ಪೋರ್ಟ್ ಎಲಿಜಬೆತ್, ನ "ನೆಲ್ಸನ್ ಮಂಡೇಲಾ ಬೇ ಕ್ರೀಡಾಂಗಣ"ದಲ್ಲಿ ೨, ಶುಕ್ರವಾರ, ಜುಲೈ, ೨೦೧೦ ರಂದು ನಡೆಯಲಿರುವ ೧೯ ನೇ ವಿಶ್ವಕಪ್ನ ಮೊದಲ ಎಂಟರ ಘಟ್ಟದ ಪಂದ್ಯದಲ್ಲಿ ಬ್ರೆಝಿಲ್ ತಂಡ ನೆದರ್ಲ್ಯಾಂಡ್ ಬಣವನ್ನು ಎದುರಿಸಲಿದೆ.
ಐದು ಬಾರಿಯ ಚಾಂಪಿಯನ್ ಆಗಿರುವುದೇನೋ ದಿಟ. ಆದರೆ ಸವಾಲುಗಳೂ ಎಷ್ಟೇ ಕಠಿಣವಾಗಿವೆ, ಎಂದು "ಕೋಚ್ ಡುಂಗಾ" ಒಪ್ಪಿಕೊಂಡಿದ್ದಾರೆ. ಈಗ ಬ್ರೆಜಿಲ್ನ ಮುಂದಿರುವ ಕಠಿಣ ಸವಾಲೆಂದರೆ, ಮುಂದೆ ಮುಂದೆ ಸಾಗಿ, ಮುಂದಿನ ಸುತ್ತು ತಲುಪುವುದೊಂದೇ ದಾರಿ. ಒಂದು ಬಾರಿ "ನಾಕ್ಔಟ್ ಹಂತ"ಕ್ಕೆ ತಲುಪಿದ ನಂತರ ಬ್ರೆಜಿಲ್ ತನ್ನ ಎದುರಾಳಿ ಎಷ್ಟೇ ಕಠಿಣ ಸವಾಲೊಡ್ಡಲಿ ಅದನ್ನು ಸಮರ್ಥವಾಗಿ ಎದುರಿಸು ಬಲವನ್ನು ಸಂಪಾದಿಸಿದೆ. ಚಿಲಿ ವಿರುದ್ಧದ ಹದಿನಾರರ ಹಂತದ ಪಂದ್ಯದಲ್ಲಿ ಇದನ್ನು ಸಾಧಿಸಿದ ಸಮಾಧಾನವಿದೆ. "ರಕ್ಷಣೆ ಮತ್ತು "ಲಾಂಗ್ ಪಾಸ್"ಗಳನ್ನು ಕೊಡುವುದು ದಕ್ಷಿಣ ಅಮೆರಿಕದ ಫುಟ್ಬಾಲ್ ನೀತಿಯಾಗಿದೆ. ಇದು ನಮಗೆ ಸರಿಹೋಗುವುದೇ ಇನ್ನುವುದನ್ನು ನಾವು ಕಂಡುಕೊಳ್ಳಬೇಕಾಗಿದೆ. ಹಾಲೆಂಡ್ ನ ಆಟದ ತಂತ್ರಗಳು ಚೆನ್ನಾಗಿವೆ. ಇವನ್ನು ಹೇಗೆ ಸಮರ್ಥವಾಗಿ ನಾವು ಎದುರಿಸುವೆವು ಎನ್ನುವುದನ್ನು
* ನಾವು ಇಂದು ಕಂಡುಕೊಳ್ಳುವೆವು, ಎನ್ನುತ್ತಾರೆ "ಕೋಚ್ ಡುಂಗ".
"ಉರುಗ್ಚೆ ಮತ್ತು ಘಾನಾತಂಡಗಳ ಮಧ್ಯೆನಡೆಯಲಿರುವ ಮತ್ತೊಂದು ಬೃಹದ್ಕಾಳಗ" !
ಈ ಹಿಂದೆ ಮೂರು ಬಾರಿ ಉಭಯ ತಂಡಗಳು ಪರಸ್ಪರ ಎದುರಿಸಿವೆ. ಅದರಲ್ಲಿ ಗೆದ್ದವರು ಫೈನಲ್ನಲ್ಲಿ ಆಡಿದೆ. ಈ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದ ತಂಡ ಸೆಮಿಫೈನಲ್ನಲ್ಲಿ "ಉರುಗ್ವೆ-ಘಾನಾ ತಂಡಗಳ ನಡುವಣ ವಿಜೇತ"ರನ್ನು ಎದುರಿಸಲಿದೆ. "ಒಟ್ಟಾರೆಯಾಗಿ ಫುಟ್ಬಾಲ್ ಪ್ರೇಮಿಗಳಿಗೆ ಒಂದು ಸೊಗಸಾದ ಪಂದ್ಯವನ್ನು ನೋಡುವ ಸದವಕಾಶವಂತೂ ಇದೆ."
ಆಫ್ರಿಕದ ಭಾಗವಹಿಸಿದ ೬ ತಂಡಗಳಲ್ಲಿ "ಘಾನ" ಈಗ ಮುಂದೆಬಂದಿದೆ. ಈಗ ಒಂದುವೇಳೆ ಗೆದ್ದರೆ, ಸೆಮಿಫೈನಲ್ ಗೆದ್ದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಜೋಹಾನ್ಸ್ಬರ್ಗ್ ನಲ್ಲಿ, ಉರುಗ್ವೆ ತಂಡಕ್ಕೆ ನಾಲ್ಕು ದಶಕಗಳ ನಂತರ ಸೆಮಿಫೈನಲ್ ಆಡುವ ಅವಕಾಶ ಸಿಕ್ಕಿದೆ. ಘಾನಾ ವಿರುದ್ದದ ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ,ಗೆದ್ದಲ್ಲಿ ಇದು ಸಾಕಾರ ಗೊಳ್ಳುತ್ತದೆ. ಜೋಹಾನ್ಸ್ಬರ್ಗ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳ ನೆರಳಿನಲ್ಲಿ ನಲುಗಿ ಹೋಗಿರುವ ಉರುಗ್ವೆ ತಂಡಕ್ಕೆ ತಮ್ಮ ಶಕ್ತಿ ಸಾಮರ್ಥ್ಯ ಹೊರ ಸೂಸುವುಕ್ಕೆ ಸೂಕ್ತ ವೇದಿಕೆ ಸಿಕ್ಕದ್ದು, ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ. ಒಂದು ವೇಳೆ ಘಾನಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ವಿಶ್ವಕಪ್ನ ಸೆಮಿಫೈನಲ್ ಪ್ರವೇಶಿಸಿದ ಅಫ್ರಿಕಾದ ಮೊದಲ ತಂಡ ಎನ್ನುವ ಖ್ಯಾತಿ ಪಡೆಯುತ್ತದೆ.
ಶುರುವಿನಿಂದ ಉರುಗ್ವೆ ತಂಡದ ಅತ್ಯುತ್ತಮ ಆಟಗಳ ಪ್ರದರ್ಶನವಂತೂ ಇದ್ದೇ ಇದೆ !
ಫುಟ್ಬಾಲ್ ವಿಶ್ವಕಪ್ ಶುರುವಾದ ವರ್ಷ, ೧೯೩೦ ಹಾಗೂ ನಂತರ ೧೯೫೦ ರಲ್ಲಿ, ಚಾಂಪಿಯನ್ ಆದ ಉರುಗ್ವೆ ಬಳಿ, ಸದೃಢ ರಕ್ಷಣೆ ಹಾಗೂ ಮುನ್ನಡೆ ಆಟಗಾರರು ಇದ್ದಾರೆ. ಲೂಯಿಸ್ ಸೌರೇಜ್, ಎಡಿನ್ಸನ್ ಕವಾನಿ ಹಾಗೂ ಡಿಯಾಗೊ ಫೋರ್ಲಾನ್ ಅವರಂತಹ ಪ್ರತಿಭಾವಂತ ಫಾರ್ವರ್ಡ್ಗಳನ್ನು ಹೊಂದಿರುವ ಉರುಗ್ವೆಗೆ ಎದುರಾಳಿ ಎಂತಹ ಸವಾಲು ಒಡ್ಡಿದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದೆ. ದಕ್ಷಿಣ ಕೊರಿಯಾದ ವಿರುದ್ಧದ ಪಂದ್ಯದಲ್ಲಿ ಸೌರೇಜ್ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಘಾನಾ ತಂಡದ ಕೆಲವು ಖೂಬಿಗಳು :
ಘಾನಾ ಕೂಡ, ಇದುವರೆಗೆ ಆಡಿದ ಆಟಗಳಲ್ಲಿ ಉತ್ತಮ ಫಲಿತಾಂಷಗಳನ್ನು ಹಾಸಿಲ್ ಮಾಡಿ ಈ ಮಟ್ಟಕ್ಕೆ ಬಂದಿದೆ. "ಜಾನಥನ್ ಮೆನ್ಸಾ" ಹಾಗೂ "ಆ್ಯಂಡ್ರೇ ಆಯೇವ್ " ರವರ ಅನುಪಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ಪೂರ್ಣ "ಸ್ಟ್ರೈಕರ್ ಅಸಮೋಹ ಗ್ಯಾನ್" ರವರ ಮೇಲಿದೆ. ತಂಡದ ಆಟಗಾರರ ಮೇಲೆ ಸಾಕಷ್ಟು ಭರವಸೆಯ ಭಾವನೆಗಳಿಂದ ಪಿಯನ್ಷಿಪ್ನಲ್ಲಿ ಸಧ್ಯ ಉಳಿದಿರುವ ಕೊನೆಯ ಆಫ್ರಿಕಾ ತಂಡ ಒತ್ತಡದಲ್ಲಿ ಸಿಲುಕಿದೆ. ಘಾನಾ ತಂಡದ ಕೋಚ್ ಮಿಲೋವನ್ ರಾಜೆವಿಕ್, ಅತ್ಯಂತ ಖಚಿತವಾದ ನಿಲುವನ್ನು ಹೊಂದಿದ್ದಾರೆ. ಅವರು "ನಮ್ಮ ತಂಡ ಗೆದ್ದು ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕಾ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ" ಎಂದು ಹೇಳುತ್ತಲೇ ಇದ್ದಾರೆ. ಅದು ಸಾಕಾರವಾಗಬೇಕಾದರೆ ಘಾನಾತಂಡ ಪ್ರಚಂಡಪ್ರಯತ್ನ, ಹಾಗೂ ಮಾನಸಿಕ ಶಕ್ತಿಯನ್ನು ಬೆಳಸಿಕೊಂಡು ಆಟದಲ್ಲಿ ಮುನ್ನುಗ್ಗಬೇಕಾಗಿದೆ.
"ಉರುಗ್ಚೆ ಮತ್ತು ಘಾನಾತಂಡಗಳ ಮಧ್ಯೆನಡೆಯಲಿರುವ ಮತ್ತೊಂದು ಬೃಹದ್ಕಾಳಗ" !
ಈ ಹಿಂದೆ ಮೂರು ಬಾರಿ ಉಭಯ ತಂಡಗಳು ಪರಸ್ಪರ ಎದುರಿಸಿವೆ. ಅದರಲ್ಲಿ ಗೆದ್ದವರು ಫೈನಲ್ನಲ್ಲಿ ಆಡಿದೆ. ಈ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದ ತಂಡ ಸೆಮಿಫೈನಲ್ನಲ್ಲಿ "ಉರುಗ್ವೆ-ಘಾನಾ ತಂಡಗಳ ನಡುವಣ ವಿಜೇತ"ರನ್ನು ಎದುರಿಸಲಿದೆ. "ಒಟ್ಟಾರೆಯಾಗಿ ಫುಟ್ಬಾಲ್ ಪ್ರೇಮಿಗಳಿಗೆ ಒಂದು ಸೊಗಸಾದ ಪಂದ್ಯವನ್ನು ನೋಡುವ ಸದವಕಾಶವಂತೂ ಇದೆ."
ಆಫ್ರಿಕದ ಭಾಗವಹಿಸಿದ ೬ ತಂಡಗಳಲ್ಲಿ "ಘಾನ" ಈಗ ಮುಂದೆಬಂದಿದೆ. ಈಗ ಒಂದುವೇಳೆ ಗೆದ್ದರೆ, ಸೆಮಿಫೈನಲ್ ಗೆದ್ದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಜೋಹಾನ್ಸ್ಬರ್ಗ್ ನಲ್ಲಿ, ಉರುಗ್ವೆ ತಂಡಕ್ಕೆ ನಾಲ್ಕು ದಶಕಗಳ ನಂತರ ಸೆಮಿಫೈನಲ್ ಆಡುವ ಅವಕಾಶ ಸಿಕ್ಕಿದೆ. ಘಾನಾ ವಿರುದ್ದದ ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ,ಗೆದ್ದಲ್ಲಿ ಇದು ಸಾಕಾರ ಗೊಳ್ಳುತ್ತದೆ. ಜೋಹಾನ್ಸ್ಬರ್ಗ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳ ನೆರಳಿನಲ್ಲಿ ನಲುಗಿ ಹೋಗಿರುವ ಉರುಗ್ವೆ ತಂಡಕ್ಕೆ ತಮ್ಮ ಶಕ್ತಿ ಸಾಮರ್ಥ್ಯ ಹೊರ ಸೂಸುವುಕ್ಕೆ ಸೂಕ್ತ ವೇದಿಕೆ ಸಿಕ್ಕದ್ದು, ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ. ಒಂದು ವೇಳೆ ಘಾನಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ವಿಶ್ವಕಪ್ನ ಸೆಮಿಫೈನಲ್ ಪ್ರವೇಶಿಸಿದ ಅಫ್ರಿಕಾದ ಮೊದಲ ತಂಡ ಎನ್ನುವ ಖ್ಯಾತಿ ಪಡೆಯುತ್ತದೆ. ಶುರುವಿನಿಂದ ಉರುಗ್ವೆ ತಂಡದ ಅತ್ಯುತ್ತಮ ಆಟಗಳ ಪ್ರದರ್ಶನವಂತೂ ಇದ್ದೇ ಇದೆ !
ಫುಟ್ಬಾಲ್ ವಿಶ್ವಕಪ್ ಶುರುವಾದ ವರ್ಷ, ೧೯೩೦ ಹಾಗೂ ನಂತರ ೧೯೫೦ ರಲ್ಲಿ, ಚಾಂಪಿಯನ್ ಆದ ಉರುಗ್ವೆ ಬಳಿ, ಸದೃಢ ರಕ್ಷಣೆ ಹಾಗೂ ಮುನ್ನಡೆ ಆಟಗಾರರು ಇದ್ದಾರೆ. ಲೂಯಿಸ್ ಸೌರೇಜ್, ಎಡಿನ್ಸನ್ ಕವಾನಿ ಹಾಗೂ ಡಿಯಾಗೊ ಫೋರ್ಲಾನ್ ಅವರಂತಹ ಪ್ರತಿಭಾವಂತ ಫಾರ್ವರ್ಡ್ಗಳನ್ನು ಹೊಂದಿರುವ ಉರುಗ್ವೆಗೆ ಎದುರಾಳಿ ಎಂತಹ ಸವಾಲು ಒಡ್ಡಿದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದೆ. ದಕ್ಷಿಣ ಕೊರಿಯಾದ ವಿರುದ್ಧದ ಪಂದ್ಯದಲ್ಲಿ ಸೌರೇಜ್ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಘಾನಾ ತಂಡದ ಕೆಲವು ಖೂಬಿಗಳು :
ಘಾನಾ ಕೂಡ, ಇದುವರೆಗೆ ಆಡಿದ ಆಟಗಳಲ್ಲಿ ಉತ್ತಮ ಫಲಿತಾಂಷಗಳನ್ನು ಹಾಸಿಲ್ ಮಾಡಿ ಈ ಮಟ್ಟಕ್ಕೆ ಬಂದಿದೆ. "ಜಾನಥನ್ ಮೆನ್ಸಾ" ಹಾಗೂ "ಆ್ಯಂಡ್ರೇ ಆಯೇವ್ " ರವರ ಅನುಪಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ಪೂರ್ಣ "ಸ್ಟ್ರೈಕರ್ ಅಸಮೋಹ ಗ್ಯಾನ್" ರವರ ಮೇಲಿದೆ. ತಂಡದ ಆಟಗಾರರ ಮೇಲೆ ಸಾಕಷ್ಟು ಭರವಸೆಯ ಭಾವನೆಗಳಿಂದ ಪಿಯನ್ಷಿಪ್ನಲ್ಲಿ ಸಧ್ಯ ಉಳಿದಿರುವ ಕೊನೆಯ ಆಫ್ರಿಕಾ ತಂಡ ಒತ್ತಡದಲ್ಲಿ ಸಿಲುಕಿದೆ. ಘಾನಾ ತಂಡದ ಕೋಚ್ ಮಿಲೋವನ್ ರಾಜೆವಿಕ್, ಅತ್ಯಂತ ಖಚಿತವಾದ ನಿಲುವನ್ನು ಹೊಂದಿದ್ದಾರೆ. ಅವರು "ನಮ್ಮ ತಂಡ ಗೆದ್ದು ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕಾ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ" ಎಂದು ಹೇಳುತ್ತಲೇ ಇದ್ದಾರೆ. ಅದು ಸಾಕಾರವಾಗಬೇಕಾದರೆ ಘಾನಾತಂಡ ಪ್ರಚಂಡಪ್ರಯತ್ನ, ಹಾಗೂ ಮಾನಸಿಕ ಶಕ್ತಿಯನ್ನು ಬೆಳಸಿಕೊಂಡು ಆಟದಲ್ಲಿ ಮುನ್ನುಗ್ಗಬೇಕಾಗಿದೆ.
*-ಪ್ರಜಾವಾಣಿ ಫೊಟೊ ಆಲ್ಬಮ್ ಸೌಜನ್ಯದಿಂದ
ಪ್ರತಿಕ್ರಿಯೆ (1)