
"ಇವತ್ತಿನ್ ಫೈನಲ್ ನಲ್ಲಿ, ನನ್ಪ್ರಕಾರ, "ಹಾಲೆಂಡ್ "ಗೆಲ್ಲುತ್ತೆ. ಇಲ್ಲ.. ಇಲ್ಲ. "ಸ್ಪೇನ್" ಗೆಲ್ಲು... ಇಲ್ಲ,. ಹಾಲೆಂಡ್, ಇಲ್ಲ ಸ್ಪೇ" ..!
ಜೋಹಾನ್ಸ್ಬರ್ಗ್, ನಲ್ಲಿ ಇದುವರೆವಿಗೂ ಆಡಿದ ಘಟಾನುಘಟಿ ತಂಡಗಳು ಹಾಯ್ದ ದಾರಿ, ಮುಳ್ಳಿನದಾಗಿತ್ತಲ್ವ. ಸುಲಭವಾಗಿ ಯಾವುದೂ ಯಾರಿಗೂ ಏನೂ ದಕ್ಕಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಈಗ ಉಳಿಉಳ್ಕೊಂಡಿರೊರು ಇಬ್ರೆ- ಒಂದ್ ತಿಂಗ್ಳಿನಿಂದ ಕಾದಾಡಿದ್ದೇ ಕಾದಾಡಿದ್ದು, ಮತ್ತೆ ಹೊಡ್ದಾಡಿದ್ದು. ಸ್ಪೇನ್ ಹಾಗೂ ಹಾಲೆಂಡ್. ಇಂದು ೧೧, ಜುಲೈ, ೨೦೧೦ ರ ರವಿವಾರ ತಡರಾತ್ರಿ ಇದಕ್ಕೆ ತಕ್ಕ ಉತ್ತರ ಸಿಗಲಿದೆ.
"ಈ ವಿಶ್ವಕಪ್ ನ ಅಂತಿಮ ವಿಜಯಿಗಳಾರು" ?
ಎನ್ನುವ ಪ್ರಶ್ವೆ ಎಲ್ಲರ ತಲೆಯತುಂಬಾ ಆವರಿಸಿರುವುದು, ವೃತ್ತಪತ್ರಿಕೆಗಳಿಂದ ಹಾಗೂ ಮೀಡಿಯಾಗಳ ಮಾಧ್ಯಮಗಳಿಂದ ವ್ಯಕ್ತವಾಗುತ್ತಿದೆ. ನನಗೆ ಒಮ್ಮೆ ತಲೆಯಲ್ಲಿ ವಿಲ್ಲಾರವರ ಸ್ಪೇನೇ ಗೆಲ್ಲುವ ಕುದುರೆ ಎನ್ನಿಸಿದರೆ, ಹೃದಯಾಂತದಾಳದಿಂದ ಒಂದು ಕೀರಲು ಧ್ವನಿ ಪ್ರತಿಧ್ವನಿಸಿ, ಎಲ್ಲಾದರೂ ಉಂಟೆ ಮಾರಾಯ ಅಂತಹ ತಪ್ಪುಮಾಡಬೇಡ, ನೆದರ್ಲಾಂಡ್ ಆಟಗಾರರ ಶೌರ್ಯಾತಿಸಾಹಸಗಳನ್ನು ಮರೆತೆಯಾ ? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಪ್ರದರ್ಶನಕ್ಕಿಟ್ಟುರುವ ಭಾರಿ ಟೆಲಿವಶನ್ ಪರದೆಯಮೇಲೆ ಮೂಡಿದ ಚಿತ್ರದಂತೆ ಕಣ್ಣುಮುಂದೆ ಭುಗಿಲ್ ಅಂತ ಎದ್ದು ನಿಲ್ಲುತ್ತದೆ.
ಭಾನುವಾರದ ಕಟ್ಟಕಡೆಯ ಹಂತದಲ್ಲಿ ಯಾರೇ ಗೆಲ್ಲಲಿ, ವಿಶ್ವಕಪ್ ಫುಟ್ಬಾಲ್ ಕೂಟದ ಕಿರೀಟಕ್ಕೆ ನೂತನ ಒಡೆಯನೊಬ್ಬನ ಹೊಸ ಗರಿಯೊಂದು ಸೇರಿಕೊಳ್ಳಲಿದೆ. ಹಾಲೆಂಡ್ ಮತ್ತು ಸ್ಪೇನ್ ಇಂದಿಗೂ ವಿಶ್ವಕಪ್ ಗಾಗಿ ಪರಿತಪಿಸುತ್ತಿರುವ ತಂಡಗಳು. "ಅಂಡರ್ಡಾಗ್ ಪಟ್ಟ", ದಿಂದ ಯಾರು ಮೇಲೇರುವರೋ, ಕಾದು ನೋಡಬೇಕಾಗಿದೆ
ಕೊನೆಗೆ ನಾನು ನಂಬಿದ, ವಿಧಿ-ವಾದ :
ನಮ್ಮೆಲ್ಲರ ಜೀವನದಲ್ಲಿ ನಾವೇನಾಗುತ್ತೇವೆ. ಎನ್ನುವುದೆಲ್ಲಾ ಪೂರ್ವನಿರ್ಧಾರಿತ ! ನಮ್ಮ ಭವಿಷ್ಯ ಹೇಗೆ ಮುನ್ನಡೆಯಬೇಕೊ ಅದನ್ನು ನಿರ್ಧರಿಸುವುದು-ವಿಧಿಯೊಂದೇ. ಅದನ್ನು ಮೀರಲು ಯಾರಿಗೆ ಸಾಧ್ಯ ? ವಿಶ್ವಕಪ್ ನಲ್ಲಿ ಮೆರೆದ ಮೇರು ಟೀಮ್ ಗಳಾದ ಬ್ರೆಝಿಲ್, ಜರ್ಮನಿ ಅರ್ಜೆಂಟೀನ, ಗಳೆಲ್ಲಾ ವಿಧಿನಿಯಮದಂತೆ ಮುಂದುವರೆಯುತ್ತಿದ್ದಾರೆ. ಜರ್ಮನಿ ೩ ನೇ ಸ್ಥಾನಗಳಿಸಿತು. "ಅಯ್ಯೋ, ಬ್ರೆಝಿಲ್, ಅರ್ಜೆಂಟೀನ ಹಿಂದೆ ಸರಿದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಾದವಲ್ಲ" ! ? ಉತ್ತರ, ಸರಳವಾಗಿದೆ. ಅವೆಲ್ಲಾ ವಿಧಿನಿಯಮದ ಪ್ರಕಾರ, ಹಾಗೆಯೇ ಸೋತು ಹಿಂದೆ ಸರಿದು, ಬೇರೆ ಟೀಮ್ ಗಳಾದ, ಹಾಲೆಂಡ್, ಸ್ಪೇನ್ ಗಳಿಗೆ ದಾರಿ ಸುಗಮಮಾಡಿಕೊಡಬೇಕಾಗಿತ್ತು. ಅದೇ ವಿಧಿನಯಮ. ಹೌದು. ಯಾರೂ ವಿಧಿನಿಯಮವೆಂದು ಸುಮ್ಮನೆ ಕೂಡಬಾರದು. ನಮ್ಮ ಪ್ರಯತ್ನ ಕೊನೆಯವರೆಗೆ ನಡೆಯಲೇ ಬೇಕು. ಆದರೆ, ಇವೆಲ್ಲದರ ತರುವಾಯ, ಅದು ಹೇಗೆ ನಡೆಯಬೇಕೋ ಹಾಗೆಯೇ ಆಗುವುದು ಖಂಡಿತ ! ಈ ನಿಯಮವನ್ನು ನಾನು ಗುರುಗಳೆಂದು ನಂಬಿದ, ಶ್ರೀ. ಪಾವಗಡ ಪ್ರಕಾಶ್ ರಾವ್ ನಂಬುತ್ತಾರೆ. ಅದನ್ನೇ ಅವರು ತಮ್ಮ ಪ್ರವಚನಗಳಲ್ಲಿ ಪ್ರತಿಪಾದಿಸುತ್ತಾರೆ ಸಹಿತ. ಹೀಗೆ ನಂಬುವವರಲ್ಲಿ ಇನ್ನೂ ಲಕ್ಷಾಂತರ ಜನರಿದ್ದಾರೆ. ಅವರಲ್ಲಿ ನಾನೊಬ್ಬ ಅಷ್ಟೆ !
ಡಚ್ ತಂಡ ೧೯೭೪ ಮತ್ತು ೧೯೭೮ ರಲ್ಲಿ ಫೈನಲ್ ತಲುಪಿದ್ದರೂ ವಿಶ್ವ ಕಪ್ ಗೆಲ್ಲುವ ನಿಟ್ಟಿನಲ್ಲಿ ಅಸಫಲರಾಗಿದ್ದರು. ಎಲ್ರಿಗೂ ಅದೇ ಆಸಕ್ತಿ, ಮತ್ತು ಸಂಭ್ರಮ ಆಗಿದೆ. ಹಿಂದೆ ಎರಡು ಬಾರಿ ಕೊನೆಯ ವರ್ಗು ಹೋಗಿ ಪೆಟ್ಟುಪಡೆದು ಬಂದ ತಂಡ ಅಲ್ವೆ ಅದಕ್ಕೆ.
ಬೆರ್ಟ್ ವಾನ್ ಮರ್ವಿಕ್ ಮಾರ್ಗದರ್ಶನದಲ್ಲಿ ಪಳಗಿರುವ ಹಾಲೆಂಡ್ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ ಹಾಲೆಂಡ್ನ ಸ್ನೈಡರ್ ಕೂಡ ಐದು ಗೋಲು ಗಳಿಸಿದ್ದಾರೆ. ಇವರು ಸಹಕರಿಸಿದ್ದರಿಂದ ಚಾಂಪಿಯನ್ ಆಗಲು ಸಹಾಯವಾಯಿತು. ಸ್ನೈಡರ್ ಗೆ ತಮ್ಮ ವೈಯಕ್ತಿಕ ಆಸೆ ಇರಲ್ವೆ ಪಾಪ. ಅದನ್ನೂ ಹೇಗಾದ್ರು ಮಾಡಿ ಪೂರೈಸಿಕೊಳ್ತಾರಾ ಹೇಗೆ ಅನ್ನೊ ಕುತೂಹಲ ಎಲ್ಲಾ ಫುಟ್ಬಾಲ್ ಅಭಿಮಾನಿಗಳಳ್ನ ಕಾಡ್ತಿರೊ ಒಂದು ಸಮಸ್ಯೆ ! ಸ್ಟಾರ್ ಸ್ಟ್ರೈಕರ್ಗಳಾದ ವೆಸ್ಲಿ ಸ್ನೈಡರ್ ಮತ್ತು ಅರ್ಜೆನ್ ರಾಬೆನ್ ಮೇಲೆ ತಂಡದ ನಿರೀಕ್ಷೆ ನೆಲೆನಿಂತಿದೆ.
೩೨ ತಂಡಗಳೊಂದಿ ಮೈದಾನದಲ್ಲಿ ಪ್ರವೇಶಿಸಿ, ಪೈಪೋಟಿ ನಡೆಸಿದ ಟೂರ್ನಿಯಲ್ಲಿ ಈಗಾಗಲೇ ಮೈನವಿರೇಳಿಸುವ ಹಲವಾರು ಸುಂದರ ಸನ್ನಿವೇಶಗಳ ಸುಂದರ, ಹಾಗೂ ಮರೆಯಲಾರದ ದೃಶ್ಯಗಳು ಮೂಡಿಬಂದಿವೆ. ಫೈನಲ್ ಪಂದ್ಯದಲ್ಲಂತೂ ಭುಜಕ್ಕೆ ಭುಜಕೊಟ್ಟು "ನಡಿ ಯಿಲ್ಲವೇ ಮಡಿ" ಎನ್ನುವ ರೀತಿಯಲ್ಲಿ, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ೯೦ ಸಾವಿರ ಪ್ರೇಕ್ಷಕರನ್ನು ತನ್ನ ಒಡಲಲ್ಲಿ ತುಂಬಿಕೊಳ್ಳುವ ಸಾಮರ್ಥ್ಯ ಹೊಂದಿರುವ ಸಾಕರ್ ಸಿಟಿ ಕ್ರೀಡಾಂಗಣ, ಕಿಕ್ಕಿರಿದು ತುಂಬಲಿದೆ. ಸ್ಪೇನ್ ಬೆಂಬಲಿಗರು ಕೆಂಪು ಹಾಗೂ ಹಾಲೆಂಡ್ ಅಭಿಮಾನಿಗಳು ಆರೆಂಜ್ ಬಣ್ಣದ ಉಡುಗೆ ತೊಟ್ಟು ಕ್ರೀಡಾಂಗಣದಲ್ಲಿ ನೆರೆಯಲಿದ್ದು, ಅಲ್ಲೊಂದು ಹೊಸ, ಹಾಗೂ ಅದ್ಭುತ ಲೋಕವೇ ಸೃಷ್ಟಿಯಾಗಲಿದೆ
ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಆಡುತ್ತಿದೆ ವಿನ್ಸೆಂಟ್ ಡೆಲ್ ಬಾಸ್ಕ್ ಅವರ ಗರಡಿಯಲ್ಲಿ ಪಳಗಿರುವ ಸ್ಪೇನ್ ತಂಡ ಫೈನಲ್ ಗೆ ಬಂದು ಆಡುವ ಸಂಭ್ರಮದಲ್ಲಿದೆ. ಗೂಳಿ ಕಾಳಗಕ್ಕೆ ಹೆಸರುವಾಸಿಯಾದ ಸ್ಪಾನಿಷ್ ಆಟಗಾರರು ಹಾಲೆಂಡ್ ಗೋಲುಪೆಟ್ಟಿಗೆಗುರಿಯಾಗಿಸಿ ಗೂಳಿಯಂತೆ ಮುನ್ನುಗ್ಗಲು ಸಜ್ಜಾಗಿದ್ದಾರೆ. ಡೇವಿಡ್ ವಿಲ್ಲಾ, ಆಂಡ್ರೆ ಇನೀಸ್ತ ಮತ್ತು ಕ್ಸಾವಿ ಭರವಸೆಯ ಆಟಗಾರರು. ಫಿಫಾ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್ ಸೆಮಿಫೈನಲ್ನಲ್ಲಿ ಜರ್ಮನಿ ತಂಡವನ್ನು ಮಣಿಸಿತ್ತು.
ನಾಲ್ಕರಘಟ್ಟದ ಪಂದ್ಯದಲ್ಲಿ ಜರ್ಮನಿ ಆಟಗಾರರಿಗೆ ಚೆಂಡನ್ನು ನೀಡದೆ ಸ್ಪೇನ್ ತಂಡದವರು ಕಾಲ್ಚೆಂಡಾಟದ ಅಂಗಳವಿಡೀ ಓಡಾಡಿಸಿದ ಫೈನಲ್ನಲ್ಲೂ ಅದೇ ತಂತ್ರವನ್ನು ಇಂದಿನ ಫೈನಲ್ ಆಟದಲ್ಲಿ ಮುಂದುವರೆಸುವ ಸಾಧ್ಯತೆಯಿದೆ. ಹಾಲೆಂಡ್ ಟೂರ್ನಿಯಲ್ಲಿ ಇದುವರೆಗೆ ಒಟ್ಟು ೧೨ ಗೋಲುಗಳನ್ನು ಗಳಿಸಿದ್ದರೆ, ಸ್ಪೇನ್ ಗಳಿಸಿದ್ದು ಕೇವಲ ೭ ಚೆಂಡನ್ನು ಅಧಿಕ ಸಮಯ ನಿಯಂತ್ರಣದಲ್ಲಿಟ್ಟು, ಅವಕಾಶ ಸಿಕ್ಕಾಗ ಗೋಲು ಗಳಿಸುವ ಸರಳ ಸೂತ್ರವನ್ನು ಸ್ಪೇನ್ ಅನುಸರಿಸುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ಎದುರು ಸೋಲು ಅನುಭವಿಸಿದ್ದ ಸ್ಪೇನ್ ಆ ಬಳಿಕ ಪ್ರಭಾವಿ ಪ್ರದರ್ಶನ ನೀಡಿದೆ
"ಗೋಲ್ಡನ್ ಬೂಟ್" ಪ್ರಶಸ್ತಿಗಾಗಿ ಬಕಪಕ್ಷಿಯಂತೆ ಕಾಯುತ್ತಿರುವ, "ಕ್ರೇಝಿ-ವೀಕ್ಷವರ್ಗ "
ಈಗ ಆಲ್ ಯೂರೋಪಿನ ತಂಡಗಳೆರಡು ದಕ್ಷಿಣ ಆಫ್ರಿಕದ ಜೋಹಾನ್ಸ್ಬರ್ಗ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆಯುವ ೧೯ ನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪರಸ್ಪರ ಪೈಪೋಟಿ-ಸಮರ, ನಡೆಸಲಿವೆ.
ಎಲ್ಲಕ್ಕಿಂತಾ ಹೆಚ್ಚಾಗಿ ಕಾಲ್ಚೆಂಡಿನಾಟದ ಪಂದ್ಯಪ್ರಿಯ ವೀಕ್ಷಕರು, ವಿಲ್ಲಾ ಮತ್ತು ಸ್ನೈಡರ್ ನಡುವಿನ ಪೈಪೋಟಿ ಯನ್ನು ಕಣ್ಣಾರೆ ವೀಕ್ಷಿಸಿ ಆನಂದಿಸಲು ಕಾತುರರಾಗಿದ್ದಾರೆ. ಏಕೆಂದರೆ ತಲಾ ಐದು ಗೋಲು ಗಳಿಸಿರುವ ಇವರಿಬ್ಬರು "ಗೋಲ್ಡನ್ ಬೂಟ್" ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದಾರೆ
"ಇವತ್ತಿನ ಆಟಕ್ಕೆ ರೆಫರಿ, ಇಂಗ್ಲೆಂಡ್ ನ, "ಹಾವರ್ಡ್ ವೆಬ್" !
ಈ ಬಾರಿ, ರೆಫರಿ ಹಾವರ್ಡ್ ವೆಬ್, ಇಂಗ್ಲೆಂಡ್ನೋರು. ಅವರ ಪತ್ನಿನಂತೂ ಹಿಡ್ಯೊರಿಲ್ಲ. (ಯಾಕಂದ್ರೆ, ಪತಿ ವೆಬ್, ಮೈದಾನದಲ್ಲಿ ಬಿಡುವಿಲ್ಲದೆ ಆಟ ನಿಯಂತ್ರಿಸ್ತಿರ್ತಾರೆ) " ಅಯ್ಯೊ ಮನೇಲಿ ಮಕ್ಕ್ಳನ್ನ ಹದ್ದುಬಸ್ತಿನಲ್ಲಿ ಇಟ್ಕೊಳ್ಳೊದ್ರಲ್ಲೇ ಇವರು ತಡಬದಾಯ್ಸ್ತಾರೆ, ಮತೆ, ಆ ೨೨ ಜನನ ಹೇಗ್ ನಿಭಾಯ್ಸ್ತಾರೋ ಅನ್ನೊ ಸಂದೇಹ ನನಗೆ ಅಂದ್ರು " ಭಾರತೀಯ ಕಾಲಮಾನ ಮಧ್ಯರಾತ್ರಿ 12ಕ್ಕೆ ಫೈನಲ್ ಪಂದ್ಯದ ಕಿಕಾಫ್ಗೆ ಪೀಪಿಯನ್ನೂದುವರು. ಆ ಬಳಿಕ ಸಕತ್ ಯೂರೋಪಿನ ಬೇಹದ್ ಆಕ್ರಮಣಕಾರಿ ಫುಟ್ಬಾಲ್ ಶೈಲಿ, ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಮ್ಮೆಲ್ಲರೆದುರಿಗೆ, "ವಿಶ್ವದ ಬಿಲಿಯನ್ ಗಟ್ಟಲೆ, ಟೆಲಿವಿಶನ್ ಫುಟ್ಬಾಲ್ ಆಟದ ರಸಿಕ" ರಿಗೆ, "ಒಳ್ಳೆ ಬೇಳೆ ಹೋಳಿಗೆಯ ರಸದೂಟ" ವಾಗಿ, ಅನಾವರಣಗೊಳ್ಳಲಿದೆ.
ಕಳೆದ ಒಂದು ತಿಂಗಳ ಕಾಲ ಇಂದಿನ ಫೈನಲ್ ಪಂದ್ಯದೊಂದಿಗೆ ಫುಟ್ಬಾಲ್ ಜಗತ್ತನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡ ವಿಶ್ವಕಪ್ ಟೂರ್ನಿಗೆ, ತೆರೆಯೆಳೆಯುವ ಅಭಿಯಾನ ನಡೆಯಲಿದೆ. ಈ ವಿಶ್ವಕಾಲ್ಚೆಂಡಾಟದ ಮಹಾಮೇಳವನ್ನು ಅತ್ಯಂತ ಯಶಸ್ವಿಯಾಗಿ, ಭರ್ಜರಿಯಾಗಿ, ಯಾವ ಹೆಚ್ಚಿನ ವಿವಾದಗಳಿಲ್ಲದೆ, ಆಯೋಜಿಸಿದ ದಕ್ಷಿಣ ಆಫ್ರಿಕಾ ಸಂಭ್ರಮದ, ಸಾಗರದ ಅಲೆಗಳಲ್ಲಿ ಹುದುಗಿ ಮೇಲೆದ್ದು ತೇಲಲಿದೆ.
-"ಪ್ರಜಾವಾಣಿ ದಿನಪತ್ರಿಕೆಯ ಫೋಟೋ ಗ್ಯಾಲರಿ" ಯ, ಸೌಜನ್ಯದಿಂದ.
ಜೋಹಾನ್ಸ್ಬರ್ಗ್, ನಲ್ಲಿ ಇದುವರೆವಿಗೂ ಆಡಿದ ಕಾಲ್ಚೆಂಡಿನಾಟದ ಘಟಾನುಘಟಿ ತಂಡಗಳು ಹಾಯ್ದ ದಾರಿ, ಮುಳ್ಳಿನದಾಗಿತ್ತಲ್ವ. ಸುಲಭವಾಗಿ ಯಾವುದೂ ಯಾರಿಗೂ ಏನೂ ದಕ್ಕಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಈಗ ಉ ಳ್ಕೊಂಡಿರೋರು ಎರಡೇ ತಂಡ-ಒಂದ್ ತಿಂಗ್ಳಿನಿಂದ ಕಾದಾಡಿದ್ದೇ ಕಾದಾಡಿದ್ದು, ಮತ್ತೆ ಹೊಡ್ದಾಡಿದ್ದು. ಅವೇ ಸ್ಪೇನ್ ಹಾಗೂ ಹಾಲೆಂಡ್ ತಂಡಗಳು ! ಇಂದು ೧೧, ಜುಲೈ, ೨೦೧೦ ರ ರವಿವಾರ ತಡರಾತ್ರಿ ಇದಕ್ಕೆ ತಕ್ಕ ಉತ್ತರ ಸಿಗಲಿದೆ.
"ಈ ವಿಶ್ವಕಪ್ ನ ಅಂತಿಮ ವಿಜಯಿಗಳಾರು" ? ಎನ್ನುವ ಪ್ರಶ್ವೆ ಎಲ್ಲರ ತಲೆಯತುಂಬಾ ಆವರಿಸಿರುವುದು, ವೃತ್ತಪತ್ರಿಕೆಗಳಿಂದ ಹಾಗೂ ಮೀಡಿಯಾಗಳ ಮಾಧ್ಯಮಗಳಿಂದ ವ್ಯಕ್ತವಾಗುತ್ತಿದೆ.
ನನಗೆ ಒಮ್ಮೆ ತಲೆಯಲ್ಲಿ ವಿಲ್ಲಾರವರ ಸ್ಪೇನೇ ಗೆಲ್ಲುವ-ಕುದುರೆ ಎನ್ನಿಸಿದರೆ, ಹೃದಯಾಂತದಾಳದಿಂದ ಒಂದು ಕೀರಲು ಧ್ವನಿ ಪ್ರತಿಧ್ವನಿಸಿ, 'ಎಲ್ಲಾದರೂ ಉಂಟೆ ಮಾರಾಯ ಅಂತಹ ತಪ್ಪುಮಾಡಬೇಡ', ನೆದರ್ಲಾಂಡ್ ಆಟಗಾರರ ಶೌರ್ಯಾತಿಸಾಹಸಗಳನ್ನು ಮರೆತೆಯಾ ’? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಪ್ರದರ್ಶನಕ್ಕಿಟ್ಟುರುವ ಭಾರಿ ಟೆಲಿವಶನ್ ಪರದೆಯಮೇಲೆ ಮೂಡಿದ ಚಿತ್ರದಂತೆ ಕಣ್ಣುಮುಂದೆ ” ಭುಗಿಲ್ ’ಅಂತ ಎದ್ದು ನಿಲ್ಲುತ್ತದೆ.
ಭಾನುವಾರದ ಕಟ್ಟಕಡೆಯ ಹಂತದಲ್ಲಿ ಯಾರೇ ಗೆಲ್ಲಲಿ, ವಿಶ್ವಕಪ್ ಫುಟ್ಬಾಲ್ ಕೂಟದ ಕಿರೀಟಕ್ಕೆ ನೂತನ ಒಡೆಯನೊಬ್ಬನ ಹೊಸ ಗರಿಯೊಂದು ಸೇರಿಕೊಳ್ಳಲಿದೆ. ಹಾಲೆಂಡ್ ಮತ್ತು ಸ್ಪೇನ್ ಇಂದಿಗೂ ವಿಶ್ವಕಪ್ ಗಾಗಿ ಪರಿತಪಿಸುತ್ತಿರುವ ತಂಡಗಳು. "ಅಂಡರ್ಡಾಗ್ ಪಟ್ಟ", ದಿಂದ ಯಾರು ಮೇಲೇರುವರೋ, ಕಾದು ನೋಡಬೇಕಾಗಿದೆ.
’ ಕೊನೆಗೆ ನಾನು ನಂಬಿದ, ವಿಧಿ-ವಾದ ” :
ನಮ್ಮೆಲ್ಲರ ಜೀವನದಲ್ಲಿ ನಾವೇನಾಗುತ್ತೇವೆ. ಎನ್ನುವುದೆಲ್ಲಾ ಪೂರ್ವನಿರ್ಧಾರಿತ ! ನಮ್ಮ ಭವಿಷ್ಯ ಹೇಗೆ ಮುನ್ನಡೆಯಬೇಕೊ ಅದನ್ನು ನಿರ್ಧರಿಸುವುದು-ವಿಧಿಯೊಂದೇ. ಅದನ್ನು ಮೀರಲು ಯಾರಿಗೆ ಸಾಧ್ಯ ? ವಿಶ್ವಕಪ್ ನಲ್ಲಿ ಮೆರೆದ ಮೇರು ಟೀಮ್ ಗಳಾದ ಬ್ರೆಝಿಲ್, ಜರ್ಮನಿ ಅರ್ಜೆಂಟೀನ, ಗಳೆಲ್ಲಾ ವಿಧಿನಿಯಮದಂತೆ ಮುಂದುವರೆಯುತ್ತಿದ್ದಾರೆ. ಜರ್ಮನಿ ೩ ನೇ ಸ್ಥಾನಗಳಿಸಿತು. "ಅಯ್ಯೋ, ಬ್ರೆಝಿಲ್, ಅರ್ಜೆಂಟೀನ ಹಿಂದೆ ಸರಿದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಾದವಲ್ಲ" ! ?
ಉತ್ತರ, ಸರಳವಾಗಿದೆ. ಅವೆಲ್ಲಾ ವಿಧಿನಿಯಮದ ಪ್ರಕಾರ, ಹಾಗೆಯೇ ಸೋತು ಹಿಂದೆ ಸರಿದು, ಬೇರೆ ಟೀಮ್ ಗಳಾದ, ಹಾಲೆಂಡ್, ಸ್ಪೇನ್ ಗಳಿಗೆ ದಾರಿ ಸುಗಮಮಾಡಿಕೊಡಬೇಕಾಗಿತ್ತು. ಅದೇ ವಿಧಿನಯಮ. ಹೌದು. ಯಾರೂ ವಿಧಿನಿಯಮವೆಂದು ಸುಮ್ಮನೆ ಕೂಡಬಾರದು. ನಮ್ಮ ಪ್ರಯತ್ನ ಕೊನೆಯವರೆಗೆ ನಡೆಯಲೇ ಬೇಕು. ಆದರೆ, ಇವೆಲ್ಲದರ ತರುವಾಯ, ಅದು ಹೇಗೆ ನಡೆಯಬೇಕೋ ಹಾಗೆಯೇ ಆಗುವುದು ಖಂಡಿತ ! ಈ ನಿಯಮವನ್ನು ನಾನು ಗುರುಗಳೆಂದು ನಂಬಿದ, ಶ್ರೀ. ಪಾವಗಡ ಪ್ರಕಾಶ್ ರಾವ್, ನಂಬುತ್ತಾರೆ. ಅದನ್ನೇ ಅವರು ತಮ್ಮ ಪ್ರವಚನಗಳಲ್ಲಿ ಪ್ರತಿಪಾದಿಸುತ್ತಾರೆ, ಸಹಿತ. ಹೀಗೆ ನಂಬುವವರಲ್ಲಿ ಇನ್ನೂ ಲಕ್ಷಾಂತರ ಜನರಿದ್ದಾರೆ. ಅವರಲ್ಲಿ ನಾನೊಬ್ಬ ಅಷ್ಟೆ !
ಡಚ್ ತಂಡ ೧೯೭೪ ಮತ್ತು ೧೯೭೮ ರಲ್ಲಿ ಫೈನಲ್ ತಲುಪಿದ್ದರೂ ವಿಶ್ವ ಕಪ್ ಗೆಲ್ಲುವ ನಿಟ್ಟಿನಲ್ಲಿ ಅಸಫಲರಾಗಿದ್ದರು. ಎಲ್ರಿಗೂ ಅದೇ ಆಸಕ್ತಿ, ಮತ್ತು ಸಂಭ್ರಮ ಆಗಿದೆ. ಹಿಂದೆ ಎರಡು ಬಾರಿ ಕೊನೆಯ ವರ್ಗು ಹೋಗಿ ಪೆಟ್ಟುಪಡೆದು ಬಂದ ತಂಡ ಅಲ್ವೆ ಅದಕ್ಕೆ. ಬೆರ್ಟ್ ವಾನ್ ಮರ್ವಿಕ್ ಮಾರ್ಗದರ್ಶನದಲ್ಲಿ ಪಳಗಿರುವ ಹಾಲೆಂಡ್ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ ಹಾಲೆಂಡ್ನ ಸ್ನೈಡರ್ ಕೂಡ ಐದು ಗೋಲು ಗಳಿಸಿದ್ದಾರೆ. ಇವರು ಸಹಕರಿಸಿದ್ದರಿಂದ ಚಾಂಪಿಯನ್ ಆಗಲು ಸಹಾಯವಾಯಿತು. ಸ್ನೈಡರ್ ಗೆ ತಮ್ಮ ವೈಯಕ್ತಿಕ ಆಸೆ ಇರಲ್ವೆ ಪಾಪ. ಅದನ್ನೂ ಹೇಗಾದ್ರು ಮಾಡಿ ಪೂರೈಸಿಕೊಳ್ತಾರಾ ಹೇಗೆ, ಅನ್ನೊ ಕುತೂಹಲ ಎಲ್ಲಾ ಫುಟ್ಬಾಲ್ ಅಭಿಮಾನಿಗಳಳ್ನ ಕಾಡ್ತಿರೊ ಒಂದು ಕು ತೂಹಲದ ಪ್ರಶ್ನೆ ! ಸ್ಟಾರ್ ಸ್ಟ್ರೈಕರ್ಗಳಾದ ವೆಸ್ಲಿ ಸ್ನೈಡರ್ ಮತ್ತು ಅರ್ಜೆನ್ ರಾಬೆನ್ ಮೇಲೆ ತಂಡದ ನಿರೀಕ್ಷೆ ನೆಲೆನಿಂತಿದೆ.
೩೨ ತಂಡಗಳೊಂದಿ ಮೈದಾನದಲ್ಲಿ ಪ್ರವೇಶಿಸಿ, ಪೈಪೋಟಿ ನಡೆಸಿದ ಟೂರ್ನಿಯಲ್ಲಿ ಈಗಾಗಲೇ ಮೈನವಿರೇಳಿಸುವ ಹಲವಾರು ಕುತೂಹಲಕಾರಿ ಸನ್ನಿವೇಶಗಳ ಸುಂದರ, ಹಾಗೂ ಮರೆಯಲಾರದ ದೃಶ್ಯಗಳು ಮೂಡಿಬಂದಿವೆ. ಫೈನಲ್ ಪಂದ್ಯದಲ್ಲಂತೂ ಭುಜಕ್ಕೆ ಭುಜಕೊಟ್ಟು "ನಡಿ ಯಿಲ್ಲವೇ ಮಡಿ" ಎನ್ನುವ ರೀತಿಯಲ್ಲಿ, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ೯೦ ಸಾವಿರ ಪ್ರೇಕ್ಷಕರನ್ನು ತನ್ನ ಒಡಲಲ್ಲಿ ತುಂಬಿಕೊಳ್ಳುವ ಸಾಮರ್ಥ್ಯ ಹೊಂದಿರುವ ಸಾಕರ್ ಸಿಟಿ ಕ್ರೀಡಾಂಗಣ, ಕಿಕ್ಕಿರಿದು ತುಂಬಲಿದೆ. ಸ್ಪೇನ್ ಬೆಂಬಲಿಗರು ಕೆಂಪು ಹಾಗೂ ಹಾಲೆಂಡ್ ಅಭಿಮಾನಿಗಳು ಆರೆಂಜ್ ಬಣ್ಣದ ಉಡುಗೆ ತೊಟ್ಟು ಕ್ರೀಡಾಂಗಣದಲ್ಲಿ ನೆರೆಯಲಿದ್ದು, ಅಲ್ಲೊಂದು ಹೊಸ, ಹಾಗೂ ಅದ್ಭುತ ಲೋಕವೇ ಸೃಷ್ಟಿಯಾಗಲಿದೆ.
ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಆಡುತ್ತಿದೆ ವಿನ್ಸೆಂಟ್ ಡೆಲ್ ಬಾಸ್ಕ್ ಅವರ ಗರಡಿಯಲ್ಲಿ ಪಳಗಿರುವ ಸ್ಪೇನ್ ತಂಡ ಫೈನಲ್ ಗೆ ಬಂದು ಆಡುವ ಸಂಭ್ರಮದಲ್ಲಿದೆ. ಗೂಳಿ ಕಾಳಗಕ್ಕೆ ಹೆಸರುವಾಸಿಯಾದ ಸ್ಪಾನಿಷ್ ಆಟಗಾರರು ಹಾಲೆಂಡ್ ಗೋಲುಪೆಟ್ಟಿಗೆಗುರಿಯಾಗಿಸಿ ಗೂಳಿಯಂತೆ ಮುನ್ನುಗ್ಗಲು ಸಜ್ಜಾಗಿದ್ದಾರೆ. ಡೇವಿಡ್ ವಿಲ್ಲಾ, ಆಂಡ್ರೆ ಇನೀಸ್ತ ಮತ್ತು ಕ್ಸಾವಿ ಭರವಸೆಯ ಆಟಗಾರರು. ಫಿಫಾ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್ ಸೆಮಿಫೈನಲ್ನಲ್ಲಿ ಜರ್ಮನಿ ತಂಡವನ್ನು ಮಣಿಸಿತ್ತು.
ನಾಲ್ಕರಘಟ್ಟದ ಪಂದ್ಯದಲ್ಲಿ ಜರ್ಮನಿ ಆಟಗಾರರಿಗೆ ಚೆಂಡನ್ನು ನೀಡದೆ ಸ್ಪೇನ್ ತಂಡದವರು ಕಾಲ್ಚೆಂಡಾಟದ ಅಂಗಳವಿಡೀ ಓಡಾಡಿಸಿದ ಫೈನಲ್ನಲ್ಲೂ ಅದೇ ತಂತ್ರವನ್ನು ಇಂದಿನ ಫೈನಲ್ ಆಟದಲ್ಲಿ ಮುಂದುವರೆಸುವ ಸಾಧ್ಯತೆಯಿದೆ. ಹಾಲೆಂಡ್ ಟೂರ್ನಿಯಲ್ಲಿ ಇದುವರೆಗೆ ಒಟ್ಟು ೧೨ ಗೋಲುಗಳನ್ನು ಗಳಿಸಿದ್ದರೆ, ಸ್ಪೇನ್ ಗಳಿಸಿದ್ದು ಕೇವಲ ೭ ಚೆಂಡನ್ನು ಅಧಿಕ ಸಮಯ ನಿಯಂತ್ರಣದಲ್ಲಿಟ್ಟು, ಅವಕಾಶ ಸಿಕ್ಕಾಗ ಗೋಲುಗಳಿಸುವ ಸರಳ ಸೂತ್ರವನ್ನು ಸ್ಪೇನ್ ಅನುಸರಿಸುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ಎದುರು ಸೋಲು ಅನುಭವಿಸಿದ್ದ ಸ್ಪೇನ್ ಆ ಬಳಿಕ ಪ್ರಭಾವಿ ಪ್ರದರ್ಶನ ನೀಡಿದೆ.
"ಗೋಲ್ಡನ್ ಬೂಟ್" ಪ್ರಶಸ್ತಿಗಾಗಿ ಬಕಪಕ್ಷಿಯಂತೆ ಕಾಯುತ್ತಿರುವ, "ಕ್ರೇಝೀ-ವೀಕ್ಷಕವರ್ಗ "
ಈಗ ಆಲ್ ಯೂರೋಪಿನ ತಂಡಗಳೆರಡು ದಕ್ಷಿಣ ಆಫ್ರಿಕದ ಜೋಹಾನ್ಸ್ಬರ್ಗ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆಯುವ ೧೯ ನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪರಸ್ಪರ ಪೈಪೋಟಿ-ಸಮರ, ನಡೆಸಲಿವೆ.ಎಲ್ಲಕ್ಕಿಂತಾ ಹೆಚ್ಚಾಗಿ ಕಾಲ್ಚೆಂಡಿನಾಟದ ಪಂದ್ಯಪ್ರಿಯ ವೀಕ್ಷಕರು, ವಿಲ್ಲಾ ಮತ್ತು ಸ್ನೈಡರ್ ನಡುವಿನ ಪೈಪೋಟಿ ಯನ್ನು ಕಣ್ಣಾರೆ ವೀಕ್ಷಿಸಿ ಆನಂದಿಸಲು ಕಾತುರರಾಗಿದ್ದಾರೆ. ಏಕೆಂದರೆ ತಲಾ ಐದು ಗೋಲು ಗಳಿಸಿರುವ ಇವರಿಬ್ಬರು "ಗೋಲ್ಡನ್ ಬೂಟ್" ಪ್ರಶಸ್ತಿ " ಗೆ ಸ್ಪರ್ಧೆಯಲ್ಲಿದ್ದಾರೆ.
"ಇವತ್ತಿನ ಆಟಕ್ಕೆ ರೆಫರಿ", ಇಂಗ್ಲೆಂಡ್ ನ, "ಹಾವರ್ಡ್ ವೆಬ್" !
ಈ ಬಾರಿಯ, ರೆಫರಿ ಹಾವರ್ಡ್ ವೆಬ್, ಇಂಗ್ಲೆಂಡ್ನೋರು. ಅವರ ಪತ್ನಿನಂತೂ ಹಿಡ್ಯೊರಿಲ್ಲ. (ಯಾಕಂದ್ರೆ, ಪತಿ ವೆಬ್, ಮೈದಾನದಲ್ಲಿ ಬಿಡುವಿಲ್ಲದೆ ಆಟ ನಿಯಂತ್ರಿಸ್ತಿರ್ತಾರೆ !ಅಲ್ವಾ !) " ಅಯ್ಯೊ ಮನೇಲಿ ತಮ್ಮ ಮಕ್ಕಳನ್ನೇ ಹದ್ಬಸ್ತ್ ನಲ್ಲಿ ಇಟ್ಕೊಳ್ಳೋಕೆ ತಡ್ಬಡಾಯ್ಸೊ ಇವೃ, ಆ ೨೨ ಜನನ ಹೇಗೆ ನಿಭಾಯ್ಸ್ತಾರೊ ಅನ್ನೊ ಸಂದೇಹ ನನಗೆ, " ಅಂತಾರೆ ಅವೃ ! " ಭಾರತೀಯ ಕಾಲಮಾನ ಮಧ್ಯರಾತ್ರಿ ೧೨ ಕ್ಕೆ ಫೈನಲ್ ಪಂದ್ಯದ ಕಿಕಾಫ್ಗೆ ಪೀಪಿಯನ್ನೂದುವರು. ಆ ಬಳಿಕ ಸಕತ್ ಯೂರೋಪಿನ ಬೇಹದ್ ಆಕ್ರಮಣಕಾರಿ ಫುಟ್ಬಾಲ್ ಶೈಲಿ, ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಮ್ಮೆಲ್ಲರೆದುರಿಗೆ, "ವಿಶ್ವದ ಬಿಲಿಯನ್ ಗಟ್ಟಲೆ, ಟೆಲಿವಿಶನ್ ಫುಟ್ಬಾಲ್ ಆಟದ ರಸಿಕ" ರಿಗೆ, "ಒಳ್ಳೆ ಬೇಳೆ ಹೋಳಿಗೆಯ ರಸದೂಟ" ವಾಗಿ, ಅನಾವರಣಗೊಳ್ಳಲಿದೆ.
ಕಳೆದ ಒಂದು ತಿಂಗಳ ಕಾಲ ಇಂದಿನ ಫೈನಲ್ ಪಂದ್ಯದೊಂದಿಗೆ ಫುಟ್ಬಾಲ್ ಜಗತ್ತನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡ ವಿಶ್ವಕಪ್ ಟೂರ್ನಿಗೆ, ತೆರೆಯೆಳೆಯುವ ಅಭಿಯಾನ ನಡೆಯಲಿದೆ. ಈ ವಿಶ್ವಕಾಲ್ಚೆಂಡಾಟದ ಮಹಾಮೇಳವನ್ನು ಅತ್ಯಂತ ಯಶಸ್ವಿಯಾಗಿ, ಭರ್ಜರಿಯಾಗಿ, ಯಾವ ಹೆಚ್ಚಿನ ವಿವಾದಗಳಿಲ್ಲದೆ, ಆಯೋಜಿಸಿದ ದಕ್ಷಿಣ ಆಫ್ರಿಕಾ ಸಂಭ್ರಮದ, ಸಾಗರದ ಅಲೆಗಳಲ್ಲಿ ಹುದುಗಿ ಮೇಲೆದ್ದು ತೇಲಲಿದೆ. ಕಗ್ಗತ್ತಲ ಖಂಡ, ಅಶಿಸ್ತು, ಹಾಗೂ ಜನರೊಡನೆ ಸರಿಯಾದ ನಡವಳಿಕೆಗಳನ್ನು ಅಪೇಕ್ಷಿಸಲು ಸಾದ್ಯವಿಲ್ಲವೆಂದು ಹಿಂದೊಮ್ಮೆ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದ ಜನತೆ, ಇಂದು ಹೊಸದೊಂದು ವಿಕ್ರಮವನ್ನು ಸ್ಥಾಪಿಸಿ, ವಿಶ್ವದ ಜನತೆಯ ಕಣ್ಣಿಗೆ ಒಂದು ಸೊಗಸಾದ ಚಿತ್ರವನ್ನು ಕೊಟ್ಟಿದ್ದಾರೆ. ವಿಶ್ವಕಪ್ ಅಲ್ಲದೆ, ಒಳ ಆಫ್ರಿಕದ ಸಮಸ್ಯೆಗಳೇನು ಕಡಿಮೆಯಿಲ್ಲ ! ಬೆಳೆಯುತ್ತಿರುವ ದೇಶವಲ್ಲವೇ !
ಪ್ರತಿಕ್ರಿಯೆ (2)