ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ ಆರಂಭವಾಯ್ತು







ಈ ಸಾರಿ ಗುರುಗಳು ನಮಗೆ ಕಲಿಸಲು ಆಯ್ದು ಕೊಂಡಿದ್ದು ಕ್ರಿ ಶ ೧೧ ನೆಯ ಶತಮಾನದ ಕೊನೆ ಮತ್ತು ೧೨ ನೇ ಶತಮಾನದ ಆದಿಯಲ್ಲಿ ಜೀವಿಸಿದ್ದ ನಾಗಚಂದ್ರ ನ( ವಿಜಯಪುರಈಗಿನ ಬಿಜಾಪುರ ಪ್ರಾಂತ್ಯದಲ್ಲಿ ಬದುಕಿನವನೆಂದು ಊಹೆ) ರಾಮಚಂದ್ರ ಚರಿತ ಪುರಾಣಪ್ರವೇಶ.ಜೈನ ಮತದ ನಿಷ್ಠ ಅನುಯಾಯಿಯಾಗಿದ್ದ ಈತನ ಗುರುಪರಂಪರೆಯಲ್ಲಿ ಮುಖ್ಯರು ಬಾಲಚಂದ್ರ ಮೇಘಚಂದ್ರ ಯತಿಗಳು.ಪಂಪ ಪೊನ್ನ ರನ್ನರಂತೆಯೇ ಈತನೂ ಎರಡು ಮಹಾಕಾವ್ಯಗಳನ್ನು ರಚಿಸಿದ್ದಾನೆ ಮಲ್ಲಿನಾಥ ಪುರಾಣ ಮತ್ತು ರಾಮಚಂದ್ರ ಚರಿತಪುರಾಣ.



ರಾಮಾಯಣವನ್ನು ಜೈನ ಪರಂಪರೆಯ ಅನುಸಾರ ಪುನರ್ ವ್ಯಾಖ್ಯಾನಕ್ಕೆ ಒಳಪಡಿಸಿರುವುದು ರಾಮಚಂದ್ರ ಚರಿತ ಪುರಾಣ ಕೃತಿಯ ವಿಶಿಷ್ಟ ಅಂಶ. ಪಂಪನ ಮೇಲಿನ ಅಭಿಮಾನದಿಂದ ತನ್ನನ್ನು ಅಭಿನವ ಪಂಪ ಎಂದು ಕರೆದುಕೊಂಡ ಈ ಕವಿಯು ಮುಖ್ಯವಾಗ್ ಭಕ್ತಿ ವೈರಾಗ್ಯಗಳನ್ನು ಕೇಂದ್ರೀಕರಿಸಿ ಕಾವ್ಯಗಳನ್ನು ರಚಿಸಿದ್ದಾನೆ.



ಭಾರತೀ ಕರ್ಣಪೂರ , ಕವಿತಾಮನೋಹರ, ಸಾಹಿತ್ಯವಿಧ್ಯಾಧರ, ಜನಸ್ಥಾನರತ್ನಪ್ರದೀಪ, ಸೂಕ್ತಿ ಮುಕ್ತಾ ವಸಂತ,ಮೊದಲಾದ ಬಿರುದುಗಳು ಈತನಿಗಿದ್ದವು, ಜಿನಮುನಿತನಯ, ಜಿನಾಕ್ಷರ ಮಾಲೆ ಎಂಬ ಗ್ರಂಥಗಳನ್ನೂ ಈತ ರಚಿಸಿದನೆಂದು ಉಲ್ಲೇಖವಿದೆ.
ಮೊತ್ತ ಮೊದಲು "ರಾಮಾಯಣ" ಪ್ರಾಕೃತ ಭಾಷೆಯಲ್ಲಿ "ವಿಮಲಸೂರಿ"ಯವರ "ಪೌನು ಚರಿತ"ಮತ್ತು ಸಂಸ್ಕ್ರತದಲ್ಲಿ ರವಿಶೇಣ, ಜೈನ ಕವಿ ನಾಗಚಂದ್ರನ ರಾಮಚಂದ್ರ ಚರಿತಪುರಾಣ ಈ ಎರಡು ಕೃತಿ ಗಳೇ ಅಧಾರ .