, ಜೂನ್, ೨೦೧೦ ರ ಮಂಗಳವಾರ ರಾತ್ರಿ, ಬೆಳಕಿನಲ್ಲಿ ಜರುಗಿದ ಹದಿನಾರರ ಹಂತದ ಕೊನೆಯ ಪಂದ್ಯದಲ್ಲಿ ಸ್ಪೇನ್ ತಂಡ ೧-೦ ಗೋಲಿನಿಂದ ಪೋರ್ಚುಗಲ್ ತಂಡವನ್ನು ಪರಾಭವಗೊಳಿಸಿತು.
ಯೂರೋಪಿನ ಎರಡು ಬಲಿಶ್ಠ ಫುಟ್ಬಾಲ್ ತಂಡಗಳು ಬಿರುಸಿನಿಂದ ಹೊಡೆದಾಡಿದಾಗ, ವಿರಾಮದ ಸಮಯದಲ್ಲಿಯೂ ಯಾರಿಗೂ ಗೋಲ್ ಸಿಗದ ಪರಿಸ್ಥಿತಿಯಲ್ಲಿ, ಮುಂದುವರೆದ ಸೆಣೆಸಾಟ, ೬೩ ನೇ ನಿಮಿಷದಲ್ಲಿ ಒಂದು ಗೋಲಿನಿಂದ ಮುಂದಾಯಿತು. ದೇವಿಡ್ ವಿಲ್ಲಾರವರು, ಅಲ್ಲಿಂದಲ್ಲಿ ಕಾಲು ಬದಲಾಗುತ್ತಾ ಬಂದ ಪಾಸ್ ನಿಂದ, ಚೆಂದದ ಒಂದು ಗೋಲನ್ನು ಬಾರಿಸಿ ತಮ್ಮ ತಂಡಕ್ಕೆ ಹೋದ ಜೀವವನ್ನು ಬರಿಸಿದರು. ಆ್ಯಂಡ್ರೇ ಇನೆಸ್ಟಾ ಅವರು ಮಧ್ಯದಂಕಣದಿಂದ ಜೇವಿ ಹೆಂಡ್ರೇಜ್ಗೆ ಪಾಸ್ ನೀಡಿದರು. ಅದನ್ನು ಅಲ್ಲಿಯೇ ಇದ್ದ ವಿಲ್ಲಾ ಅವರು ಎಡಬದಿಯಿಂದ ಗುರಿ ಸೇರಿಸುವ ಪ್ರಯತ್ನ ನಡೆಸಿದರಾದರೂ, ಚೆಂಡು ನೇರವಾಗಿ ಪೋರ್ಚುಗಲ್ ಗೋಲಿ ಎಡ್ವರ್ಡೊ ಅವರ ಕೈಗೆ ಬಡಿದು ರಿಬೌಂಡ್ ಆಯಿತು. ರಿಬೌಂಡ್ಲ್ಲಿ ಚೆಂಡನ್ನು ಸಂಗ್ರಹಿಸಿದ ಡೇವಿಡ್ ವಿಲ್ಲಾ ಅವರು ಆಕರ್ಷಕವಾಗಿ ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸ್ಪೇನ್ ತಂಡದ ಅಪಾರ ಅಭಿಮಾನಿವರ್ಗ ಮುಗಿಲು ಮುಟ್ಟುವಂತೆ "ವುವುಜೆಲಾ" ಗಳನ್ನು ಊದಲಾರಂಭಿಸಿದರು.
"ಸ್ಪೇನ್ " ಆಟದ ಪ್ರದರ್ಶನ ಅದ್ಭುತವಾಗಿತ್ತು. ಶೇ ೬೧ % ರಷ್ಟು ಚೆಂಡಿನ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. "ಪೋರ್ಚುಗಲ್" ತಂಡದವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಪ್ರಯತ್ನನಡೆಸಿ ವಿಫಲರಾದರು. ಸ್ಪೇನ್ ತಂಡದ ಜಯವನ್ನು ಹೀಗೆ ವಿವರಿಸಬಹುದು :
* 'ಸಂಘಟಿತ ಯತ್ನ ',
* ಸರಿಯಾದ ರೂಪುರೇಶೆ ಹಾಕಿಕೊಂಡು ಆಟದ ರಂಗಕ್ಕೆ ಪ್ರವೇಶಿಸಿದ ಸ್ಪೇನ್ ಟೀಮಿಗೆ, ಫರ್ನಾಂಡೊ ಟೊರ್ರೆಸ್ ಹಾಗೂ ಡೇವಿಡ್ ವಿಲ್ಲಾ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು.
ಪೋರ್ಚುಗಲ್ ತಂಡದ ನ್ಯೂನತೆಗಳನ್ನು ಸಮರ್ಥವಾಗಿ ಬಳಸಿಕೊಂಡ ಸ್ಪೇನ್ ತಂಡ ಮೊದಲ ಏಳು ನಿಮಿಷಗಳಲ್ಲಿಯೇ ಮೂರು ಬಾರಿ ಎದುರಾಳಿ ಗೋಲಿನ ಮೇಲೆ ದಾಳಿ ಇಟ್ಟರು. ಆದರೆ ಪೋರ್ಚುಗಲ್ ಗೋಲಿ ಎಡ್ವರ್ಡೊ ಅವರ ಸಕಾಲಿಕ ಆಟದಿಂದಾಗಿ ಉಂಟಾಗಬಹುದಾಗಿದ್ದಂತಹ ಅನಾಹುತ ತಪ್ಪಿತು. ಮಿಂಚದ ರೊನಾಲ್ಡೊ: ಚಾಂಪಿಯನ್ಷಿಪ್ನ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತೀರ-ಸಪ್ಪೆ ಆಟದ ಪ್ರದರ್ಶನವನ್ನು ಮಾಡಿ ನೆರೆದಿದ್ದ ಕ್ರೀಡಾಭಿಮಾನಿಗಳು ನಿರಾಸೆ ಪಡುವಂತೆ ಮಾಡಿದರು. ಪಂದ್ಯದ ೮೯ ನೇ ನಿಮಿಷದಲ್ಲಿ ಪೋರ್ಚುಗಲ್ನ ರಿಕಾರ್ಡೊ ಕೋಸ್ಟಾ ಅವರು ಒರಟಾಟ ಆಡಿದ್ದಕ್ಕಾಗಿ "ಅರ್ಜೆಂಟೀನಾದ ರೆಫರಿ ಹೆಕ್ಟರ್ ಬಲ್ಡಾಸಿ " ಅವರಿಂದ "ಕೆಂಪು ಕಾರ್ಡ್" ದರ್ಶನ ಪಡೆದರು.
"ದಕ್ಷಿಣ ಆಫ್ರಿಕದ, ೨೦೧೦ ರ ವಿಶ್ವಕಪ್ ಪುಟ್ಬಾಲ್ ತಂಡ"ದಲ್ಲಿ "ಪೋರ್ಚುಗಲ್ ತಂಡದ ನಾಯಕ, ಕ್ರಿಸ್ಟಿಯಾನೊ ರೊನಾಲ್ಡೊ" ರವರ ಕಾಣಿಕೆಯನ್ನು ನೋಡಿದರೆ :
೧. ಉತ್ತರ ಕೊರಿಯಾದ ವಿರುದ್ಧ ಪೋರ್ಚುಗಲ್ ೭-೦ ಗೋಲುಗಳಿಂದ ಗೆದ್ದಿತ್ತು. ರೊನಾಲ್ಡೊ ರವರ ಕಾಣಿಕೆ, ಕಷ್ಟಪಟ್ಟು ಒಂದು ಗೋಲು ಮಾತ್ರ. ಈಗೋಲನ್ನು ಅವರು ಬಾರಿಸಿದ್ದು, ೧೬ ವರ್ಷಗಳ ಬಳಿಕದ ಪ್ರಥಮ ಗೋಲು.
೨. ಅವರ ನಾಯಕತ್ವದಲ್ಲಿ ಪೋರ್ಚುಗಲ್ ಮೂರು ಪಂದ್ಯಗಳಲ್ಲಿ ಗೋಲೇ ಗಳಿಸಿರಲಿಲ್ಲ.
೩. "ಟ್ವಿಟರ್" ನಲ್ಲಿ ಅಭಿಮಾನಿಗಳು "ರೊನಾಲ್ಡೊ" ಅವರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
೪. ಒಟ್ಟಾರೆ ಈ ಚಾಂಪಿಯನ್ಷಿಪ್ನಲ್ಲಿ ರೊನಾಲ್ಡೊ ಸಾಧನೆ ಇಲ್ಲವೇ ಇಲ್ಲವೆಂದು ಹೇಳಬಹುದು. ಕೋಪದಿಂದ ಸಿಕ್ಕಾಪಟ್ಟೆ ವರ್ತಿಸುವುದು, ಇಲ್ಲವೇ ಉಗಿಯುವುದು ಅವರ ಅಭಿವ್ಯಕ್ತಿಯಾಗಿತ್ತು.
ಸ್ಪೇನ್ ವಿರುದ್ಧದ ವಿಶ್ವಕಪ್ ಫುಟ್ಬಾಲ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತ ಸಿಟ್ಟಿನಿಂದ ಕ್ಯಾಮೆರಾಮನ್ನತ್ತ ಉಗಿದ ಆರೋಪಕ್ಕೆ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಒಳಗಾಗಿದ್ದಾರೆ. ಒಟ್ಟಾರೆ ಈ ಚಾಂಪಿಯನ್ಷಿಪ್ನಲ್ಲಿ ರೊನಾಲ್ಡೊ ಸಾಧನೆ ಇಲ್ಲವೇ ಇಲ್ಲವೆಂದು ಹೇಳಬಹುದು. ಅವರ ನಾಯಕತ್ವದಲ್ಲಿ ಪೋರ್ಚುಗಲ್ ಮೂರು ಪಂದ್ಯಗಳಲ್ಲಿ ಗೋಲೇ ಗಳಿಸಿರಲಿಲ್ಲ. ಸ್ಪೇನ್ ಎದುರಿನ ಪಂದ್ಯದಲ್ಲಿ ಸೋತ ಬಳಿಕ ರೊನಾಲ್ಡೊ ಸಿಡಿಮಿಡಿಗೊಂಡಿದ್ದರು.
ತಮ್ಮ ಫೋಟೊ ತೆಗೆಯುತ್ತಿದ್ದ ಕ್ಯಾಮೆರಾಮನ್ನತ್ತ ಸಾಗಿಬಂದ ರೊನಾಲ್ಡೊ ಕಾಲಿನತ್ತ ಉಗುಳಿ ತಮ್ಮ ಮಾನಸಿಕ ಅಸಮಧಾನವನ್ನು ತೋರಿಸಿಕೊಂಡರು. ಮನಸ್ಸಿಗೆ ಬಂದಂತೆ ವರ್ತಿಸುವ ಹಾಗೂ ಯೂರೋ ಹಣದ ಅಮಲಿನಲ್ಲಿರುವ ಅವರು, ಸುದ್ದಿಗಾರರ ಜೊತೆ ನಡೆಸಿದ ಮಾತಿನ ಧಾಟಿಯಲ್ಲೂ ಸಂಯಮವಿರಲಿಲ್ಲ. ಅವರ ಕೋಚ್ ನ್ನು ಪದೇ ಪದೇ ದೂಷಿಸುತ್ತಿದ್ದರು. ಇಲ್ಲವೇ ಬಾತ್ಮಿದಾರರನ್ನು ತಮ್ಮ ಹತ್ತಿರ ಬರದಂತೆ, ತಡೆಯುತ್ತಿದ್ದರು.ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅವರು ಅಸಮರ್ಥರಾದಿದ್ದಾರೆ. 'ಯೇಕೆ ಹೀಗೆ ಮಾಡಿದಿರಿ ' ಎನ್ನುವುದಕ್ಕೆ ಸ್ಪಷ್ಟ ಹಾಗೂ ನೇರ ಉತ್ತರವಿಲ್ಲ. 'ನಾನು ಒಬ್ಬ ಅತಿ ದುಃಖಿಯಾದ ವ್ಯಕ್ತಿ ' ಎಂದು ಹೇಳಿ ಗೋಗರೆದು ಅಳುವುದನ್ನು ಬಿಟ್ಟರೆ, ಅವರ ವರ್ತನೆ ಯಾರಿಗೂ ಅರ್ಥವಾಗುತ್ತಿಲ್ಲ. ಆದರೆ ಟ್ವಿಟರ್ನಲ್ಲಿ ಅಭಿಮಾನಿಗಳು ರೊನಾಲ್ಡೊ ಅವರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮುಂದೆ ಎದುರಿಸಬೇಕಾದ ಮ್ಯಾಚ್ ಗಳು :ಸ್ಪೇನ್ ತಂಡದವರು ಶನಿವಾರ (೦೩-೦೭-೨೦೧೦) "ಜೋಹಾನ್ಸ್ಬರ್ಗ್ನ ಎಲ್ಲಿಸ್ ಪಾರ್ಕ್"ಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆರುಗ್ವೆ ತಂಡವನ್ನು ಎದುರಿಸಲಿದ್ದಾರೆ. ಸರಿಯಾಗಿ ೪೪ ವರ್ಷಗಳ ನಂತರ ಯೂರೋಪಿಯನ್ ಚಾಂಪಿಯನ್ ಪಟ್ಟ ಪಡೆದ ಸ್ಪೇನ್ ತಂಡ ಇದೀಗ ೧೯೭೪ ರಲ್ಲಿ ಪಶ್ಚಿಮ ಜರ್ಮನಿ ತಂಡ ಯೂರೋಪಿಯನ್ ಚಾಂಪಿಯನ್ ಹಾಗೂ ವಿಶ್ವಕಪ್ ಗೆದ್ದು ಮಾಡಿದ ಸಾಧನೆಯನ್ನು ಸರಿಗಟ್ಟುವತ್ತ ಹೆಜ್ಜೆ ಇಟ್ಟಿದೆ..
ಪ್ರತಿಕ್ರಿಯೆ (2)