"ನಮಸ್ಕಾರ ಸಾರ್ ವೆಲ್ಮ್ ಕಮ್ಮು...೨....."
 ಬಾಯಿ ಸಾದ್ಯವಿದ್ದಷ್ಟೂ ದೊಡ್ಡದಾಯಿತು,ಹಲ್ಲು ಕಿರಿಯುತ್ತ, ಆದರೆ ಅಷ್ಟೇ ವೇಗದಲ್ಲಿ  ತೆರೆದ ಬಾಯಿ  ಮುಚ್ಚಿಕೊಂಡವು ತ್ಯಾಂಪನವು.
ಕಾರಣ.."ರೀ ಮುಚ್ರೀ ಬಾಯಿ ಸಾಕಿನ್ನು, ನೊಣ ಗಿಣ ಎಲ್ಲವೂ ನಿಮ್ಮ್ ಬಾಯಿ ಒಳಕ್ಕೆ ಹೋದಾವು"  ಮೆಲ್ಲಗೆ ಅವನಿಗೆ ಮಾತ್ರ ಕೇಳುವಂತೆ ಹೇಳಿದ ತ್ಯಾಂಪಿಯ ಪಿಸುಮಾತಿಗೆ..
 "ಅಲ್ಲ ಏನಂದಿರಿ " ಕೇಳಿದರು ಕಲ್ಲೂರಾಮ್ ಇವರ ಮಾತು ಕಥೆ ಗಮನಿಸಿ.
ಹಾಗೆ ಬಿಡಲು ಅವಳೇನು ಲಚುಮಿಯೇ.. "ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂಗಾಯ್ತು ನೋಡಿ" ಎಂದಳು ಜೋರಾಗಿ ಕಲ್ಲೂರಾಮ್ ಗೆ ಮತ್ತು ಆತನ ಸಂಸಾರಕ್ಕೆ ಕೇಳುವಂತೆ.
ಕಲ್ಲೂರಾಮ್ ಮತ್ತು ಆತನ ಧರ್ಮ ಪತ್ನಿ ಜತೆ ಅವರ ಎರಡು ಮರಿ ಮರ್ಕಟಗಳೂ ಒಳ ನುಸುಳಿದವು.
ಜತೆಗೇ ಅವರ ಟಿಗ್ರಿಸ್ ( ಸಾಕು ನಾಯಿ... ನಾಯಿ ಅಂತ  ಗಟ್ಟಿ ಹೇಳಲಾಗದು..),
ಅವರ ಮರಿ ಮರ್ಕಟಗಳು ಅವರದ್ದೇನೂ ಅಲ್ಲ, ಕಲ್ಲೂರಾಮ್ ನ ಧರ್ಮ ಪತ್ನಿಯ ಅಣ್ಣನ ಮಕ್ಕಳವು,
ಅವುಗಳೂ ಸಹಾ ಒಂದು ಮುಷಾರಫ್ ಆದರೆ ಇನ್ನೊಂದು ಒಸಾಮಾ.
ಹಲಕೆಲವೊಮ್ಮೆ ಮನೆಯಲ್ಲಿ ಇಡೀ ಪ್ರಪಂಚದ ಎಲ್ಲಾ ಬಾಂಬುಗಳೂ ಒಟ್ಟಿಗೇ ಬಿದ್ದರೂ ಆಗದಿದ್ದಷ್ಟೂ ತಲೆಬಿಸಿ ಕಲ್ಲೂರಾಮನಿಗಾದರೂ ಮಾತನಾಡುವ ಹಾಂಗಿಲ್ಲ,
ಕಾರಣ ಸ್ಪಟಿಕದಷ್ಟು ಸ್ಪಷ್ಟ.
ಮನೆಗೆ ಬೇಕಾದಷ್ಟು ಸಾಮಾನು ಸರಂಜಾಮುಗಳೂ,
ಮುಂದಿನ ತಲೆಮಾರಿಗೆ ಸಾಕಾಗುವಷ್ಟು ಚಿನ್ನಾಭರಣಗಳೂ ಧರ್ಮ ಪತ್ನಿಯ ಜತೆ ಬಂದಿದ್ದವು ನೋಡಿ.
ಅವಳು ಕಲ್ಲೂರಾಮ ಮನೆಗೆ ಬಂದದ್ದೇ ತಡ ಯೋಚಿಸಿ ಯೋಚಿಸಿ ತಲೆ ಕೆರೆದು ಕೊಳ್ಳುತ್ತಿದ್ದ ಕಾರಣ ತಲೆಯ ಮೇಲೆ ಒಂದು ಕೂದಲೂ ಉಳಿಯಲಿಲ್ಲ.
ತನ್ನ ಪ್ರೀತಿಯ ಏಕಮಾತ್ರ ತಂಗಿಯ ಮನೆಯಲ್ಲೇ ಬೀಡುಬಿಟ್ಟಿದ್ದ ಎರಡು ಮರ್ಕಟಗಳನ್ನು ಅವಳ ಮನೆಯಲ್ಲೇ ಬಿಟ್ಟು ಬಿಟ್ಟಿದ್ದ.
ಅಷ್ಟೂ ದಿನವಾದರೂ ತಾನು ಸುಖವಾಗಿರಬಹುದಲ್ಲ ಅಂತ ಅವನ ಆಸೆ.
ಎಲ್ಲರೂ ಒಳನುಸುಳಿದ ಮೇಲೆ ತಾನೂ ಹಿಂದಿನಿಂದ ಬಂದ ತ್ಯಾಂಪ.
ಸುಮಾರು ದಿನಗಳಿಂದ ತ್ಯಾಂಪನ ಬಾಸ್ ಕಲ್ಲೂರಾಮ್ ತ್ಯಾಂಪನ ಸಂಸಾರ ಸಮೇತ ರಾತ್ರಿಯೂಟಕ್ಕೆ ಕರೆಯುತ್ತಿದ್ದರು, ತ್ಯಾಂಪನ ಮನೆಯಲ್ಲಿ.
ಪ್ರಮೋಷನ್ ಪ್ರವರ ನೋಡಿ.
"ತುಂಬಾ ದಿನಗಳಿಂದ ಕರೆಯುತ್ತಿದ್ದರು ನೋಡಿ ಮನೆಗೆ ಇವತ್ತು ನಮಗೆ ಸಮಯ ಸಿಕ್ಕಿತು, ಪಾಪ ಇಂದೂ ಬರದಿದ್ದರೆ ಥಾಂಫ್ ಅವರಿಗೆ ಬೇಸರ ಆದರೆ ಕಷ್ಟ ಅಂತ ಬಂದೆವು" ಧರ್ಮಪತ್ನಿ.
ಅವರ ಹಿಂದಿ ಭಾಷೆಯಲ್ಲಿ ಅವನ ಹೆಸರೇ ಅಪಭ್ರಂಶವಾಗುತ್ತಿತ್ತು.
ತ್ಯಾಂಪನ ಮಡದಿ ಹಲ್ಲು ಕಡಿಯುತ್ತ ಹಿಂದಿರುಗಿ ತ್ಯಾಂಪನನ್ನು ನೋಡಿದಳು, ಆ ನೋಟದಲ್ಲಿ ಇವರು ತೆರಳಲಿ, ನೋಡಿಕೊಳ್ತೇನೆ ಎನ್ನುವಂತಿತ್ತು.
"ಹೌದು ಹೌದು ನಾನೇ ಅವರನ್ನು ಒತ್ತಾಯಿಸುತ್ತಿದ್ದೆ." ಎಂದಳು ಇದಿರಲ್ಲಿ.
"ನೀವು ಈಗ ಕಾಫಿ ಕುಡಿಯುತ್ತೀರಾ ಅಥವಾ ರಾತ್ರೆಯ ಊಟ ಬಡಿಸಲೇ" ಎಂದಳು.
ಈಗ ಸ್ವಲ್ಪ ಕಾಫಿ ಮಾಡಿ ನಿಮ್ಮ ಕಡೆಯ ಫಿಲ್ಟರ್ ಕಾಫಿ ಕುಡಿಯದೇ ಜಮಾನವಾಯ್ತು..ನೋಡಿ, ರಾತ್ರೆಯೂಟಕ್ಕೇನು ಅವಸರ..." ಎಂದರು ಕಲ್ಲೂರಾಮ್ ಅವರ ಪತ್ನಿಯ ಕಡೆ ದೃಷ್ಟಿ ಬೀರಿ.
ಅಷ್ಟರಲ್ಲಿ.....ಒಳಗಿಂದ ಎನೋ ಒಡೆದ ಶಬ್ದ.
ಮತ್ತೆ ಅಳುವ  ಶಬ್ದ ಕೂಡಾ.
ಎಲ್ಲರೂ ಓಡಿದರು ಶಬ್ದ ಬಂದ ಕಡೆ..
"ಅಯ್ಯಯ್ಯೋ .".ಎಂದ ತ್ಯಾಂಪ ಆ ಕಡೆ ನೋಡಿ... ಒಸಾಮಾ ಕಲ್ಲೂರಾಮ ಪತ್ನಿಯ ಜಂಬದ ಚೀಲದಿಂದ ಲಿಪ್ಸ್ಟಿಕ್ ತೆಗೆದು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿತ್ತು,
ಮುಷಾರಫ್ ಒಂದು ದೊಡ್ಡ ಹೂದಾನಿಯನ್ನು ಒಡೆದು ಹಾಕಿತ್ತು, ಆ ಒಡೆದ ಚೂರು ನೋಡದೇ ಅದರ ಮೇಲೆ ಕಾಲಿಟ್ಟು ಬಿದ್ದು ಅಳುತ್ತಿತ್ತು. ಅದು ತ್ಯಾಂಪಿಯ  ಪ್ರೀತಿ ಪಾತ್ರ ಹೂದಾನಿ, ತ್ಯಾಂಪನ ಹೃದಯ ಬಾಯಿಯ ಹತ್ತಿರಕ್ಕೆ.
ಅದನ್ನು ನೋಡಿ ಕಲ್ಲೂರಾಮ್ "ನೋ ನೊ ಹಾಗೆ ಮಾಡಬಾರದು..."
ತ್ಯಾಂಪ ಖುಶಿಯಾದ.
ಆಗ ಕಲ್ಲೂರಾಮಿ "  ಯಾಕೆ ? ಅವರೆಲ್ಲಾ ನಿನ್ನ ಬಗ್ಗೆ ಏನು ಅಂದ್ಕೊಳ್ಳೋದಿಲ್ಲ,  ಎಲ್ಲಾ ಉಲ್ಟಾ ಬರೆದಿದ್ದೆಯಲ್ಲ..  ಬದ್ಮಾಶ್!!!
",  ಎಷ್ಟು ತಪ್ಪು ಬರೆದಿದ್ದೀಯಾ ನೋಡು ಬಿ, ಜೆ, ಎನ್ ,ಎಸ್ ಉಲ್ಟಾ ಬರೆದಿದ್ದೀಯಾ, ನಿಂಗೆ ಎಷ್ಟು ಸಾರಿ ಹೇಳಿದರೂ ಗೊತ್ತಾಗಲ್ಲ ಅಲ್ಲ್ವಾ ......"ನೋಡಿ ಮಿಸೆಸ್ ತಾಂಫ್,   ಇಲ್ಲಿ  .ಇವನು ಯಾವಾಗಲೂ ಹಾಗೇ ಕ್ಲಾಸಲ್ಲಿ ಯಾವಾಗಲೂ ಫಸ್ಟ್ ,  ಸ್ವಲ್ಪ ಶರಾರತ್ ಅಷ್ಟೇ..    ಎಲ್ಲಿ ಇನ್ನೊಂದ್ಸಲ ಎಲ್ಲಾ ಸರಿಯಾಗಿ ಬರೆದು ತೋರಿಸು... ಈ ಗೋಡೆ ಬೇಡ ಪಕ್ಕದ ಹಾಲ್ ನ ಗೋಡೆಯಲ್ಲಿ ಬರೆ ಆಯ್ತಾ..?
ಈ ಕಡೆ ತಿರುಗಿ  ಇನ್ನೊಂದನ್ನ ನೋಡಿ ಯಾಕೆ ....ನಿನಗೆ ಕೆಳಗೆ ಬಿದ್ದ ವಸ್ತು ಗಳನ್ನು ನೋಡಿಕೊಂಡು ಹೋಗೋಕಾಗಲ್ವಾ, ಆಂಟಿ ಮನೆಯಲ್ಲಿ ಕೆಲಸದವರು ಇಲ್ಲ ಗೊತ್ತಾ ಪಾಪ ಅವರೇ ಇದೆಲ್ಲ  ಎತ್ತಬೇಕು,
ಈ ಕೆಲಸ ಹೊರಗೆ ಹೋಗಿ ಕೂಡಾ ಈ ಕೆಲಸ   ಮಾಡಬಹುದಲ್ಲ?  ಹಾಗಂತ ನಮ್ಮ ಮನೆಯಲ್ಲಿ ಹೀಗೆಲ್ಲಾ ಮಾಡಲ್ಲ ಅಯ್ತಾ ನೋ ನೆವರ್."
ಅಲ್ಲಿಂದ ಎಲ್ಲರೂ ಅನಿವಾರ್ಯವಾಗಿ  ಊಟದ ಮೇಜಿನ  ಹತ್ತಿರ ಬಂದರು.
ತ್ಯಾಂಪನ  ಪತ್ನಿ ಕಾಫಿ ಎಲ್ಲರಿಗೂ ಕೊಟ್ಟಳು.
"ಯಾಕೆ ಮಿಸೆಸ್ ಥಾಂಫ್.. "   "ಅಲ್ಲಲ್ಲ ತ್ಯಾಂಪ್"     ತಿದ್ದಿದರು ಕಲ್ಲೂರಾಮ್
"ಎನೂ ವ್ಯತ್ಯಾಸ ಇಲ್ಲ ಬಿಡಿ,....... ನಾನೂ ಅದನ್ನೇ ಹೇಳಿದ್ದಲ್ಲವಾ?
ಅಲ್ಲ ನಿಮ್ಮ  ಮನೆಯಲ್ಲಿ ಫಿಲ್ಟರ್ ಮಿಶೆನ್ ಇಲ್ಲವಾ?ನನ್ನ ಅಣ್ಣನ ಮನೆಯಲ್ಲಿದೆ,  ಜಾಪಾನ್ ಮೇಕ್ ಎಷ್ಟು ಒಳ್ಳೇಯ ಕಾಫಿ ಅಂತೀರಾ...
ಅದನ್ನ  ಕುಡಿದ ಮೇಲೆ ನಂಗಂತೂ ಯಾರ ಮನೆಯ ಕಾಫಿಯೂ ಹಿಡಿಸಲ್ಲ ನೋಡಿ "
ಅವಳ ಮಾತು ಪೂರ್ತಿಯಾಗುವ ಮೊದಲೇ ಕಲ್ಲೂರಾಮ್ ಕೈಯ್ಯಿಂದ ಕಾಫಿ ಕಪ್ ಕೆಳಗೆ ಇಳಿಯಿತು.
"ಅಯ್ಯಯ್ಯೋ        !!! ."ಈಗಿನ  ಕೂಗು...... ತ್ಯಾಂಪಿಯದ್ದು.
ನೋಡಿದರೆ ಮುಷಾರಫ್  ಹೊಸ ಚೂರಿಯಲ್ಲಿ  ಊಟದ ಮೇಜಿನ ಮೇಲೆ ಚಿತ್ರ ಬಿಡಿಸತೊಡಗಿದ್ದ ಆ ಆಳದ ಗೀರು ತೆಗೆಯಲು ಮೇಜೇ ಬದಲಿಸಬೇಕೇನೋ.
""ನ ನ  ಬೇಟಾ ಹಾಗೆ ಮಾಡಬಾರದು... " ಕಲ್ಲೂರಾಮಿ .( ಈಗಲಾದರೂ ಗದರಬಹುದು ಎಂದುಕೊಂಡ ತ್ಯಾಂಪ) .."ನೋಡು ಕೈ ಘಾಯವಾದರೆ... ನಿಂಗೆ ನೋವಾಗುತ್ತೆ ಮರೀ,,ಬಿಡು  ಅದನ್ನ."
.
"ನೋಡು ಮಮ್ಮೀ  ಎಷ್ಟು ಚೆನ್ನಾಗಿ ಇಂಡಿಯಾ ಮಾಡಿದೆ ನಾನು.". ತ್ಯಾಂಪ ಆ ಕಡೆ ನೋಡಿ ಬೆಚ್ಚಿದ

ಈ ಸಾರಿ ಒಸಾಮಾ ಸರದಿ, ಆಚೆಗಿದ್ದ ಕೆಚಪ್ ಬಾಟ್ಲಿಯನ್ನು ತೆರೆದು ನೆಲದಲ್ಲಿನ ಕಾರ್ಪೆಟ್ ಮೇಲೆ ಭಾರತ  ವನ್ನು ಆಫ್ರಿಕಾದ ತಮ್ಮನಾಗಿ ಮಾಡಿ ಬಿಡಿಸಿತ್ತು.
ತ್ಯಾಂಪನಿಗೆ  ತನ್ನ ಧರ್ಮ ಪತ್ನಿಯ ನೋಟ ನೋಡಿ ಭೂಮಿ ಇಲ್ಲಿಯೇ ಬಾಯಿ ತೆರೆಯ ಬಾರದಿತ್ತೇ ಅನ್ನಿಸಿತು,
ಈ ಬಾರಿಯ ಕಥೆ ಟಿಗ್ರಿಸ್ ಳದ್ದು.....

ಜೀವನದಲ್ಲಿ ಪ್ರಥಮ ಬಾರಿ ಅವನಿಗೆ ಸಾಯುವಷ್ಟು ಒತ್ತರಿಸಿ ಸೀನನ ನೆನಪು ಬಂತು

ಹೌದು ಎಲ್ಲಿದ್ದಾನೆ ಆತ..?

(ಮುಂದುವರಿಯುವುದು)