ಇಂದಿನ ದಿನಗಳಲ್ಲಿ ಎಲ್ಲರಬಾಯಿನಲ್ಲೂ ಇದೇ ಚರ್ಚೆ. " ವಿಶ್ವಕಪ್ ಗೆಲ್ಲುವವರ‍್ಯಾರು" ? ಸ್ಪೇನಿನ ವೀರ-"ವಿಲ್ಲ"-ಇಲ್ಲವೇ ಜರ್ಮನಿಯ ಜಾಣ-"ಕ್ಲೋಸ್" ! 

 

ಇಂದು, ಬುಧವಾರ, ೭ ನೇ ಜುಲೈ, ೨೦೧೦ ರಂದು ದ. ಆಫ್ರಿಕದ ಡರ್ಬನ್ (ಎಪಿ/ಡಿಪಿಎ), ನ 'ಮೋಸಸ್ ಮಬಿಡಾ,' ಕ್ರೀಡಾಂಗಣದಲ್ಲಿ ನಡೆಯುವ  ನಾಲ್ಕರ ಘಟ್ಟದ ಬಹುಮುಖ್ಯವಾದ ಪಂದ್ಯದಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್ "ಜರ್ಮನಿ ತಂಡವೇ" ಅಥವಾ "ಯೂರೋಪಿಯನ್ ಚಾಂಪಿಯನ್ ಎನ್ನಿಸಿಕೊಂಡಿರುವ ಸ್ಪೇನೇ" ? ...ಸ್ಪೇನ್‌ನ ಡೇವಿಡ್ ವಿಲ್ಲಾ, ವಿಶ್ವಕಪ್‌ನ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲೊಬ್ಬ,  ಮಿರೋಸ್ಲಾವ್ ಕ್ಲೋಸ್, 'ಹಾಲಿ ಜರ್ಮನಿಯ ಹೀರೊ ' ಯುವ ಫುಟ್ಬಾಲ್ ರಸಿಕರಿಗೆಲ್ಲಾ ಕಣ್ಮಣಿ !

 

ಇಂದು ಬುಧವಾರ, ೭ ನೇ, ಜುಲೈ, ೨೦೧೦ ರಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪರಸ್ಪರ ಎದುರಾಳಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿರುವ ಸ್ಟ್ರೈಕರ್ ಡೇವಿಡ್ ವಿಲ್ಲಾ ಮೇಲೆ ಸ್ಪೇನ್ ನ.ಎಲ್ಲಾ ಆಶೋತ್ತರಗಳು, ಹಾಗೂ ಸ್ಪೇನ್ "ಫುಟ್ಬಾಲ್ ತಂಡದ ಆಟದ ಭವಿಷ್ಯ" ಅಡಗಿದೆ  ! 


ಉಭಯ ತಂಡಗಳ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು, ಫುಟ್‌ಬಾಲ್ ಅಭಿಮಾನಿಗಳಿಗೆ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅರ್ಜೆಂಟೀನಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ಆಡಿದ ರೀತಿಯಂತೂ ಅದ್ಭುತ, ಅವರ ವೇಗದ ಆಟದೆದುರು ಮರಡೋನಾ ಹುಡುಗರಂತೂ ತತ್ತರಿಸಿ ಹೋಗಿದ್ದರು. ಇದೀಗ ಸ್ಪೇನ್ ವಿರುದ್ಧವೂ ಜರ್ಮನಿ ಗೆಲುವಿನ "ಬ್ಲೂ ಪ್ರಿಂಟ್ "ತಯಾರುಮಾಡುತ್ತಿದೆ.

 
ಸ್ಪೇನ್ ತಂಡದವರು  ಎಂಟರ ಘಟ್ಟದಲ್ಲಿ ಪೆರುಗ್ವೆ ವಿರುದ್ಧ ಗೆಲ್ಲುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆ ತಂಡದವರು ಗೋಲು ಗಳಿಸುವ ಕೆಲವೊಂದು ಉತ್ತಮ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಪ್ರಮುಖ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲುವುದು ತಂಡ ದೊಡ್ಡ ಪ್ರಮಾಣದ ದಂಡ ತೆರುವಂತೆ ಮಾಡಿದ ಉದಾಹರಣೆಗಳಿವೆ.

 

ಕೊನೆಯ ಪಕ್ಷ ಸೆಮಿಫೈನಲ್‌ನಲ್ಲಾದರೂ ಸ್ಪೇನ್ ತಂಡ ಆ ಎಲ್ಲಾ ನ್ಯೂನತೆಗಳನ್ನು ಮೆಟ್ಟಿ ನಿಂತು ಆಡಬೇಕು. ಇಲ್ಲವಾದಲ್ಲಿ ಇಷ್ಟು ದೂರದ ಹೋರಾಟಕ್ಕೆ ಅರ್ಥವಿಲ್ಲದಂತಾಗುತ್ತದೆ. ಜರ್ಮನ್ ಮುನ್ನಡೆ ಆಟಗಾರರಿಗೆ  ಸ್ವಲ್ಪ ಅವಕಾಶ ಸಿಕ್ಕರೂ ಸಾಕು ಅದನ್ನು ಗೋಲ್ ಆಗಿ ಪರಿವರ್ತಿಸುವ ಮಹಾನ್ ಶಕ್ತಿಯನ್ನು ಅವರು ಕರಗತಮಾಡಿಕೊಂಡಿದ್ದಾರೆ. 

ಈ ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿರುವ ಸ್ಟ್ರೈಕರ್ ಡೇವಿಡ್  ವಿಲ್ಲಾ ಮೇಲೆ ಸ್ಪೇನ್ ನ.ಎಲ್ಲಾ ಆಶೋತ್ತರಗಳು, ಹಾಗೂ ಸ್ಪೇನ್ "ಫುಟ್ಬಾಲ್ ತಂಡದ ಆಟದ ಭವಿಷ್ಯ" ಅಡಗಿದೆ  ! .
ಉಭಯ ತಂಡಗಳ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು, ಫುಟ್‌ಬಾಲ್ ಅಭಿಮಾನಿಗಳಿಗೆ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅರ್ಜೆಂಟೀನಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ಆಡಿದ ರೀತಿಯಂತೂ ಅದ್ಭುತ, ಅವರ ವೇಗದ ಆಟದೆದುರು ಮರಡೋನಾ ಹುಡುಗರಂತೂ ತತ್ತರಿಸಿ ಹೋಗಿದ್ದರು. ಇದೀಗ ಸ್ಪೇನ್ ವಿರುದ್ಧವೂ ಜರ್ಮನಿ ಗೆಲುವಿನ 
"ಬ್ಲೂ ಪ್ರಿಂಟ್ "ತಯಾರುಮಾಡುತ್ತಿದೆ. 
ಸ್ಪೇನ್ ತಂಡದವರು  ಎಂಟರ ಘಟ್ಟದಲ್ಲಿ ಪೆರುಗ್ವೆ ವಿರುದ್ಧ ಗೆಲ್ಲುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆ ತಂಡದವರು ಗೋಲು ಗಳಿಸುವ ಕೆಲವೊಂದು ಉತ್ತಮ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಪ್ರಮುಖ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲುವುದು ತಂಡ ದೊಡ್ಡ ಪ್ರಮಾಣದ ದಂಡ ತೆರುವಂತೆ ಮಾಡಿದ ಉದಾಹರಣೆಗಳಿವೆ. ಕೊನೆಯ ಪಕ್ಷ ಸೆಮಿಫೈನಲ್‌ನಲ್ಲಾದರೂ ಸ್ಪೇನ್ ತಂಡ ಆ ಎಲ್ಲಾ ನ್ಯೂನತೆಗಳನ್ನು ಮೆಟ್ಟಿ ನಿಂತು ಆಡಬೇಕು. ಇಲ್ಲವಾದಲ್ಲಿ ಇಷ್ಟು ದೂರದ ಹೋರಾಟಕ್ಕೆ ಅರ್ಥವಿಲ್ಲದಂತಾಗುತ್ತದೆ. ಜರ್ಮನ್ ಮುನ್ನಡೆ ಆಟಗಾರರಿಗೆ  ಸ್ವಲ್ಪ  ಅವಕಾಶ ಸಿಕ್ಕರೂ ಸಾಕು ಅದನ್ನು ಗೋಲ್ ಆಗಿ ಪರಿವರ್ತಿಸುವ ಮಹಾನ್ ಶಕ್ತಿಯನ್ನು ಅವರು ಕರಗತಮಾಡಿಕೊಂಡಿದ್ದಾರೆ.