ಕೂಡ್ಲಿಗಿ: ಕೇವಲ ಮಾನವ ಶ್ರಮವನ್ನು ಬಯಸುವ, ಇನ್ನೂ ಯಂತ್ರಗಳ ಆಧುನಿಕ ಗಾಳಿ ಬೀಸದ ಅಪ್ಪಟ ದೇಸಿ ಉದ್ದಿಮೆಯೆಂದರೆ ಕಂಬಳಿ ಉದ್ದಿಮೆ. ಕಂಬಳಿ ತಯಾರಿಕೆಯ್ಲಲಿನ್ನೂ ಕಲಬೆರಕೆ ಸುಳಿದ್ಲಿಲ. ಕೇವಲ ಕುರಿಗಳ ಉಣ್ಣೆಯಿಂದ ಸಿದ್ಧಗೊಳ್ಳುವ ಕಂಬಳಿ ತಯಾರಿಕೆಯ್ಲಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಆದರೆ ಇತ್ತೀಚಿನ ರಂಗುರಂಗಿನ ಜಮಖಾನಾ, ಉಲನ್, ರಗ್ಗಳ ಹಾವಳಿಯ್ಲಲಿ ಕಂಬಳಿ ಉದ್ದಿಮೆ ಸಂಕಷ್ಟಕ್ಕೀಡಾಗುತ್ತಿದೆ. ಕಂಬಳಿ ನೇಯ್ಗೆಯಿಂದಲೇ ಬದುಕುತ್ತಿರುವ ಕುಟುಂಬಗಳು, ಕಂಬಳಿಯ್ಲಲೂ ಆಧುನಿಕತೆಯನ್ನು ಬೆರೆಸಲು ಶತಾಯಗತಾಯ ಪ್ರಯತ್ನಿಸುತ್ತಿವೆ.
ತ್ಲಾಲೂಕಿನ ತಾಯಕನಹಳ್ಳಿಯ್ಲಲಿ ಕಂಬಳಿ ತಯಾರಿಕೆಯನ್ನೇ ನೆಚ್ಚಿಕೊಂಡಿರುವ ೮೦೦ ಕುಟುಂಬಗಳು ಉದ್ದಿಮೆಯ್ಲಲಿ ಬದುಕುಳಿಯುವ ಹೋರಾಟದ್ಲಲಿ ತೊಡಗಿವೆ. ಪ್ರತಿದಿನ ೪೦೦ ಕಂಬಳಿಗಳನ್ನು ಸಿದ್ಧಪಡಿಸುವ ಈ ಕುಟುಂಬಗಳ ಎಲ ಸದಸ್ಯರಿಗೂ ಕಂಬಳಿ ತಯಾರಿಕೆಯೇ ವೃತ್ತಿ, ಅದೇ ಬದುಕು, ಅದೇ ಉಸಿರಾಗಿದೆ. ತಲೆತಲಾಂತರದಿಂದ ಕಂಬಳಿ ನೇಯ್ಗೆಯೇ ಬದುಕಾಗಿರುವ ತಾಯಕನಹಳ್ಳಿಯ್ಲಲಿ ೧೯೫೮ರ್ಲಲಿಯೇ ಸಹಕಾರ ಸಂಘ ರಚನೆಯಾಗಿದೆ. ಇಲಿ ಸಿದ್ಧಗೊಳ್ಳುವ ಉತ್ಕೃಷ್ಟ ದರ್ಜೆಯ ಕಂಬಳಿಗಳು ಸಮೀಪದ ಚಿತ್ರದುರ್ಗ ಜ್ಲಿಲೆಯ ಚಳ್ಳಕೆರೆಗೆ ಮಾರಾಟಕ್ಕೆ ಹೋಗುತ್ತವೆ. ಅಲಿಂದ ಪಕ್ಕದ ತಮಿಳುನಾಡು, ಆಂಧ್ರಪ್ರದೇಶಗಳಿಗೆ ಕಂಬಳಿಗಳು ಸರಬರಾಜಾಗುತ್ತವೆ. ದುರಂತವೆಂದರೆ ಕಂಬಳಿಗಳಿಗೆ ಇತ್ತೀಚೆಗೆ ಅಷ್ಟಾಗಿ ಬೇಡಿಕೆಯ್ಲಿಲದಿರುವುದು. ಇಲಿನ ಶ್ರೀರೇವಣಸಿದ್ಧೇಶ್ವರ ಉಣ್ಣೆ ಕೈಮಗ್ಗದ ನೇಕಾರರ ಉತ್ಪಾದನಾ ಮತ್ತು ಮಾರಾಟದ ಸಹಕಾರ ಸಂಘದ ವತಿಯಿಂದ ನೇಕಾರರಿಗಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಸ್ಥಳಾವಾಕಾಶವ್ಲಿಲದ ನೇಕಾರರು ಈ ಕಟ್ಟಡದ್ಲಲಿ ಕಂಬಳಿಯನ್ನು ನೇಯುತ್ತಾರೆ. ಯಂತ್ರಗಳ ಜಂಜಾಟವೇ ಇಲದ ಕಂಬಳಿ ತಯಾರಿಕೆ ಕೇವಲ ಮಾನವ ಶ್ರಮವನ್ನಷ್ಟೇ ಬಯಸುತ್ತದೆ. ಕುರಿಯ ಉಣ್ಣೆಯನ್ನು ಕತ್ತರಿಸಿ, ಅದನ್ನು ಹಿಂಜಿ ಶುದ್ಧಗೊಳಿಸಿ, ನೂಲು ತೆಗೆದು, ಅದನ್ನು ಕೈಮಗ್ಗಕ್ಕೆ ಹಾಕಿ ನೇಯುವವರೆಗೆ ಇಡೀ ಕುಟುಂಬಕ್ಕೆ ವಿಧವಿಧದ ಕೆಲಸ. ಗ್ರಾಮದ್ಲಲಿ ಎಲಿಯೇ ಕಾಲಿರಿಸಿದರೂ ಪ್ರತಿ ಮನೆಂiiಲೂ ಕಂಬಳಿ ತಯಾರಿಕೆಯ ಕಾರ್ಯವನ್ನೇ ಕಾಣುತ್ತೇವೆ. ಆದರೆ ಎಂದೋ ತಾವೇ ನಿರ್ಮಿಸಿಕೊಂಡಿದ್ದ ಸಾಮೂಹಿಕ ಕೈಮಗ್ಗದ ಹಳೆಯ ಕಟ್ಟಡ ಈಗ ಶಿಥಿಲಾವಸ್ಥೆಯ್ಲಲಿದೆ, ಮನೆಯ ಮುಂದೆ ತೆಂಗಿನ ಗರಿಗಳನ್ನು ಹೊದೆಸಿ ತಾತ್ಕಾಲಿಕವಾಗಿ ಸಿದ್ಧಪಡಿಸಿಕೊಂಡಿದ್ದ ನೇಯ್ಗೆಯ ವ್ಯವಸ್ಥೆ ಮೂಲೆಗುಂಪಾಗುತ್ತಿದೆ. ಕಂಬಳಿ ನೇಯ್ಗೆಯ್ಲಲಿ ತೊಡಗಿಸಿಕೊಂಡವರಿಗೆ ಅಲಿನ ಧೂಳು, ಕಲುಷಿತ ವಾತಾವರಣದಿಂದಾಗಿ ಬೇಗನೇ ಶ್ವಾಸಕೋಶದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ, ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯವ್ಲಿಲ. ವೈದ್ಯಕೀಯ ಸೌಲಭ್ಯಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕು. ಸ್ಥಳದ್ಲಲೇ ಚಿಕಿತ್ಸೆ ಒದಗಿಸುವ, ಆರೋಗ್ಯ ವಿಮೆಯನ್ನು ಹೆಚ್ಚಿಸುವ ಕಾರ್ಯವಾಗಬೇಕಾಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೇಕಾರ ಕಲ್ಯಾಣ ಯೊಜನೆಯಡಿಯ್ಲಲಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಹೆರಿಗೆ ಭತ್ಯೆ, ರಾಜೀವ ಗಾಂಧಿ ವಸತಿ ಯೋಜನೆಯಡಿಯ್ಲಲಿ ಮನೆಗಳ ನಿರ್ಮಾಣ ಹೀಗೆ ಹಲವಾರು ಯೋಜನೆಗಳಿವೆ, ಆದರೆ ಕಂಬಳಿ ಉದ್ದಿಮೆ ಬದುಕುಳಿಯಬೇಕ್ಲಲ? ಎಂದು ಆತಂಕದಿಂದ ಪ್ರಶ್ನಿಸುವವರು ಸಹಕಾರ ಸಂಘದ ನಿರ್ದೇಶಕ ಕೆ.ಕೆಂಚಲಿಂಗಪ್ಪ. ಸಂಘದ ಕಟ್ಟಡದ್ಲಲಿ ೧೨ ಕೈಮಗ್ಗಗಳಿವೆ ಆದರೆ ಹೆಚ್ಚಿನ ಸವಲತ್ತುಗಳ್ಲಿಲ. ಪ್ರತಿ ವಾರವೂ ಇಲಿಂದ ಸುಮಾರು ೨,೦೦೦ ಕಂಬಳಿಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಬೇಡಿಕೆಗನುಗುಣವಾಗಿ ವಿವಿಧ ದರ್ಜೆಯ ಕಂಬಳಿಗಳು ಸಿದ್ಧಗೊಳ್ಳುತ್ತವೆ. ೨೦೦ ರೂ.ಗಳಿಂದ ೮೦೦ ರೂ.ಗಳವರೆಗೂ ಇವುಗಳ ದರವಿದೆ. ಪ್ರಸ್ತುತ ಸಂಘಕ್ಕೆ ೧,೨೦೦ ಜನ ಸದಸ್ಯರಿದ್ದಾರೆ. ಮುಖ್ಯವಾಗಿ ಇವರಿಗೆ ವಾಸಕ್ಕೆ, ನೇಯ್ಗೆಗೆ ಮನೆ ಸ್ಥಳಾವಾಕಶವ್ಲಿಲ. ಇದಕ್ಕಾಗಿ ಸರ್ಕಾರದಿಂದ ೪೦,೦೦೦ ರೂ.ಗಳು ಹಾಗೂ ಬ್ಯಾಂಕ್ನಿಂದ ೨೦,೦೦೦ ರೂ.ಗಳ ಸಾಲ ಸೌಲಭ್ಯಕ್ಕಾಗಿ ಇಲಾಖೆಯ ಮುಂದೆ ಬೇಡಿಕೆಯನ್ನಿರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಉಮಾಮಹೇಶ್ ಹೇಳುತ್ತಾರೆ. ನೇಕಾರರಿಗೆ ಹೆಚ್ಚಿನ ಸೌಲಭ್ಯಕ್ಕಾಗಿ ಉಣ್ಣೆಯ ಹಂಜಿ ತೆಗೆಯುವ ಯಂತ್ರ ಬೇಕಾಗಿದೆ. ಇದಕ್ಕಾಗಿ ಯಂತ್ರ ಹಾಗೂ ಕಟ್ಟಡವೂ ಸೇರಿದಂತೆ ೫ ಲಕ್ಷ ರೂ.ಗಳ ವೆಚ್ಚವಾಗುತ್ತದೆ, ಸರ್ಕಾರ ಇದಕ್ಕೆ ಮನಸು ಮಾಡಬೇಕು ಎಂದು ಸಂಘದ ನಿರ್ದೇಶಕರ ಬೇಡಿಕೆಯಾಗಿದೆ.
ಮಂಗಳ ಕಾರ್ಯಗಳ್ಲಲಿ ಅತ್ಯವಶ್ಯಕವಾಗಿ ಬೇಕಾಗುವ ಕಂಬಳಿ, ವಿನ್ಯಾಸ, ಬಣ್ಣವ್ಲಿಲದ್ದಕ್ಕಾಗಿ ಇತ್ತೀಚೆಗೆ ನಿಧಾನವಾಗಿ ಮರೆಯಾಗುತ್ತಿದೆ. ದೇಸಿ ಉದ್ದಿಮೆಯಾಗಿರುವ ಕಂಬಳಿ ತಯಾರಿಕೆಗೆ ಸರ್ಕಾರ ಹೊಸ ಕಾಯಕಲ್ಪ ನೀಡಬೇಕಾಗಿದೆ. ಕುಸಿಯುತ್ತಿರುವ ನೇಕಾರರನ್ನು ಮೇಲೆತ್ತಲು ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ.
-ಸಿದ್ಧರಾಮ ಹಿರೇಮಠ.
ಕೇವಲ ಮಾನವ ಶ್ರಮವನ್ನು ಬಯಸುವ, ಇನ್ನೂ ಯಂತ್ರಗಳ ಆಧುನಿಕ ಗಾಳಿ ಬೀಸದ ಅಪ್ಪಟ ದೇಸಿ ಉದ್ದಿಮೆಯೆಂದರೆ ಕಂಬಳಿ ಉದ್ದಿಮೆ. ಕಂಬಳಿ ತಯಾರಿಕೆಯ್ಲಲಿನ್ನೂ ಕಲಬೆರಕೆ ಸುಳಿದ್ಲಿಲ. ಕೇವಲ ಕುರಿಗಳ ಉಣ್ಣೆಯಿಂದ ಸಿದ್ಧಗೊಳ್ಳುವ ಕಂಬಳಿ ತಯಾರಿಕೆಯ್ಲಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಆದರೆ ಇತ್ತೀಚಿನ ರಂಗುರಂಗಿನ ಜಮಖಾನಾ, ಉಲನ್, ರಗ್ಗಳ ಹಾವಳಿಯ್ಲಲಿ ಕಂಬಳಿ ಉದ್ದಿಮೆ ಸಂಕಷ್ಟಕ್ಕೀಡಾಗುತ್ತಿದೆ. ಕಂಬಳಿ ನೇಯ್ಗೆಯಿಂದಲೇ ಬದುಕುತ್ತಿರುವ ಕುಟುಂಬಗಳು, ಕಂಬಳಿಯ್ಲಲೂ ಆಧುನಿಕತೆಯನ್ನು ಬೆರೆಸಲು ಶತಾಯಗತಾಯ ಪ್ರಯತ್ನಿಸುತ್ತಿವೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯ್ಲಲಿ ಕಂಬಳಿ ತಯಾರಿಕೆಯನ್ನೇ ನೆಚ್ಚಿಕೊಂಡಿರುವ ೮೦೦ ಕುಟುಂಬಗಳು ಉದ್ದಿಮೆಯಲ್ಲಿ ತೊಡಗಿಸಿಕೊಂಡಿವೆ. ಪ್ರತಿದಿನ ೪೦೦ ಕಂಬಳಿಗಳನ್ನು ಸಿದ್ಧಪಡಿಸುವ ಈ ಕುಟುಂಬಗಳ ಎಲ್ಲ ಸದಸ್ಯರಿಗೂ ಕಂಬಳಿ ತಯಾರಿಕೆಯೇ ವೃತ್ತಿ, ಅದೇ ಬದುಕು, ಅದೇ ಉಸಿರಾಗಿದೆ. ತಲೆತಲಾಂತರದಿಂದ ಕಂಬಳಿ ನೇಯ್ಗೆಯೇ ಬದುಕಾಗಿರುವ ತಾಯಕನಹಳ್ಳಿಯ್ಲಲಿ ೧೯೫೮ರಲ್ಲಿಯೇ ಸಹಕಾರ ಸಂಘ ರಚನೆಯಾಗಿದೆ. ಇಲ್ಲಿ ಸಿದ್ಧಗೊಳ್ಳುವ ಉತ್ಕೃಷ್ಟ ದರ್ಜೆಯ ಕಂಬಳಿಗಳು ಸಮೀಪದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಮಾರಾಟಕ್ಕೆ ಹೋಗುತ್ತವೆ. ಅಲ್ಲಿಂದ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಗೆ ಕಂಬಳಿಗಳು ಸರಬರಾಜಾಗುತ್ತವೆ. ದುರಂತವೆಂದರೆ ಕಂಬಳಿಗಳಿಗೆ ಇತ್ತೀಚೆಗೆ ಅಷ್ಟಾಗಿ ಬೇಡಿಕೆಯಿಲ್ಲದಿರುವುದು. ಇಲ್ಲಿನ ಶ್ರೀರೇವಣಸಿದ್ಧೇಶ್ವರ ಉಣ್ಣೆ ಕೈಮಗ್ಗದ ನೇಕಾರರ ಉತ್ಪಾದನಾ ಮತ್ತು ಮಾರಾಟದ ಸಹಕಾರ ಸಂಘದ ವತಿಯಿಂದ ನೇಕಾರರಿಗಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಸ್ಥಳಾವಾಕಾಶವಿಲ್ಲದ ನೇಕಾರರು ಈ ಕಟ್ಟಡದಲ್ಲಿ ಕಂಬಳಿಯನ್ನು ನೇಯುತ್ತಾರೆ.
ಯಂತ್ರಗಳ ಜಂಜಾಟವೇ ಇಲ್ಲದ ಕಂಬಳಿ ತಯಾರಿಕೆ ಕೇವಲ ಮಾನವ ಶ್ರಮವನ್ನಷ್ಟೇ ಬಯಸುತ್ತದೆ. ಕುರಿಯ ಉಣ್ಣೆಯನ್ನು ಕತ್ತರಿಸಿ, ಅದನ್ನು ಹಿಂಜಿ ಶುದ್ಧಗೊಳಿಸಿ, ನೂಲು ತೆಗೆದು, ಅದನ್ನು ಕೈಮಗ್ಗಕ್ಕೆ ಹಾಕಿ ನೇಯುವವರೆಗೆ ಇಡೀ ಕುಟುಂಬಕ್ಕೆ ವಿಧವಿಧದ ಕೆಲಸ. ಗ್ರಾಮದಲ್ಲಿ ಎಲ್ಲಿಯೇ ಕಾಲಿರಿಸಿದರೂ ಪ್ರತಿ ಮನೆಯಲ್ಲೂ ಕಂಬಳಿ ತಯಾರಿಕೆಯ ಕಾರ್ಯವನ್ನೇ ಕಾಣುತ್ತೇವೆ. ಆದರೆ ಎಂದೋ ತಾವೇ ನಿರ್ಮಿಸಿಕೊಂಡಿದ್ದ ಸಾಮೂಹಿಕ ಕೈಮಗ್ಗದ ಹಳೆಯ ಕಟ್ಟಡ ಈಗ ಶಿಥಿಲಾವಸ್ಥೆಯಲ್ಲಿದೆ. ಮನೆಯ ಮುಂದೆ ತೆಂಗಿನ ಗರಿಗಳನ್ನು ಹೊದೆಸಿ ತಾತ್ಕಾಲಿಕವಾಗಿ ಸಿದ್ಧಪಡಿಸಿಕೊಂಡಿದ್ದ ನೇಯ್ಗೆಯ ವ್ಯವಸ್ಥೆ ಮೂಲೆಗುಂಪಾಗುತ್ತಿದೆ. ಕಂಬಳಿ ನೇಯ್ಗೆಯಲ್ಲಿ ತೊಡಗಿಸಿಕೊಂಡವರಿಗೆ ಅಲ್ಲಿನ ಧೂಳು, ಕಲುಷಿತ ವಾತಾವರಣದಿಂದಾಗಿ ಬೇಗನೇ ಶ್ವಾಸಕೋಶದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ, ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯವಿಲ್ಲ. ವೈದ್ಯಕೀಯ ಸೌಲಭ್ಯಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕು. ಸ್ಥಳದ್ಲಲೇ ಚಿಕಿತ್ಸೆ ಒದಗಿಸುವ, ಆರೋಗ್ಯ ವಿಮೆಯನ್ನು ಹೆಚ್ಚಿಸುವ ಕಾರ್ಯವಾಗಬೇಕಾಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೇಕಾರ ಕಲ್ಯಾಣ ಯೊಜನೆಯಡಿಯಲ್ಲಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಹೆರಿಗೆ ಭತ್ಯೆ, ರಾಜೀವ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ ಹೀಗೆ ಹಲವಾರು ಯೋಜನೆಗಳಿವೆ, ಆದರೆ ಕಂಬಳಿ ಉದ್ದಿಮೆ ಬದುಕುಳಿಯಬೇಕಲ್ಲ? ಎಂದು ಆತಂಕದಿಂದ ಪ್ರಶ್ನಿಸುವವರು ಸಹಕಾರ ಸಂಘದ ನಿರ್ದೇಶಕ ಕೆ.ಕೆಂಚಲಿಂಗಪ್ಪ. ಸಂಘದ ಕಟ್ಟಡದ್ಲಲಿ ೧೨ ಕೈಮಗ್ಗಗಳಿವೆ ಆದರೆ ಹೆಚ್ಚಿನ ಸವಲತ್ತುಗಳಿಲ್ಲ. ಪ್ರತಿ ವಾರವೂ ಇಲ್ಲಿಂದ ಸುಮಾರು ೨,೦೦೦ ಕಂಬಳಿಗಳು ಮಾರಾಟಕ್ಕೆ ಸಿದ್ಧಗೊಳ್ಳುತ್ತವೆ. ಬೇಡಿಕೆಗನುಗುಣವಾಗಿ ವಿವಿಧ ದರ್ಜೆಯ ಕಂಬಳಿಗಳು ಸಿದ್ಧಗೊಳ್ಳುತ್ತವೆ. ೨೦೦ ರೂ.ಗಳಿಂದ ೮೦೦ ರೂ.ಗಳವರೆಗೂ ಇವುಗಳ ದರವಿದೆ. ಪ್ರಸ್ತುತ ಸಂಘಕ್ಕೆ ೧,೨೦೦ ಜನ ಸದಸ್ಯರಿದ್ದಾರೆ. ಮುಖ್ಯವಾಗಿ ಇವರಿಗೆ ವಾಸಕ್ಕೆ, ನೇಯ್ಗೆಗೆ ಮನೆ ಸ್ಥಳಾವಾಕಶವಿಲ್ಲ. ಇದಕ್ಕಾಗಿ ಸರ್ಕಾರದಿಂದ ೪೦,೦೦೦ ರೂ.ಗಳು ಹಾಗೂ ಬ್ಯಾಂಕ್ನಿಂದ ೨೦,೦೦೦ ರೂ.ಗಳ ಸಾಲ ಸೌಲಭ್ಯಕ್ಕಾಗಿ ಇಲಾಖೆಯ ಮುಂದೆ ಬೇಡಿಕೆಯನ್ನಿರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಉಮಾಮಹೇಶ್ ಹೇಳುತ್ತಾರೆ. ನೇಕಾರರಿಗೆ ಹೆಚ್ಚಿನ ಸೌಲಭ್ಯಕ್ಕಾಗಿ ಉಣ್ಣೆಯ ಹಂಜಿ ತೆಗೆಯುವ ಯಂತ್ರ ಬೇಕಾಗಿದೆ. ಇದಕ್ಕಾಗಿ ಯಂತ್ರ ಹಾಗೂ ಕಟ್ಟಡವೂ ಸೇರಿದಂತೆ ೫ ಲಕ್ಷ ರೂ.ಗಳ ವೆಚ್ಚವಾಗುತ್ತದೆ, ಸರ್ಕಾರ ಇದಕ್ಕೆ ಮನಸು ಮಾಡಬೇಕು ಎಂದು ಸಂಘದ ನಿರ್ದೇಶಕರ ಬೇಡಿಕೆಯಾಗಿದೆ.
ಮಂಗಳ ಕಾರ್ಯಗಳಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ಕಂಬಳಿ, ವಿನ್ಯಾಸ, ಬಣ್ಣವಿಲ್ಲದ್ದಕ್ಕಾಗಿ ಇತ್ತೀಚೆಗೆ ನಿಧಾನವಾಗಿ ಮರೆಯಾಗುತ್ತಿದೆ. ದೇಸಿ ಉದ್ದಿಮೆಯಾಗಿರುವ ಕಂಬಳಿ ತಯಾರಿಕೆಗೆ ಸರ್ಕಾರ ಹೊಸ ಕಾಯಕಲ್ಪ ನೀಡಬೇಕಾಗಿದೆ. ಕುಸಿಯುತ್ತಿರುವ ನೇಕಾರರನ್ನು ಮೇಲೆತ್ತಲು ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ.
-ಸಿದ್ಧರಾಮ ಹಿರೇಮಠ.
ಪ್ರತಿಕ್ರಿಯೆ (2)