
ಮದುವೆ ಸ್ವರ್ಗದಲ್ಲೇ ನಡೆದಿರುತ್ತದಂತೆ...!!
ಹಾಗಾದರೆ ಇಲ್ಲಿ ಆಗುವುದು..?
ಈಗಿನ ವಿಚ್ಛೇದನೆಯ ಓಘ ನೋಡಿದರೆ ಮೇಲಿನ ವಾಕ್ಯ ಸರಿಯೆಂದೆನಿಸದು.
ನಗರದ ಧಾವಂತದ ಯುಗದಲ್ಲಿ, , ನಮ್ಮ ಸಮಾಜದಲ್ಲಿ ತನ್ನ ಸೋಕಾಲ್ಡ ಅಂತಸ್ತು, ಘನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ತನ್ನತನವನ್ನು ಕಾಪಿಡೋ ಭರದಲ್ಲಿ ಮಾನವನ ನಡುವೆ ಭಾಂಧ್ವ್ಯ ಪ್ರೀತಿ ಪ್ರೇಮಗಳು ಅರ್ಥ ಕಳೆದುಕೊಳ್ಳುತ್ತಿವೆ ಅನ್ನಿಸುತ್ತಿದೆ, ಎಲ್ಲೋ ನಾವು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಿದ್ದೇವೆ ಅನ್ನಿಸುತ್ತಿದೆ. ಹಾಗಾಗಿ
ವಿಷಯ ವೈಭವದ ಮದುವೆ ಅವಶ್ಯವೇ?
ಕೂಡಿ ಬಾಳುವವರು ಹೇಗಿದ್ದರೂ ಬಾಳುವರು, ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ "ಅದೊಂದು ದಿನದ ವೈಭವೀಕರಣ" ಮಾಡುವುದರ ಬದಲು ಅದೇ ಹಣವನ್ನು ಅವರಿಗೇಮುಂದಿನ ಆಪದ್ಧನ ಅಂತ ಸೇರಿಸಿಡಬಹುದಲ್ಲಾ?
ಜೀವನಕ್ಕೊಂದು ಸಲ ಆಗುವುದು ಮದುವೆ ಅದಕ್ಕೆ ಅಷ್ಟೂ ಖರ್ಚು ಮಾಡಿ ನಭೂತೋ ನ ಭವಿಷ್ಯತಿ ಅಂತ ಮಾಡಬೇಕು ಅಂತೀರಾ?
ನಿಮ್ಮ ಅನಿಸಿಕೆ ನೇರವಾಗಿರಲಿ
(ಚಿತ್ರಕ್ಕೂ ಚರ್ಚೆಗೂ ಸಂಭಂಧವಿಲ್ಲ)
ಪ್ರತಿಕ್ರಿಯೆ (12)