ಇದೊಂದು ಪದ್ಯದ ಪದಬಂಡಿ
ಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕು
ಮೊದಲ ಸಾಲಿನ ಕೊನೆಯ ಎರಡು ಪದಗಳು ಅನುಕೃಮಣಿಸುತ್ತ ಮುಂದುವರಿಯುತ್ತವೆ
ಶುರುವಾದ ಶಬ್ದವೇ ನಾಲ್ಕನೆಯ ಸಾಲಿನ ಕೊನೆಯ ಶಬ್ದವೂ ಆಗಿರಬೇಕು
ಮತ್ತು ನಾಲ್ಕನೆಯ ಸಾಲಿನ ಕೊನೆಯ ಶಬ್ದದ ಮೊದಲ ಶಬ್ದ ಮುಂದಿನ ಸಾಲಿನ ಮೊದಲ ಶಬ್ದವಾಗಬೇಕು
ಅಂದರೆ ಈ ಹಾಡಿನ ಮುಂದಿನ ಶಬ್ದ "ಉಸಿರಿನ" ಅಥವಾ "ಉಸಿರು" ಎಂದು ಆರಂಭವಾಗಬೇಕು
ಸಿದ್ಧವಾಗಿದ್ದೀರಾ..?
ಬೆಳೆಯೋ ಬೆಳೆಯುವ ಪೈರಿನ ಮೊಳಕೆಯೋ
ಪೈರಿನ ಮೊಳಕೆಯ ಹಸಿ ಹಸಿ ಚಿಗುರೋ
ಹಸಿ ಹಸಿ ಚಿಗುರಿನ ತಿಳಿಹಸಿ ರೆಸಳೋ
ತಿಳಿಹಸಿ ರೆಸಳಿನ ಉಸಿರಿನ ಬೆಳೆಯೋ
ಅಬ್ಭಬ್ಬಾ ಎಷ್ಟೊಂದು ಆಯ್ಕೆಗಳು
ಎಲ್ಲರ ಉತ್ಸಾಹ ಮತ್ತು ಕವಿತೆ ಚೆನ್ನಾಗಿದೆ ನಾನೀಗ ವಿಜಯ ಪೈಗಳ ಸಾಲನ್ನು ಮೊದಲಿನ ಹಾಡಿಗೆ ಸೇರಿಸಿದ್ದೇನೆ
ಸರಿ ನಂತರದ ಸಾಲು ಹೀಗೆಯೇ ಮುಂದುವರಿಯಲಿ
ಮೂರನೆಯದ್ದು "ರೈತನ" ಶಬ್ದದಿಂದ ಆರಂಭವಾಗಲಿ
ಉಸಿರಿನ ಬೆಳೆಯೋ ಬೆಳೆಯುವ ಪೈರೋ
ಬೆಳೆಯುವ ಪೈರೋ ಕಾಣುವ ಹಸಿರೊ
ಕಾಣುವ ಹಸಿರೊ ಭೂತಾಯಿಯ ಬಸಿರೊ
ಭೂತಾಯಿಯ ಬಸಿರೊ ರೈತನ ಉಸಿರೊ
ವಿಜಯ್, ಪವಿತ್ರ, ಶ್ರೀಕಾಂತ್, ರಾಯರು, ವಸಂತ್
ಎಲ್ಲರ ಪ್ರತಿಕ್ರೀಯೆ ಮತ್ತು ಉತ್ಸಾಹ ತುಂಬಾ ಚೆನ್ನಾಗಿತ್ತು
ನಾಲ್ಕು ಪದಗಳ ನಾಲ್ಕು ಸಾಲಿನ ಮೂರನೆಯ ಚರಣವನ್ನು ನಿಮ್ಮೆಲ್ಲರ ಪ್ರತಿಕ್ರೀಯೆಗಳಿಂದಲೇ ಆರಿಸಿ ಸೇರಿಸಿದ್ದೇನೆ,
ರೈತನ ಉಸಿರೇ ನಾಡಿನ ಹಸಿರು
ನಾಡಿನ ಹಸಿರೇ ಭರವಸೆಯುಸಿರು
ಭರವಸೆಯುಸಿರೇ ಬದುಕಲಿ ಬೆಳಗು
ಬದುಕಿನ ಬೆಳಕೇ ನೆಮ್ಮದಿ ರೈತಗು
ಮುಂದಿನ ಚರಣ "ನೆಮ್ಮದಿ" ಪದದಿಂದ ಆರಂಭವಾಗಲಿ.
ಭಾಗ್ವತರು ಬರೆದ ಮುಂದಿನ ಚರಣ ಇದು
ನೆಮ್ಮದಿ ಪಡೆದಾ ರೈತನ ಬದುಕು
ರೈತನ ಬದುಕು ಹರುಷದ ಬೆಳಕು
ಹರುಷದ ಬೆಳಕು ಅರಳಲಿ ಮನದಿ
ಅರಳಲಿ ಮನದಿ ನೆಲೆಸಲಿ ನೆಮ್ಮದಿ
ಈ ಕವಿತೆ ಪದಬಂಡಿಯಲ್ಲಿ ಆಸಕ್ತಿ ವಹಿಸಿದ ಎಲ್ಲರಿಗೂ ಭಾಗವಹಿಸಿದ ಎಲ್ಲರಿಗೂ ನನ್ನ ಅನಂತಾನಂತ ವಂದನೆಗಳು
ಪ್ರತಿಕ್ರಿಯೆ (9)