ನನ್ನ ಗೆಳೆಯನಿಗೆ...

ಎಲ್ಲರ ದನಿ
ಮೌನವಾದ ಮೇಲೆ
ನನ್ನ ದನಿಯ ಕೇಳು
ಅದು ಅದೇ ಕಡೆಯದಾಗಲಿ
ನಿನ್ನ ಹೃದಯ ರಾಗ
ಕೇಳಲು ನೀ ಆಶಕ್ತನಿದ್ದಲ್ಲಿ
ಅದ ನಾ ನಿನಗೋಸ್ಕರ
ಮತ್ತೆ ಹಾಡುವೆ
ನಿನ್ನ ಅಧೂರ ಕನಸುಗಳು
ಹಾದಿಯ ಅರ್ದದಲ್ಲೇ ಅನಾಥವಾಗಿದ್ದರೆ
ಅವುಗಳನ್ನು ಹೆಗಲಿಗೇರಿಸಿ
ನಾ ಸಾಗಿಸುವೆ ಆ ಕನಸುಗಳ ಇನ್ನಷ್ಟು ಮು೦ದೆ
ನೀನು ಹೇಳಲಾಗದ ನಿನ್ನಲ್ಲೇ
ಕರಗಿಹೋದ ಶಬ್ದಕೆ
ನಾನು ಮಾತಾಗುವೆ
ನಿನ್ನ ವ್ಯಥೆ ವಿಷಾದ
ನನ್ನ ರಕ್ತ ನಾಡಿಗಳಲ್ಲಿ
ಹರಿಯಲಿ, ಹರಿದು
ತಿಳಿಯಾಗಲಿ
ನೀನು ಒರಗಬೇಕೆ೦ದಾಗ
ನಾ ನಿನ್ನ ಹೆಗಲಾಗುವೆ
ನಿನ್ನ ಕಣ್ಣ೦ಚಿನಲಿ ಹನಿ
ಜಿನುಗಿದಾಗ
ಅದು ಮಿನುಗದ೦ತೆ
ಮನದು೦ಬಿ ಬರುವುವು
ನನ್ನ ಬೆರಳುಗಳು
ಇನ್ನೂ ಏನೇನೋ.... ಗೆಳೆಯ
ಎಲ್ಲವನೂ ಹೇಳಲಾರೆ
ಕಾಲ ಪಕ್ವವಾದಾಗ
ಈ ಸಾ೦ಗತ್ಯದ
ಪರಿಪೂರ್ಣತೆ ಧನ್ಯತೆ
ಅಲ್ಲಿ ಮೆರೆಯುತ್ತದೆ.....

***** ****