ಜರ್ಮನಿ'ಯ ’ಮಿರೋಸ್ಲೆವ್ ಕ್ಲೋಸ್’

 

ವಿಶ್ವಕಪ್ ೨ ನೇ ಸೆಮಿಫೈನಲ್ ನಲ್ಲಿ ಸ್ಪೇನ್ ವಿರುದ್ಧ ಸೋತ್ಮೇಲೆ, ಜರ್ನನಿಯೊರು ಬೆನ್ಮುಟ್ಕೊತಿದ್ಡಾರೆ. ತಲೆ ಚಚ್ಗೊತಿದಾರೆ. ಮತ್ತೆ, ’ಆಕ್ಟೋಪಸ್’ ಮೇಲೂ ಸಿಟ್ಟು ! ಅದ್ಯ್ಹಾಗೆ ಸೋತ್ವಿ ನಾವು ತಿಳಿತಿಲ್ವೆ ಅಂತಾರೆ. ಆ ಕೆಟ್ಟಮುಂಡೇದು ದೇಶದ್ರೋಹಿ ’ಆಕ್ಟೊಪಸ್,’  ಅದೇನ್ಮಾಡ್ಬೇಕೊ ತಿಳೀತಿಲ್ಲ. ಹಾಗಾ ಹೇಳೋದು ನಮ್ಮದೇಶ್ದಲ್ಲೇ ಇದ್ದು ಇಂಥಾ ಮೋಸ. ಇದ್ಸರಿ ಅಣ್ಣ ’ಅರ್ಜಂಟೀನ’ ಸೋಲತ್ತೆ ಅಂತ ಹೇಳ್ಲಿಲ್ವ ಅವರೆಲ್ಲಾ ಹೇಳೋದೇನ್ ಗೊತ್ತಾ ’ಆಕ್ಟೊಪಸ್’ ನ ’ಗಾರ್ಲಿಕ್ ಬಟರ್’ ಜೊತೆ ಸೇರ್ಸಿ ಹುರಿಬೇಕು. ’ಹೋಗ್ಲಿ ಬಿಡು ’ಥಾಮಸ್ ಮುಲ್ಲರ್’ ಆಡಿದ್ರೆ ಹೀಗಿರ್ತಿರ್ಲಿಲ್ಲ,’ ಅಂತ ಜರ್ಮನ್ ಕೋಚ್, ಜೋಚಿಮ್ ಲೊ ಹೇಳಿದರು. ಕೋಚೇ ಹೇಳಿದೃ.ಈಗ ’ಸ್ಪೇನ್’ ’ನೆದರ್ ಲ್ಯಾಂಡ್’ ವಿರುದ್ಧ ’ಫೈನಲ್’ ನಲ್ಲಿ ಆಡ್ತಿದೆ. ಏನಾಗತ್ತೊ ನೋಡ್ಬೇಕು. 

 

ಸ್ವಲ್ಪ ೨ ನೇ ಸೆಮಿಫೈನಲ್ ನಲ್ಲಿ ಯಾಕೆ ಇಂಥಾ ಪರಿಪಾಟಲಾಯ್ತು ಜರ್ಮನಿಗೆ ನೋಡೋಣ !’ಮಭೀಡಾ ಮೋಸೆಸ್ ಕ್ರೀಡಾಂಗಣ’ದಲ್ಲಿ ಜರುಗಿದ ೨ ನೇ ಸೆಮಿಫೈನಲ್ ನಲ್ಲಿ ಸ್ಪೇನ್ ನ ’ಸೆಂಟ್ರಲ್ ಡಿಫೆಂಡರ್’, ’ಕಾರ್ಲೆಸ್ ಪುಯೊಲ್’ ೭೩ ನೆ ನಿ. ದಲ್ಲಿ 'ಒಂದು ಭರ್ಜರಿ ಹೆಡ್ಡ'ರ್ ಮಾಡಿ, ’ಸ್ಪೇನ್ ತಂಡ’ನ ಗೆಲ್ಸಿದೃ. ’ಸ್ಪೇನ್’ ಗೆಲ್ಲೋದ್ ನಿಜ ಅನ್ನೊ,  ’ಆಕ್ಟೋಪಸ್ ಪೌಲ್’ ನುಡಿ ನಿಜವಾಯ್ತು. ಸ್ಪೇನ್ ೧೯೫೦ ನ ವಿಶ್ವಕಪ್ ನಲ್ಲಿ ೪ ನೇ ಸ್ಥಾನದಲ್ಲಿತ್ತು. ಆಗ ಫೈನಲ್ ರೌಂಡ್ ಲೀಗ್ ತರಹ ಚಾಂಪಿಯನ್ ತಂಡನ  ನಿರ್ಧರಸ್ತಿದೃ. ಜುಲೈ ೧೧ ರಂದು ’ಜೊಹಾನ್ಸ್ ಬರ್ಗ್’ ನಲ್ಲಿ. ಇದುವರೆಗೆ ನಡೆದ ’ವಿಶ್ವಕಪ್ ಚಾಂಪಿಯನ್ ಶಿಪ್’ ನಲ್ಲಿ ಸ್ಪೇನೂ ಗೆದ್ದಿಲ್ಲ. ನೆದರ್ ಲ್ಯಾಂಡೂ ಗೆದ್ದಿಲ್ಲದೆ ಎರಡೂ ಟೀಮ್ ಗಳು ’ಅಂಡರ್ ಡಾಗ್’ ಎನ್ನಿಸಿಕೊಂಡಿದ್ದವು.



'ಸ್ಪೇನ್',  ೧೯೬೪ ಮತ್ತು ೨೦೦೮ ರಲ್ಲಿ ’ಯೂರೊಪಿಯನ್ ಚಾಂಪಿಯನ್ ಪ್ರಶಸ್ತಿ’ ತನ್ನ ಮಡಿಲಿಗೆ ಹಾಕಿಕೊಂಡಿದೆ. ೧೯೭೪ ಹಾಗೂ ೧೯೭೮ ರ ವಿಶ್ವ ಕಪ್ ನಲ್ಲಿ ಫೈನಲ್ ವರೆಗೂ ಹೋಗಿ ಪರಾಜಯಗೊಂಡಿತ್ತು. ’ಡಚ್ ತಂಡ’ ೧೯೮೮ ರಲ್ಲಿ ’ಯೂರೊಪಿಯನ್ ಚಾಂಪಿಯನ್ ಶಿಪ್ ಟ್ರೋಫಿ’ ಪಡೆದಿತ್ತು. ೧೯೩೪ ರ ಬಳಿಕ ಆಡಿದ ೧೩ ವಿಶ್ವಕಪ್ ನಲ್ಲಿ ಮೊದಲಬಾರಿಗೆ ಸೆಮಿಫೈನಲ್ ನಲ್ಲಿ ಆಡಿದ ಸ್ಪೇನ್ ಪಂದ್ಯದ ಹೆಚ್ಚಿನ ಸಮಯದಲ್ಲಿ ಪ್ರಭುತ್ವ ಸಾಧಿಸಿ, ಖ್ಯಾತ ಬಾರ್ಸಿಲೋನ ತಂಡದ ೮ ಖಿಲಾಡಿಗಳು  ಆರಂಭಿಕ ಸರದಿಯಲ್ಲಿದ್ದರು. ಯೂರೊ-೨೦೦೮ ಫೈನಲ್ ನಲ್ಲಿ ಒಂದೇ ಒಂದು ಗೋಲ್ ಬಾರಿಸಿ ಪ್ರತಿ ತಂಡದಲ್ಲಿಆರಂಭಿಕ ಸರದಿಯಲ್ಲಿದ್ದ ೬ ಆಟಗಾರರು  ೨ ವರ್ಷಗಳ ಹಿಂದೆ ’ವಿಯೆನ್ನಾ’ದಲ್ಲಿ ಮೊದಲ ೧೨ ರ ಬಳಗದಲ್ಲಿದ್ದರು.


೩ ಬಾರಿ ಚಾಂಪಿಯನ್ ಆಗಿದ್ದ, 'ಜರ್ಮನಿ'ಯು ಜುಲೈ ೧೦ ರಂದು ಪೋರ್ಟ್ ಎಲಿಝಬೆತ್ ನ ’ನೆಲ್ಸನ್ ಮಂಡೇಲಾ ಸ್ಟೇಡಿಯಮ್’ ನಲ್ಲಿ ೩ ನೇ ಸ್ಥಾನಗ್ರಹಣ ಮಾಡಲು ಉರುಗ್ವೆ ತಂಡದೊಡನೆ ಕಾದಲಿದೆ. ಜರ್ಮನಿಯ ಇದುವರೆಗಿನ ಆಟದ ವೈಖರಿ, ಎಲ್ಲರ ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿತ್ತು. ವೇಗ ಸಾರ್ವಕಾಲಿಕ ಶ್ರೇಷ್ಟ ಚಲನೆ, ಎದುರಾಳಿಗಳನ್ನು ಗೋಳುಹೊಯ್ಯಿಕೊಳ್ಳುವ ಶೈಲಿ,  ಗೋಲು ಹತ್ತಿರಬರುತ್ತಿದ್ದಂತೆಯೇ ಕ್ಲಿನಿಕಲ್ ಶೈಲಿಯಲ್ಲಿ ದಿಢೀರನೆ ಬಾಲನ್ನು ನೆಟ್ ನೊಳಗೆ ನುಗ್ಗಿಸುವ ನೈಪುಣ್ಯತೆ ಗಳಿಂದ  ಜರ್ಮನಿ, ಅತಿ ಪರಿಣಾಮಕಾರಿ ತಂಡವೆಂದು ಹೆಸರುಮಾಡಿತ್ತು. ಇಂಗ್ಲೆಂಡ್  ಹಾಗೂ  ಅರ್ಜೆಂಟೀನಾದ ಮೇಲೆ ವಿಜಯಗೊಂಡರೂ, ಸೆಮಿಫೈನಲ್ ನಲ್ಲಿ ಸಪ್ಪೆಯಾಟವಾಡಿ ಹಿಂದೆ ಸರಿಯಿತು.



ಈ ವಿಶ್ವಕಪ್ ನಲ್ಲಿ ಗ್ರೂಪ್ ಹಂತದಲ್ಲಿ ’ಸರ್ಬಿಯಾ’ದ ಎದುರು ೦-೧ ರಿಂದ ಸೋತಿದ್ದ ಜರ್ಮನಿ ಕೂಟ ೨ ನೇ ಸೋಲು ಕಂಡಿತು. ೧೫ ನಿಮಿಷಗಳಲ್ಲಿ ಸ್ಪೇನ್ ತಂದ ೨ ಅವಕಾಶಗಳನ್ನು ಪಡೆದಿತ್ತು. ’ಡೇವಿಡ್ ವಿಲ್ಲ’ ೬ ನೇ ನಿಮಿಷದಲ್ಲಿ ಅವಕಾಶವನ್ನು ಸೃಷ್ಟಿಸಿದರು. ೮ ನೇ ನಿ. ದಲ್ಲಿ ಮತ್ತೊಂದು ಹೊಸ ಅವಕಾಶಜೊತೆಯಾಯಿತು. ಆದರೆ ಜರ್ಮನ್ ಗೋಲಿ ತಡೆದರು. ಜರ್ಮನಿ ೩೨ ನೇ ನಿಮಿಷದಲ್ಲಿ ಮೊದಲ ಅವಕಾಶ ಪಡೆದಿತ್ತು. ’ಥಾಮಸ್ ಮಿಲ್ಲರ್ ’ ಸಸ್ಪೆಂಡ್ ಆದ ಹಿನ್ನೆಲೆಯಲ್ಲಿ ತಂಡಕ್ಕೆ ಬಂದು ಸೇರಿದ, ’ಟ್ರೊಚೌಕ್ಸಿ’ ಆರಂಭಿಕ ಸರದಿಯಲ್ಲಿದ್ದರು.

 

ಸ್ಪೇನ್ ನಾಯಕ ಹಾಗೂ ಗೋಲಿ, ’ಐಕೆರ್ ಕ್ಯಾಸಿಲ್ಲಾಸ್’ ಮೇಲೆ ಹಾರಿ ಗೋಲನ್ನು ತಡೆದರು. ಮೊದಲ ಹಾಫ್ ನಲ್ಲಿ,  ತೀವ್ರತೆ ತೋರಿಸಿದ ’ಸ್ಪೇನ್ ’ ಎರಡನೆ ಹಾಫ್ ನಲ್ಲೂ  ಪ್ರಭುತ್ವವನ್ನು ಮುಂದುವರೆಸಿದರು. ೬೯ ನೆಯ ನಿಮಿಷದಲ್ಲಿ ಜರ್ಮನಿಗೆ ಒಂದು ಚಾನ್ಸ್ ಸಿಕ್ಕಿತ್ತು. ಉಪಯೋಗವಾಗಲಿಲ್ಲ. ಆದರೆ,’ಸೆಂಟ್ರೆಲ್ ಡಿಫೆಂಡರ್’ ’ಕಾರ್ಲೆಸ್ ಪಿಯೊಲ್’ ೭೩ ನೇ ನಿಮಿಷದಲ್ಲಿ ಚೆಂಡನ್ನು ’ಹೆಡ್ ಕಿಕ್’ ಮಾಡಿದಾಗ  ಚೆಂಡು ಗೋಲಿನಲ್ಲಿ ತೂರಿತು. ಸ್ಪೇನ್ ಪ್ರೇಕ್ಷಕರ  ಕರರಾಡನ ಸ್ಟೇಡಿಯಮ್ ನಲ್ಲೆಲ್ಲಾ ಪ್ರತಿಧ್ವನಿಸಿತು. ಚೇತರಿಸಿಕೊಂದು ಮತ್ತೆ ಮುನ್ನುಗ್ಗುವ ಸ್ವಭಾವದ ಜರ್ಮನ್ ತಂಡ ಚೇತರಿಕೊಳ್ಳಲೇ ಇಲ್ಲ.



ಈಗ,  "ಗೋಲ್ಡನ್ ಬೂಟ್,"  ಪಡೆಯುವ ಚಾನ್ಸ್ ’ಮಿರೋಸ್ಲೆವ್ ಕ್ಲೋಸ್’ ಗೆ(೧೪ ಗೋಲ್ ಅವರು ಹೊಡೆದಿದ್ದಾರೆ) ಬ್ರೆಝಿಲ್ ನ ’ರೊನಾಲ್ಡೊ’ ರ ಅತಿ ಹೆಚ್ಚು ಗೋಲ್ (೧೫) ದಾಖಲೆಯನ್ನು ಮುರಿಯುವ ಅವಕಾಶ  ಇನ್ನೂ ಮುಗಿದಿಲ್ಲ. ಇವು ಜುಲೈ, ೧೦ ರಂದು ೩ ನೆಯ ಸ್ಥಾನಕ್ಕೆ ನಡೆಯುವ ’ಉರುಗ್ವೆ’ ವಿರುದ್ಧದ ಮ್ಯಾಚ್ ನಲ್ಲಿ ಸಾಕಾರವಾಗಬಹುದು !