ನಾನು ನನ್ನಎಲ್ಲಾ ಗೆಳೆಯ ಮತ್ತು ಭಂಧು ಬಾಂಧವರಿಗೆ ಅವರು ೨೦೦೦ ನಿಂದ ನನಗೆ ಕಳುಹಿಸುತ್ತಿರುವ ಮಿಂಚಂಚೆಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ
ಅವರ ಆ ಮಿಂಚಂಚೆಗಳ ಕಾರಣದಿಂದಲೇ
೧.ಕೋಲಾದಲ್ಲಿ ಸ್ನಾನ ಗೃಹ ,ಪಾಯಿಖಾನೆ ಸ್ವಛ್ಚ ಮಾಡಬಹುದೆಂಬುದು ಕೇಳಿಯೇ ನಾನು ಅದನ್ನು ಕುಡಿಯುವದನ್ನು ಬಿಟ್ಟೇ ಬಿಟ್ಟೆ.
೨. ನಾನು ಸಿನೆಮಾ ಮಂದಿರಗಳಲ್ಲಿ ಆಸನದಲ್ಲಿ ಎಐಡ್ಸ್ ಸೂಜಿಗಳನ್ನಿಡುತ್ತರಂತ ಕೇಳಿ ಸಿನೆಮಾ ನೋಡುವುದನ್ನೂ ನಿಲ್ಲಿಸಿ ಬಿಟ್ಟೆ.
 ೩. ಸಾವಿರ ಸಾವಿರ ಮಿಂಚಂಚೆಗಳನ್ನು ಅತ್ತಿಂದಿತ್ತ ಕಳುಹಿಸಿಯೂ ಇನ್ನೂ ಬಾರದ ಮೊಬಾಯಿಲ್, ಕ್ಯಾಮರಾ, ಲ್ಯಾಪ್ಟೋಪ್ಗಳಿಗಾಗಿ ಕಾಯುತ್ತಿದ್ದೇನೆ.
 ೪. ಡಿಯೋ ಉಪಯೋಗಿಸಿದರೆ ಕ್ಯಾನ್ಸರ್ ಬರುತ್ತದೆ ಎಂತ ಕೇಳಿ ಅದನ್ನು ಬಿಟ್ಟು, ಈಗ ನನ್ನದುರ್ವಾಸನೆ ನನಗೇ ಅಪ್ರಿಯವಾಗಿದೆ.
೫. ಈಗಂತೂ ನನ್ನ ಕಾರನ್ನೂ ಹೊರಗಡೆ ಎಲ್ಲಿಯೂ ಬಿಡಲು ಕೂಡಾ ಹೆದರಿಕೆಯಾಗುತ್ತಿದೆ, ಯಾರಾದರೂ ನನ್ನನು ಅಡ್ಡಕಟ್ಟಿ ದೊರೋಡೆ ಮಾಡಿದರೇನು ಗತಿ..?
೬. ನಾನೀಗ ದೂರವಾಣಿಯನ್ನೂ ಎತ್ತುತ್ತಿಲ್ಲ , ಅವರೇನಾದರೂ ತಲೆಕೆಟ್ಟ ನಂಬರ್ ಕೊಟ್ಟು ಅದಕ್ಕೆ ನಾನು ಮಾದಿದರೆ ಉಗಾಂಡಾ ಪಾಕ್ಸಿಂಗಾಪುರಗಳಿಗೆ ಫೋನ್ ಮಾಡಿದ ಬಿಲ್ಲು ಬಂದರೆ..?  
೭. ನಾನು ನನ್ನ ಉಳಿತಾಯದ ಹಣವನ್ನೂ ಒಂದು ೭ ವರುಷದ ಹಸುಳೆಗೆ ದಾನ ಮಾಡಿಬಿಟ್ಟೆ, ೧೯೯೩ ರಲ್ಲಿ ಸಾಯುವ ಕೊನೆಕ್ಷಣದಲ್ಲಿದ್ದ  ಅವಳ  ಪ್ರಾಯ ಇನ್ನೂ ಏಳೇ ವರ್ಷ ಪಾಪ.
೮. ನೈಜೀರಿಯಾದಲ್ಲಿದ್ದ ಯಾರಿಗೂ ನೂರು ಲಕ್ಷ ಡಾಲರ್ ನನ್ನ ಖಾತೆಗೆ ಹಾಕಿಕೊಳ್ಳಲು ಇನ್ನೂ ತಯಾರಾಗಿದ್ದೇನೆ
ಅವರ ತಲಾಂತರ ಬದುಕಿನ ಆಸ್ತಿಯ ಮುಟ್ಟುಗೋಲು ತಪ್ಪಿಸಲು.
೯. ೪೦೦ ಕ್ಕೂ ಹೆಚ್ಚಿನ ಜನರಿಗೆ ೩೫ ಮಿಂಚಂಚೆಗಳನ್ನು ಕಳುಹಿಸಿಕೊಟ್ಟು ನೋಕಿಆ ಅಥವಾ ಸೋನಿ ಯವರ ಬಾರದ ಮೊಬಾಯಿಲಗಳಿಗಾಗಿ ಕಾಯುತ್ತಿದ್ದೇನೆ, ಈಗಂತೂ ಆ ಮೊಡೆಲ್ಲ್ ಗಳೂ ಹಳತಾಗಿವೆ.
೧೦. ಆ ದೇವರುಗಳ ಚಿತ್ರಗಳನ್ನು ಹಲವಾರು ಜನರಿಗೆ ಕಳುಹಿಸುವ ಮೊದಲು ಮಾಡಿದ ಹರಕೆಗಳಿನ್ನೂ ಫಲಕಾರಿಯಾಗಲಿಲ್ಲ( ಅವುಗಳಲ್ಲಿ ಹಲವರಿಗೆ ಈಗಾಗಲೇ ಬೇರೆಯವರೊಂದಿಗೆ ಮದುವೆಯಾಗಿ ಬಿಟ್ಟಿದೆ)
ಕೊನೆಯ ಆದರೆ ಅತೀ ಮುಖ್ಯವಾದದ್ದು,
೧೧.  ಈ ಮಿಂಚಂಚೆಯನ್ನು ನೀವು ೧೧೨೪೬ ಜನರಿಗೆ ಕಳುಹಿಸಿಕೊಡದಿದ್ದಲ್ಲಿ ನಿಮ್ಮ ಮೇಲೆ ಹಕ್ಕಿ ಹೇಸಿಗೆ ಮಾಡುತ್ತದೆ
ಇಲ್ಲಿಯವರೆಗೆ ಏನೂ ಆಗಲಿಲ್ಲ...          ........... ಆದರೂ ಯಾರಿಗೆ ಗೊತ್ತು...? ಯಾವ ಹುತ್ತದಲ್ಲಿ ಯಾವ ಹಾವೋ..?
ದಯವಿಟ್ಟು ಕಳುಹಿಸಿ

ಮಿಂಚಂಚೆ ಯ ಅಧಾರದಿಂದ
ಹಾಸ್ಯ ಲೇಖನ