ಗಗನದ ಅಂಚಿನಿಂದ ಮಳೆಹನಿಯು ಬಿದ್ದಾಗ

ಮುಸುಕು ಸಂಜೆಯಲಿ ಕಾರ್ಮೋಡ ಕವಿದಾಗ..

ಅಗಲಿದ ನಿನ್ನ ನೆನಪಿನ ಸರೋವರದಲಿ ಮೀಯುವೇನು ನಾನು...

 

ಸಂವತ್ಸರದ ಮೊದಲು ನಾ ನಿನ್ನ ಕಂಡಾಗ,
ಮನೆ ಮನೆಯಾ ಅಂಗಳದಲಿ  ಜ್ಯೋತಿ, ದೀಪಗಳ ಸಾಲೆ..
ಆ ಶುಭದಿನದ ಬೆಳಕಿನ ಮುಹೂರ್ತದಲಿ ನನಗೆ ಸಿಕ್ಕ ಆ ರೂಪಸಿಯು ನೀನೇ..!!

ಬೆಳಕಿನ ಆಟದ  ಜೊತೆಗೆ ಋತುಗಳು ಉರಲಿತು,ಬಾಂಧವ್ಯ ಸರೋವರದಲಿ ದು:ಖ ಮಡುಗಟ್ಟಿತು.. 
ನಿನ್ನ ನೆನಪಿನ  ಸಂಪುಟದಲಿ  ಸಿಕ್ಕಿಹೋದ ನನಗೆಸಿಗುವುದೇ ಆ ಕೆನೆಹಾಲ ದಿನಗಳು,

ದೊರಕೀತೆ ನಾ ಬಯಸಿದ ಸಾರ್ಥಕ ಕ್ಷಣಗಳು...!!!!