ಬೆಳನಿಂದ ಸೀನಂಗೇನೋ ಎಡ ಹುಬ್ಬು ಹಾರುತ್ತಿತ್ತು. ಏನೋ ತಾಪತ್ರಯ ಇತ್ತ ಕಣತ್ತ್ .
ಸುಮಾರ್ ದಿವ್ಸದಿಂದ ಇವಳಿಗೆ ಕಂಡರೆ ಆಗದ ಮುತ್ತನ ಮಾವ ಬೇರೆ ಮನೆಯಲ್ಲಿಯೇ ಬಂದು ಝಾಂಡಾ ಹೂಡಿದ್ದ.
ಮುದುಕ!!!... ಕಾಡು ಬಾ ಅನ್ತಿದೆ ನಾಡು ಹೋಗು ಅನ್ನೋ ಹಾಗೆ ಇದ್ದಾನೆ. ಅರಮರುಳು ಬೇರೆ. ಅದೇನ್ ಹಾಳು ಮರೆವೋ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸುಮ್ಮನಿದ್ದರೆ ಅಗಲ್ವಾ,
ಅಷ್ಟೇ ಇದ್ದರೆ ಕರೆದು ಬುದ್ದಿ ಹೇಳಬಹುದು ಸಂಜೆ ಸೀಮಂತದ ಮನೆಯಲ್ಲೇ ಮುತ್ತನ ಮಾವ ಒಂದು ಕಥೆ ಮಾಡಿಬಿಟ್ಟ. ಹಳ್ಳಿ ಮನೆಯಲ್ಲಿ ಸಂಜೆ ಸ್ನಾನ ಮುಗಿಸಿದ ಆತ ಸೀದಾ ನಮ್ಮ ಅಂಗಳಕ್ಕೆ ಪ್ರವೇಶ ಮಾಡಿಬಿಟ್ಟ.ಅಯ್ಯಯ್ಯೋ ಎನಾಯ್ತ್ರೀ ನಿಮಗೆ ಎಂದಳು ಆತನ ಪತ್ನಿ, ಎಲ್ಲ ಹೆಂಗಸರ ಮಧ್ಯೆ ಹೀಗೆ ಗೊಮ್ಮಟನ ಹಾಗೆ ಬರುವುದಾ ಅಂದಳು, ಎನೇ ಹಾಗೆ ಹೇಳ್ತೀ, ಪಾಣಿಪಂಚೆ ಉಟ್ಟಿದ್ದಿನಲ್ಲಾ ನೋಡು ಅಂತ ಕೈ ಹಾಕಿ ಹೆಗಲಿನ ಮೇಲಿನ ಪಾಣಿಪಂಚೆ ಎಳೆದು ತೋರಿಸಿತು, ಹಾಗಾದರೆ ಉಟ್ಟಿದ್ದು...? ನೋಡಿಕೊಂಡು ಎಲ್ಲಾ ಮುಸಿ ಮುಸಿ ನಗುವದರ ಕಾರಣ ತಿಳೀದು ಬಂದ ಹಾಗೇ ತಿರುಗಿ ಓಡಿತು ಬಚ್ಚಲು ಮನೆಗೆ.
ಅವನ ಜತೆ ಅವನ ಮಗ ಕಾಶಿ ಕೂಡಾ ಇದ್ದ, ಅವನೋ ೨೫-೩೦ ರ ಗಂಡಸು.
ಮೊನ್ನೆ ಮೊನ್ನೆ ಮನೆಯಲ್ಲೇನೋ ಶುಭಕಾರ್ಯವಿತ್ತು. ಈಗಿನ ಪೇಟೆಯವರ ಮನೆಯ ಹಾಗೆ ಮನೆ ಒಳಗೆ ಸ್ನಾನ ಗೃಹ ವಿರಲ್ಲವಲ್ಲ , ಇದ್ದರೆ ಅದು ಅಂಗಳದ ಹೊರಗಡೆ ಇರತ್ತೆ. ಲಚುಮಿ ಸ್ನಾನಕ್ಕೆ ಹೋಗಲು ಎಂದಿನಂತೆ ಹೊರಟಳು , ಸ್ನಾನಗೃಹದ ಬಾಗಿಲು ಮುಚ್ಚಿಕೊಂಡಿತ್ತು, ದೂಡಿದವಳು ಓಓಓಓಓಓಓಓಓಓಓಓ ಅಂತ ಕಿರುಚುತ್ತಾ ಓಡಿ ಬಂದಳು ಅಂಗಳಕ್ಕೆ, ಏನಾಯ್ತೇ ಹಾಗೆ ಯಾಕೆ ಕೂಗಿದೆ ಎಂದರೆ ಅರ್ಧ ಅಪಮಾನ ಅರ್ಧ ನಗು ಮತ್ತುನಾಚಿಕೆಯಲ್ಲಿ ಥೂ ಥೂ ಎಂದಳು, ಏನಾಯ್ತು ಅಂತ ಕೇಳಿದರೆ ಪ್ರಾಣಿ ಪಂಚೆನಾದರೂ ತೊಟ್ಕೋಬಹುದಲ್ಲ, ಮೀಯುವಾಗ ಅಥವಾ ಬಾಗಿಲಾದರೂ ಹಾಕ್ಕೋಬಹುದಲ್ವಾ, ಏನ್ ಜನಾರೀ ಅಷ್ಟೂ ಬುದ್ದಿ ಇಲ್ವಾ?
ಲಚುಮಿ ತಂಗಿಯೂ ಬಂದಿದ್ದಳು ಅವ್ಳಿಗೆ ಎರಡ್ ವರ್ಶದ ಮಗ ಇದ್ದ, ಅದ್ ತಾಯ್ ಹಾಲ್ ಬಿಡ್ಸಲ್ಲೆ, ಅದಕ್ಕೆ ಅದ್ ದೊದ್ದ ಮಮ್ಮ ಅಂತ ಹೆಸ್ರ್ ತಾನೇ ಇಟ್ಕಂಡೀತ್.
ಅದ ಯಾವಗ್ ಕೇಂಡ್ರೂ ದೊದ್ದ ಮಮ್ಮ ದೊಡ್ಡ ಮಮ್ಮಾ ಅಂತ ಇತ್ತ ಅಂಬ್ರ, ಅವೆಲ್ಲಿದ್ನೋ ಮುತ್ತನ ಭಾವ, ಅದೇ ಕಾಶಿ!! ಬಂದ್ಕಂಡ ಇವತ್ತ ಮಾತ್ರ ನಿಂಗ್ ಇಲ್ಲೆ ದೊಡ್ಡಮಮ್ಮ ಅದ ಇವತ್ ನಂಗೆ, ನಾ ಕೊಡುದಿಲ್ಲೆ ನಿಂಗೆ ಅಂಬ್ದಾ ಮರಯ್ರೇ, ಎಲ್ಲರೂ ನಗಾಡಿ ನಗಾಡಿ ಇಟ್ಟದ್ದೇ ( ಎಲ್ ಅಂದೇಳಿ ಕೇಳ್ಬೇಡಿ)!! ಅವ್ನಿಗ್ ದೊಡ್ ಮಮ್ಮ ಅಂದ್ರ ಎಂತ ಹೇಳ್ದೇ ಇದ್ರೆ ಮತ್ತ್ ಎಂತದಾರೂ ತಲೆ ಸಮ ಇಲ್ದ್ ಹಾಂಗ್ ಮಾಡ್ರ್ ಕಷ್ಟ ಅಂದ್ಕಂಡ್ ,ಹೇಳದ್ದೇ ತಡ ಅದ ಮತ್ತೆಲ್ಲೂ ಕಾಂಬ್ಕೇ ಸಿಗ್ಲಿಲ್ಲ ಬಿಡಿ. ಅದೊಂದ್ ತಲೆ ಬಿಸಿ ಯಾಪಾರ ಬೇರೆ.
ಅದೇ ಮುಸಿ ಮುಸಿಯಲ್ಲಿ ಹೊರಟಿದ್ದ ಸೀನ.
ಬಸ್ಸು ಏರಿನಲ್ಲಿ ತಿರುಗುವಾಗ ದಭ್ ಅಂತ ಶಬ್ದ ಕೇಳ್ತು, ಎಂತದಪ್ಪಾ ಬಿತ್ತಲ್ಲೆ ಅಂದ್ಕಂಡ, ಸ್ವಲ್ಪ ಹೊತ್ತಿಗೇ, ಕಾಲಿಗೆಲ್ಲಾ ಏನೋ ಅಂತ್ಕಂಡ ಹಾಂಗೇ ಆಯ್ತ ಅಂಬ್ರ, ಒಬ್ಬಿಬ್ಬ್ರಿಗಲ್ಲ, ಬಸ್ಸಗಿದ್ದ ಎಲ್ಲರಿಗೂ ಅದೇ ಕಾಲಿಗೆಂತದ್ದೂ ಡಾಂಬರ ಕಣಂಗಿದ್ದ ಅಂದೇಳಿ
ಎಲ್ಲರೂ ತಲಿಗೊಂದ್ ಮಾತಾಡೂದ್ ಅಂಬ್ರ.
ಡ್ರೈವರ್ ಬಸ್ ನಿಲ್ಸ್ದ, ಡಾಂಬರ್ ಯಾರ ಇಟ್ರ ಬಸ್ಸಲ್ಲಿ..?
ಕಡಿ ಕಾಂಬತ್ತಿಗೆ ಅದ ಡಾಂಬರ್ ಅಲ್ದೇ ಅದ ಜೋನಿ ಬೆಲ್ಲ
ಯಾರದ್ದ, ಯಾರದ್ದ ಅಂದ್ರ ಗೊತ್ತಾಯ್ತ ಅದ ಸೀನಂದ್!!!
ಕಂಡಕ್ಟರ್ ಡ್ರೈವರ್ ಇಬ್ಬರೂ ಬಸ್ಸಗಿದ್ದರ್ ಎಲ್ಲರೂ.........ತಲಿಗೊಂದ್ ಮಾತೇನ್, ತೋರ್ಸಿ ನಗಾಡುದೇನ್, ಅಷ್ಟೇ ಆದರ್ ಸರಿ ಯಿತ್ತ, ಕಂಡಕ್ಟರ್ ಸೀನನ ಹತ್ರ ಇಡೀ ಬಸ್ ತೊಳ್ದ್ ಸರಿಮಾಡೂಕ್ ಹೇಳ್ದ. ಅದೇ ಅಲ್ದ ತಲಿ ಬಿಸಿ ಆದದ್ದ, ಸೀನಂಗೆ ಬಸ್ ಕ್ಲೀನ್ ಮಾಡಿ ಮಾಡಿ , ಪುನ ನೀರ್ ಹಾಕಿ ತೊಳ್ದ ತೊಳ್ದ ಸಾಕಾಯ್ತ್. ಅವ್ರ ಹೇಳ್ದ ಹಾಂಗೇ ಬಸ್ಸಿಡೀ ತೊಳ್ದ ಕ್ಲೀನ್ ಮಾಡೋ ಹೊತ್ತಿಗೆ ಸೀನನ ಬೆನ್ನಿನ್ ಕೋಲ್ ಇದ್ದ ಜಾಗದಗೇ ಇರ್ಲಿಲ್ಲೆ ಕಾಣಿ.
ಅದೇ ತಲಿ ಬಿಸಿಯಗ್ ಮನಿಗ್ ಬಂದ, ಲಚಮಿ ಕೇಳ್ದ್ಲ್!!
ಎಲ್ಲಿತ್ತೇ ಜೋನಿ ಬೆಲ್ಲಾ...?( ಸೀನ ಅವ್ಳ ಮನಿ ಬದೀಗ್ ಹೋರೂ ಅವ್ಳ ಮನಿಯೋರ್ ಬಾಸ್ಸೀಗೇ ತಕಬಂದ್ ಹಾಕಿ ಕೊಡ್ತಿದ್ದೀರ್ ಜೋನಿ ಬೆಲ್ಲಾ, ಅವ್ಳಿಗ್ ಅದ್ ಅಂದ್ರ್ ಜೀವ.)
ಸೀನ ಸುಮ್ಮನಿದ್ದ ಮಾತಾಡಲ್ಲೆ
ಎಂತ ಆಯ್ತೇ ಎಲ್ಲೇ ಜೋನಿ ಬೆಲ್ಲಾ? ಅಪ್ಪಯ್ಯ ಫೋನ್ ಮಾಡಿ ಹೇಳ್ರ್ ಅವ್ರ್ ಕಳ್ಸರ್ ಅಂಬ್ರಲ್ಲೆ.
ನಿನ್ನ ಜೋನಿ ಬೆಲ್ಲ ಕಪ್ ನಾಯಿ ತಕಂಡ್ ಹೋಯ್ತ್..!!!
ಅವ್ಳಿಗ್ ಅದ ಅರ್ಥ ಅಯಲ್ಲೆ, ಅದ್ ಹೇಂಗ್ ಮರಾಯರೇ ಅಲ್ಲ ಡಬ್ಬಿ ಬೆಲ್ಲಾ ನಾಯ್ ಹ್ಯಾಂಗ್ ತಕಂಡ್ ಹೋತ್ ಹಂಗರೆ?
ಇನ್ನ್ ಇಡೀಜನ್ಮದಗೆ ಜೋನಿ ಬೆಲ್ಲ ಮುಟ್ಟುದಿಲ್ಲೆ ಅಂದ್ ಹೇಳಿ ಪ್ರತಿಜ್ಞೆ ಮಾಡ್ತೆ. ಅವ್ಳಿಗ್ ಹೇಳೊರ್ ಯಾರ್??
ಮುಂದಿನ್ ಹದ್ನೈದ್ ದಿನ ಸೀನಂಗೆ ಚಾವ್ಡಿಯಲ್ಲೇ !!! ಅವ್ನ್ ತಲೆದಿಂಬೇ ಒಟ್ಟಿಗ್ ಅಷ್ಟೇ....
ಪ್ರತಿಕ್ರಿಯೆ (5)