ವೈಧಿಕ ಇತಿಹಾಸದ ಬಗ್ಗೆ ಜನರಲ್ಲಿ ಅರಿವುಂಟುಮಾಡುವ ಪ್ರಯತ್ನದಲ್ಲಿ ‘ಇಸ್ಕಾನ್’ ಮಹತ್ವದ ಹೆಜ್ಜೆಯಿಟ್ಟಿದ್ದು ಬೆಂಗ್ಳೂರಲ್ಲಿ ‘ಕೃಷ್ಣ ಲೀಲೆ’ ಎಂಬ ಮನರಂಜನಾ ಉದ್ಯಾನವನ್ನು ನಿರ್ಮಿಸಲಿದೆ. ಈ ಉದ್ದೇಶಿತ ಯೋಜನೆಗೆ ‘ಡಿಸ್ನಿ ವರ್ಲ್ಡ್’ ಪ್ರೇರಣೆಯಾಗಿದೆ. ಮೋಜು ಮಸ್ತಿಯ ಹಬ್ಬದೂಟ ಉಣಬಡಿಸಲಿರುವ, ಇತ್ತೀಚೆಗೆ ತುಂಬಾ ಸುದ್ದಿಯಲ್ಲಿರುವ, ‘ಕೃಷ್ಣ ಲೀಲೆ’ಗೆ ಜೂನ್ 20ರಂದು ಭೂಮಿ ಪೂಜೆಯೂ ಮುಗಿದಿದೆ. ಕನಕಪುರ ರಸ್ತೆಯಲ್ಲಿರುವ ವೈಕುಂಟ ಬೆಟ್ಟದ 28ಎಕರೆ ಜಾಗದಲ್ಲಿ ನಿರ್ಮಾಣವಾಗಲಿದ್ದು, ಒಟ್ಟು ರೂ.350 ಕೋಟಿಯ ಯೋಜನೆ ಇದಾಗಿದೆ. ಇಲ್ಲಿ ಪಾರಂಪರಿಕ ಗೋಪುರವು ಸೇರಿದಂತೆ ಒಟ್ಟು ಒಂಬತ್ತು ವಿವಿಧ ಆಕರ್ಷಣೆಗಳಿರಲಿವೆ. ಎರಡು ದೇವಸ್ಥನಗಳು, ಒಂದು 4-Dಥಿಯೇಟರ್, ಪ್ರದರ್ಶನಗಳು, ಗೊಂಬೆ ತಯಾರಿಸುವ ಕಾರ್ಯಾಗಾರಗಳು, ಮಕ್ಕಳಿಗೆ ಕಥೆ ಹೇಳುವುದು ಮತ್ತು ವಿವಿಧ ಉಡುಗೆಗಳ ಪ್ರದರ್ಶನವಿರುತ್ತದೆ.
ಸದಾ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ಮತ್ತು ಇತರೆ ಪಾಶ್ಚಾತ್ಯ ದಂತಕಥೆಗಳ ಕನಸು ಕಾಣುವ ಇಂದಿನ ಮಕ್ಕಳಿಗೆ ಕೃಷ್ಣ, ರಾಮ ಮತ್ತು ಹನುಮರಂತಹ ಭಾರತೀಯ ವೈದಿಕ ನಾಯಕರುಗಳ ವೈಭವಯುತ ಚರಿತ್ರೆಯನ್ನು ಪರಿಚಯಿಸಬಹುದಾದ ಈ ಯೋಜನೆಯು ಒಂದು ಐತಿಹಾಸಿಕ ಹೆಜ್ಜೆಯಾಗಿದೆ.
‘ಕೃಷ್ಣ ಲೀಲೆ’ ಮನರಂಜನೆ ಉದ್ಯಾನದ ಆಕರ್ಷಣೆಗಳು:
• ಶ್ರೀ ಪೂರಿ ಜಗನ್ನಾಥ ಮಂದಿರ ಮತ್ತು ಶ್ರೀ ರಾಧಾಕೃಷ್ಣ ಮಂದಿರ
• ಶ್ರೀ ವೆಂಕಟೇಶ್ವರ ಮಂದಿರ
• ಶ್ರೀ ಪ್ರಧುಪದ ಪೀಠ
• ವಿಷಯೋದ್ಯನ ಅಕರ್ಷಣೆಗಳು
• ಕೃಷ್ಣ ಮಕ್ಕಳ ವಲಯ


...ತಾರಾಲಯ
ದೋಣಿ ವಿಹಾರ
...ಮಕ್ಕಳ ವಲಯ
4-Dಥಿಯೇಟರ್
ಫೊಟೋ ಕೃಪೆ: ಹರೀಶನ ಮಿಂಚಂಚೆ
ಪ್ರತಿಕ್ರಿಯೆ (5)